More

  ಕನವಳ್ಳಿಯ ಸಾನಿಯಾ ನಿವಾಸಕ್ಕೆ ಡಿಡಿಪಿಯು ತಂಡ ಭೇಟಿ; ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ರ್‍ಯಾಂಕ್ ವಿಜೇತೆಗೆ ಸನ್ಮಾನ

  ಹಾವೇರಿ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿರುವ ತಾಲೂಕಿನ ಕನವಳ್ಳಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿನಿ ಸಾನಿಯಾ ಕರಜಗಿ ಅವರ ನಿವಾಸಕ್ಕೆ ಶನಿವಾರ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ ಹಾಗೂ ತಂಡ ಭೇಟಿ ನೀಡಿ, ಆಕೆಯನ್ನು ಸನ್ಮಾನಿಸಿತು.
  ಮಾರ್ಚ್‌ನಲ್ಲಿ ನಡೆದ ಪರೀಕ್ಷೆಯಲ್ಲಿ 600ಕ್ಕೆ 592 ಅಂಕ ಪಡೆಯುವ ಮೂಲಕ ಸಾನಿಯಾ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕುಟುಂಬದ ಸಂಸ್ಕಾರ ಹಾಗೂ ಕಾಲೇಜಿನ ವಾತಾವರಣ ಮೇಳೈಸಿದಾಗ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಪ್ರಕಟಗೊಳ್ಳುತ್ತದೆ. ಆಗ ಸಾಧನೆಯ ಹಂತ ತಲುಪಿ ಜೀವನದಲ್ಲಿ ಯಶಸ್ಸನ್ನು ಪಡೆಯಬಹುದಾಗಿದೆ ಎಂದು ಡಾ.ಉಮೇಶಪ್ಪ ಅಭಿಪ್ರಾಯಪಟ್ಟರು.
  ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಹಲವು ಕೊರತೆಗಳ ಮಧ್ಯದಲ್ಲೂ ಏಕಾಗ್ರತೆ ಹಾಗೂ ಸಾಧನೆಯ ಛಲದಿಂದ ಸಾನಿಯಾ ಸಾಧನೆಗೈದಿದ್ದಾರೆ. ಇತರ ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದಾರೆ ಎಂದರು.
  ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ನಿಸ್ಸೀಮಗೌಡರ, ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ಆನಂದ ಮುದಕಮ್ಮನವರ, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಬ್ಯಾಡಗಿ, ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರಕಾಶ ಬಾರಕೇರ, ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ಎಚ್.ಡಿ.ಗಂಟೇರ, ಪ್ರಾಚಾರ್ಯರಾದ ಜಿ.ಪಿ.ಪೂಜಾರ, ಎಂ.ಮಕಾನದಾರ ಹಾಗೂ ಕಾಲೇಜಿನ ಸಿಬ್ಬಂದಿ ಮತ್ತು ಸಾನಿಯಾಳ ಕುಟುಂಬದವರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts