More

  ಮಕ್ಕಳ ಸಾಹಿತ್ಯ ಸಂಭ್ರಮಕ್ಕೆ ತೆರೆ

  ಹಾವೇರಿ: ಜಿಲ್ಲೆಯಾದ್ಯಂತ ಫೆ.6್ಪ್ರಾರಂಭಗೊಡಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಫೆ.4್ರಾಣೇಬೆನ್ನೂರಿನ ಇಟಗಿ ಗ್ರಾಮದಲ್ಲಿ ಮುಕ್ತಾಯಗೊಂಡಿತು. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್,ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಜಿಲ್ಲೆಯ 8ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಜರುಗಿತು.ಗ್ರಾಮೀಣ ವಾಚನಾಲಯಗಳನ್ನು ಸಬಲೀಕರಣಗೊಳಿಸುವುದು ಮತ್ತು ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸುವ ಗುರಿ ಹೊಂದಿದ ಸಾಹಿತ್ಯ ಸಂಭ್ರಮ ರಾಜ್ಯದ 7 ತಾಲೂಕುಗಳಲ್ಲಿ ಜರುಗುತ್ತಿದ್ದು,ಜಿಲ್ಲೆಯ ಎಂಟೂ ತಾಲೂಕುಗಳಲ್ಲಿ ಆಯೋಜಿಸಿರುವುದು ವಿಶೇಷವಾಗಿತ್ತು.
  6್9್ತರಗತಿಯ 80ಮಕ್ಕಳು ಹಾಗೂ 7 ಸಂಪನ್ಮೂಲ ವ್ಯಕ್ತಿಗಳು ಕವಿತೆ ಕಟ್ಟುವ,ನಾಟಕ ರಚಿಸುವ,ಹಾಡುಗಾರಿಕೆ ಹಾಗೂ ನಾನೂ ರಿಪೋರ್ಟರ್ ಎಂಬ ವಿನೂತನ ವರಿದಿಗಾರಿಕೆಯ ತರಬೇತಿ ನೀಡಲಾಯಿತು.ಪ್ರತಿ ತಾಲೂಕಿನ ಮುಕ್ತಾಯ ಸಮಾರಂಭದಲ್ಲಿ ಮಕ್ಕಳು ತಯಾರಿಸಿದ ಕಥೆ,ಪುಸ್ತಕ,ಕವನ,ಚಿತ್ರಗಳ ಪ್ರದರ್ಶನವನ್ನು ಆಯೋಜನೆ ಮಾಡಲಾಗಿತ್ತು.
  ಕೊನೆಯ ದಿನ ರಾಣೆಬೆನ್ನೂರಿನಲ್ಲಿ ಶಾಸಕ ಪ್ರಕಾಶ ಕೋಳಿವಾಡ ಮಕ್ಕಳೊಂದಿಗೆ ಸಂವಾದ ನಡೆಸಿದರು.ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ,ಡಯಟ್ ಪ್ರಾಚಾರ್ಯ ಗಿರೀಶ ಪದಕಿ,ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ,ಭಾರತ ಜ್ಞಾನ ವಿಜ್ಞಾನ ಸಮಿತಿಯ ಸಂಚಾಲಕಿ ರೇಣುಕಾ ಗುಡಿಮನಿ,ಕಾರ್ಯದರ್ಶಿ ಜಿ.ಓಂಕಾರಣ್ಣನವರ,ತಾಲೂಕು ಅಧ್ಯಕ್ಷ ಮಾಲತೇಶ ಕರ್ಜಗಿ,ಸದಸ್ಯರಾದ ಸೋಮನಾಥ ಡಿ. ಸತೀಶ ಬಾಗಣ್ಣನವರ,ಪೃಥ್ವಿರಾಜ ಬೆಟಗೇರಿ,ಈರಣ್ಣ ಬೆಳವಡಿ,ರಾಜೇಂದ್ರ ಹೆಗಡೆ,ಜ್ಯೋತಿ ಬಶೆಟ್ಟನವರ ಹಾಗೂ ಎನ್.ಮಣ್ಣಮ್ಮನವರ,ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts