ಪೆಟ್ರೋಲ್ ಬೆಲೆ ಏರಿಕೆ ಆದೇಶ ಹಿಂಪಡೆಯಲು ಜಿಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹ; ಜಿಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ

1 Min Read
ಪೆಟ್ರೋಲ್ ಬೆಲೆ ಏರಿಕೆ ಆದೇಶ ಹಿಂಪಡೆಯಲು ಜಿಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹ; ಜಿಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನೆ

ಹಾವೇರಿ: ರಾಜ್ಯ ಸರ್ಕಾರ ಈಕೂಡಲೇ ಜನವಿರೋಧಿಯಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಒತ್ತಾಯಿಸಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ತೈಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ತೈಲ ದರ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಪೂರೈಸುವ ಸಲುವಾಗಿ ಜನರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ. ಸರ್ಕಾರ ಈ ಧೋರಣೆಯನ್ನು ಖಂಡಿಸಲಾಗುವುದು ಎಂದರು.
ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಪರ ತಹಸೀಲ್ದಾರ್ ಅಮೃತಗೌಡ ಪಾಟೀಲ ಮೂಲಕ ಡಿಸಿ ಹಾಗೂ ಸಿಎಂಗೆ ಮನವಿ ಪತ್ರ ರವಾನಿಸಿದರು.
ರಾಜ್ಯ ಉಪಾಧ್ಯಕ್ಷ ಸಿದ್ದಬಸಪ್ಪ ಯಾದವ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಈರಣ್ಣ ನವಲಗುಂದ, ಜಿಲ್ಲಾ ಉಪಾಧ್ಯಕ್ಷ ಅಮಿರಾಜಾನ್ ಬೇಪಾರಿ, ಮೂಕಣ್ಣ ಪಡೆಪ್ಪನವರ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಕತ್ತಲಸಾಬ್ ಬಣಗಾರ, ಮಾರುತಿ ಮುಂಡರಗಿ, ಬಸನಗೌಡ ಸಿದ್ದಪ್ಪಗೌಡ, ವಿಠ್ಠಲ ಸುಣಗಾರ, ನಾಗರಾಜ ಅಜ್ಜನವರ, ಮುಕೇಶ ಅಗಸಿಬಾಗಿಲು, ಫಿರೋಜ್ ಪಠಾಣ, ಮಾಲತೇಶ ಬೇವಿನಹಿಂಡಿ, ರಮೇಶ ಮಾಕನೂರ, ಕರುಣ ಗೌಡರ, ಶಿವು ಕಡೂರು, ಮಹಮ್ಮದ್ ಹನೀಫ್ ಮುಲ್ಲಾ, ರಾಘವೇಂದ್ರ ಗಿರಿಯಪ್ಪನವರ, ಸುನೀಲ ಗುಡೇದ, ಇತರರು ಪಾಲ್ಗೊಂಡಿದ್ದರು.

See also  ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ ಮಳಿಗೆಗಳಿಗೆ ಪಾಲಿಕೆ ಬೀಗ
Share This Article