6,429 ರೇಷನ್ ಕಾರ್ಡ್ ಸಸ್ಪೆಂಡ್ ! ಆರು ತಿಂಗಳು ಪಡಿತರ ಪಡೆಯದವರಿಗೆ ಸರ್ಕಾರ ಶಾಕ್; ಸಕಾರಣ ಉಳ್ಳವರಿಗೆ ಮಾತ್ರ ಹಿಂಪಡೆಯಲು ಅವಕಾಶ

ಕೇಶವಮೂರ್ತಿ ವಿ.ಬಿ. ಹಾವೇರಿ
ಸತತವಾಗಿ ಆರು ತಿಂಗಳ ಕಾಲ ಪಡಿತರ ಪಡೆಯದ ರೇಷನ್ ಕಾರ್ಡುಗಳನ್ನು ಅಮಾನತು ಮಾಡುವ ಕಾರ್ಯ ಆರಂಭವಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ಇಂತಹ 6,429 ರೇಶನ್ ಕಾರ್ಡ್‌ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಸ್ಪೆಂಡ್ ಮಾಡಿದೆ.
ರಾಜ್ಯದಲ್ಲಿ ಅನರ್ಹ ರೇಷನ್ ಕಾರ್ಡುಗಳನ್ನು ಪತ್ತೆ ಹಚ್ಚಲು ಇಲಾಖೆ ನಾನಾ ಕಸರತ್ತು ಮಾಡುತ್ತಿದ್ದು, ಈ ಮಾರ್ಗದ ಮೂಲಕವೂ ಉಳ್ಳವರು ಹೊಂದಿರುವ ರೇಷನ್ ಕಾರ್ಡುಗಳನ್ನು ಅಮಾನತುಗೊಳಿಸಲು ಮುಂದಾಗಿದೆ. ಉಳ್ಳವರು ರೇಷನ್ ಪಡೆಯದೇ ಕಾರ್ಡು ಮಾತ್ರ ಹೊಂದಿರುತ್ತಾರೆ ಎಂಬ ಸಂದೇಹದಿಂದ ಇಲಾಖೆ ಈ ಕ್ರಮ ಜರುಗಿಸುತ್ತಿದೆ.
ಆದರೆ, ಕೆಲವರು ಅನಾರೋಗ್ಯ, ತುರ್ತು ಪ್ರವಾಸ, ಕಚೇರಿ ಕಾರ್ಯ, ಇತರ ಕಾರಣಗಳಿಂದಲೂ ಆರು ತಿಂಗಳ ಕಾಲ ರೇಷನ್ ಪಡೆಯದೇ ಇರುವ ಉದಾಹರಣೆಗಳೂ ಇವೆ. ಇಂಥವರ ಸಂಖ್ಯೆ ವಿರಳವಾಗಿದೆ. ಅಂಥವರು ತಮ್ಮ ತಹಸೀಲ್ದಾರ್ ಬಳಿ ಲಿಖಿತವಾಗಿ ಪತ್ರ ಬರೆದು, ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು. ಬಳಿಕ ಆಹಾರ ಇಲಾಖೆ ಪರಿಶೀಲಿಸಿ ಅರ್ಹರಿದ್ದರೆ ಮಾತ್ರ ಅಮಾನತು ಆದೇಶ ಹಿಂಪಡೆದು ಕಾರ್ಡ್ ಚಾಲ್ತಿ ಮಾಡಲಾಗುತ್ತದೆ ಎಂದು ಫುಡ್ ಡಿಡಿ ರಮೇಶ ಎಂ.ಎಸ್. ‘ವಿಜಯವಾಣಿ’ಗೆ ತಿಳಿಸಿದ್ದಾರೆ.
10 ಸಾವಿರ ಹೊಸ ಅರ್ಜಿ
ಪಡಿತರ ಚೀಟಿಗಾಗಿ ಈ ಬಾರಿ 10,828 ಅರ್ಜಿಗಳು ಬಂದಿವೆ. ಇದರಲ್ಲಿ 5,226 ಅರ್ಜಿಗಳು ಸ್ವೀಕೃತಗೊಂಡಿದ್ದು, 569 ಅರ್ಜಿಗಳು ತಿರಸ್ಕೃತಗೊಂಡಿವೆ. 5,795 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಉಳಿದವು ಬಾಕಿ ಇವೆ ಎಂದು ಡಿಡಿ ರಮೇಶ ಎಂ.ಎಸ್. ತಿಳಿಸಿದ್ದಾರೆ.

  • ಕೋಟ್:
    ಕೇಂದ್ರ ಕಚೇರಿಯ ಪಟ್ಟಿಯ ಅನ್ವಯ ಆರು ತಿಂಗಳು ರೇಷನ್ ಪಡೆಯವರ ಕಾರ್ಡ್ ಅಮಾನತುಗೊಳಿಸಲಾಗಿದೆ. ಇದರಲ್ಲಿ ಅರ್ಹರು ಇದ್ದಲ್ಲಿ ಮಾತ್ರ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಖಚಿತಗೊಂಡಲ್ಲಿ ಮಾತ್ರ ಅಮಾನತು ರದ್ದುಪಡಿಸಲಾಗುವುದು.
    > ರಮೇಶ ಎಂ.ಎಸ್. ಉಪನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…