ಹಾವೇರಿ: ಕರ್ಜಗಿ ರಸ್ತೆಯ ಕೇಂದ್ರೀಯ ವಿದ್ಯಾಲಯ ಸಿಬಿಎಸ್‌ಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದಿದೆ.
ವಿದ್ಯಾಲಯದ 34 ವಿದ್ಯಾರ್ಥಿಗಳಲ್ಲಿ ಎಲ್ಲರೂ ಪಾಸಾಗಿದ್ದು, ಇಬ್ಬರು ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ರಂಜನಾ ಎಂ.ಆರ್. (ಶೇ.93) ಪ್ರಥಮ ಸ್ಥಾನ, ಸಂಜಯ ಕಣವಿ (ಶೇ.90.6) ದ್ವಿತೀಯ ಸ್ಥಾನ ಮತ್ತು ಬನಶ್ರೀ ನೀರಲಗಿ (ಶೇ.88.8) ತೃತಿಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮವರ, ಪ್ರಾಂಶುಪಾಲ ಪಿ.ಶ್ರೀನಿವಾಸ ರಾಜು, ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
