ಹಾವೇರಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜನ ಓಡಾಡುವ ಕಾರಿಡಾರ್‌ಗಳಲ್ಲಿ ಬೆಡ್ ಹಾಕಿ ಮಲಗಿಸಿದ್ದೀರಿ. ಸರಿಯಾಗಿ ಗಾಳಿ, ಬೆಳಕು ಬರುವುದಿಲ್ಲ. ಪಾರ್ಕಿಂಗ್‌ಗೆ ಸೂಕ್ತ ಜಾಗವಿಲ್ಲ. ಸ್ವಚ್ಛತೆ ಇಲ್ಲ. ಜನರಿಗೆ ಸರಿಯಾಗಿ ಔಷಧ ಸಿಗುತ್ತಿಲ್ಲ. ಮುಖ್ಯಮಂತ್ರಿಯವರು, ನಾನು ಬಂದು ಸೂಚಿಸಿದ್ದರೂ ಈವರೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿಲ್ಲ. ಸರಿಯಾಗಿ ಔಷಧ ಪೂರೈಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ತಿಲಾಂಜಲಿ ಇಡಬೇಕು. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಸುಧಾರಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಸಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿವಿಧ ಇಲಾಖೆಗಳ ಪರಿಶೀಲನೆ ಮಾಡಿದರು. ಸೋಮವಾರವಷ್ಟೇ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದ ಸಚಿವ ಪಾಟೀಲ ಸಭೆಯಲ್ಲಿ ಅಧಿಕಾರಿಗಳ ಬೆವರಿಸಿಳಿಸದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಅವರೇ ಏನ್ರೀ ನಿಮ್ಮ ಆಸ್ಪತ್ರೆ ಸ್ಥಿತಿ ? ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚು ರೋಗಿಗಳು ಬಾರದ ಆಯುಷ್, ಯುನಾನಿ, ಆಯುರ್ವೇದ ವಿಭಾಗಗಳನ್ನು ಬೇರೆಡೆ ಸ್ಥಳಾಂತರಿಸಿ, ಅಲ್ಲಿ ಬೆಡ್‌ಗಳನ್ನು ಹಾಕಿ. ಗುತ್ತಿಗೆದಾರ ಹಂಗ, ನೀವು ಹಿಂಗ. ಹಿಂಗಾದ್ರ ಜನರ ಪರಿಸ್ಥಿತಿ ಹೆಂಗ ಎಂದು ಖಾರವಾಗಿ ಪ್ರಶ್ನಿಸಿದರು.
ಅಡಿಷನಲ್ ಡೈರೆಕ್ಟರ್ ಬಂದಿದ್ದಾರಾ ? ಏನ್ರೀ ಯಾಕೆ ಈ ಪೋಸ್ಟ್ ತಗೊಂಡ್ರಿ.. ಯಾಕೆ ಒಮ್ಮೆಯೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿಲ್ಲವೇ ಎಂದು ಕೇಳಿದರು. ಇನ್ನಾದರೂ ಎಲ್ಲ ಸೇರಿ ಜಿಲ್ಲಾಸ್ಪತ್ರೆ ಸುಧಾರಿಸಿ ಎಂದರು. ಎಂಆರ್‌ಐ ಸ್ಕಾೃನಿಂಗ್ ಯಂತ್ರದ ಕುರಿತು ವಿಚಾರಿಸಿದರು. ಈಗಾಗಲೇ ಅನುಮೋದನೆ ಸಿಕ್ಕಿದ್ದು, ಆರ್ಡರ್ ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.
ಎಲ್ಲರೂ ಸೇರಿ ಡೆಂೆ ತಡೆಗಟ್ಟಿ
ಜಿಲ್ಲೆಯಲ್ಲಿ ಡೆಂೆ ಕೇಸ್ ಹೆಚ್ಚಾಗುತ್ತಿವೆ. ಯಾವ್ಯಾವ ಕ್ರಮ ಕೈಗೊಂಡಿದ್ದೀರಿ. ಗೊಂದಲ ಏಕೆ ಸೃಷ್ಟಿಸುತ್ತಿದ್ದೀರಿ ಎಂದು ಸಚಿವರು ಪ್ರಶ್ನಿಸಿದರು. ಡೆಂೆ ತಡೆಗಟ್ಟುವುದು ಕೇವಲ ಆರೋಗ್ಯ ಇಲಾಖೆಯ ಕೆಲಸವಲ್ಲ. ಸ್ಥಳೀಯ ಸಂಸ್ಥೆಗಳೂ ಕೈಜೋಡಿಸಬೇಕು. ರಸ್ತೆ, ಚರಂಡಿ, ಊರಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು. ಉತ್ತರಿಸಿದ ಡಿಎಚ್‌ಒ ಡಾಜಯಾನಂದ, ಈವರೆಗೆ 465 ಡೆಂೆ ಕೇಸ್ ಪತ್ತೆಯಾಗಿದ್ದು, ಅದರಲ್ಲಿ 459 ಕೇಸ್ ಗುಣಮುಖರಾಗಿದ್ದು, 6 ಕೇಸ್ ಮಾತ್ರ ಚಿಕಿತ್ಸೆ ಮುಂದುವರೆದಿದೆ. ಬ್ಯಾಡಗಿ ತಾಲೂಕು ತಡಸ ಹಾಗೂ ಹಾವೇರಿ ತಾಲೂಕು ಸಂಗೂರ ಗ್ರಾಮದ ಇಬ್ಬರು ಬಾಲಕರು ಮೃತಪಟ್ಟಿರುವುದು ಡೆಂೆಯಿಂದ ಎಂದು ಖಚಿತಗೊಂಡಿದೆ. ಡೆಂೆ ತಡೆಗಾಗಿ ಪೊಲಿಯೋ ಮಾದರಿಯಲ್ಲಿ ಮನೆಮೆನೆ ಲಾರ್ವಾ ಸರ್ವೆ ನಡೆಸಲಾಗುತ್ತಿದೆ ಎಂದರು.
ಪರಿಹಾರವಿಲ್ಲ : ಡೆಂೆಯಿಂದ ಮೃತಪಟ್ಟ ತಡಸ ಗ್ರಾಮದ ಬಾಲಕನ ಕುಟುಂಬದವರು ಬಡವರಿದ್ದು ಅವರಿಗೆ ಪರಿಹಾರ ಕೊಡಿಸಿ ಎಂದು ಶಾಸಕ ಶಿವಣ್ಣನವರ ಕೋರಿಕೊಂಡರು. ಇದಕ್ಕೆ ಇಲಾಖೆಯಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಎಲ್ಲ ಆಸ್ಪತ್ರೆ, ಜಿಲ್ಲಾಸ್ಪತ್ರೆ ಸುಧಾರಣೆ ಆಗಲೇಬೇಕು; ಕೆಲಸ ಮಾಡದವರಿಗೆ ನೋಟಿಸ್ ಕೊಡಿ; ಆರೋಗ್ಯ ಇಲಾಖೆ ಅಧಿಕಾರಿಗಳ ಬೆವರಿಳಿಸಿದ ಸಚಿವ ಶಿವಾನಂದ ಪಾಟೀಲ
ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips
ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…