ಹಾವೇರಿ: ಜೀವನದಲ್ಲಿ ಹಣ, ಬಂಗಾರ, ವಜ್ರ, ಸಂಪತ್ತು ಗಳಿಸಿದರೆ ಅದು ನಮ್ಮ ಜತೆಗೆ ಬರುವುದಿಲ್ಲ. ನಮ್ಮ ಜತೆಗೆ ಬರುವುದು ವಿದ್ಯೆ, ದಾನ, ಧರ್ಮ, ನಮ್ಮ ಸಂಸ್ಕೃತಿ ಮಾತ್ರ. ಹಾಗಾಗಿ, ಸಂಪತ್ತಿಗೆ ಮರುಳಾಗದೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕೃತಿ ಕಲಿಸಿರಿ ಎಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ನಗರದ ನೀಲನಗೌಡ್ರ ಬಡಾವಣೆಯಲ್ಲಿ ಹಾವೇರಿ ತಾಲೂಕು ಗಂಗಾಮತ ಸಮಾಜ ನೌಕರರ ಸಂಘದ ವತಿಯಿಂದ ನಿರ್ಮಿಸಿರುವ ಗಂಗಾಪರಮೇಶ್ವರಿ ಗಣಪತಿ ಹಾಗೂ ಬನ್ನಿ ಮಹಾಂಕಾಳಿ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಿ ಅವರು ಮಾತನಾಡಿದರು. ದೇವರಲ್ಲಿ ಭಕ್ತಿ ಭಾವದಿಂದ ಗುರು ಹಿರಿಯರಲ್ಲಿ ಗೌರವದಿಂದ ಸಮಾಜದಲ್ಲಿ ಉತ್ತಮ ಸೇವಕನಂತೆ ನಾವು ನಡೆದುಕೊಳ್ಳಬೇಕು ಎಂದರು.
ಪ್ರಾಣ ಪ್ರತಿಷ್ಠಾಪನೆಗೂ ಮೊದಲು ಶುಕ್ರವಾರ ಮಹಿಳೆಯರ ಕುಂಭ ಮೇಳ, ಡೊಳ್ಳು ಕುಣಿತ, ಭಜನೆ ಮೂಲಕ ಮೂರ್ತಿ ಮೆರವಣಿಗೆ ನಡೆಯಿತು. ಶನಿವಾರ ಧಾನ್ಯದಿವಸ, ಭಾನುವಾರ ಬೆಳಗ್ಗೆ ಪ್ರತಿಷ್ಠಾಪನೆ ವೇಳೆ ಹೋಮ ಹವನ, ಪೂಜೆ ನಡೆಯಿತು. ನಂತರ ಕರ್ಜಗಿ ಗೌರಿ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮತ್ತು ನರಸೀಪುರ ಶಾಂತ ಬೀಷ್ಮ ಚೌಡಯ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ಸಮಾರಂಭದಲ್ಲಿ ಸಮಾಜದ ಪ್ರಮುಖರನ್ನು ಸನ್ಮಾನಿಸಲಾಯಿತು. ಸಂಜಯ ಸುಣಗಾರ, ಶಂಕರ ಸುತಾರ, ನಾಗಪ್ಪ ಶೇಷಗಿರಿ, ಆರ್.ಎನ್.ಕರ್ಜಗಿ, ಎಚ್.ಎಫ್.ದಂಡಿನ, ಮನೋಹರ ಬಾರ್ಕಿ, ಎಂ.ಬಿ.ಅಂಬಿಗೇರ, ಬಾಬು ಸುಣಗಾರ, ನಾಗರಾಜ, ಮಂಜುನಾಥ ಬೋವಿ, ಎಂ.ನಡುವಿನಮಠ, ಇತರರು ಇದ್ದರು.
ವಿದ್ಯೆ, ದಾನ, ಧರ್ಮ ಶಾಶ್ವತವಾದದ್ದು; ಗಂಗಾಪರಮೇಶ್ವರಿ ದೇಗುಲ ಉದ್ಘಾಟನೆ ಸಮಾರಂಭದಲ್ಲಿ ಶ್ರೀ ಶಾಂತ ಭೀಷ್ಮ ಶ್ರೀ ಹೇಳಿಕೆ
You Might Also Like
ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips
ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…
ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…
ಬೆಂಗಳೂರು: ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…
ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower
ಬೆಂಗಳೂರು: ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…