ಹಾವೇರಿ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ಶಾಲಾ ವಿಭಾಗ:
ಬ್ಯಾಡಗಿ ತಾಲೂಕು ಗುಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಯಲ್ಲಪ್ಪ ಭರಮಪ್ಪ ಹೊಸಳ್ಳಿ, ಶಿಗ್ಗಾಂವಿ ತಾಲೂಕು ಮುಗಳಿಕಟ್ಟಿ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಸಹ ಶಿಕ್ಷಕ ಬಸವರಾಜ ಬಸವನಾಳ, ಹಿರೇಕೆರೂರ ತಾಲೂಕು ಪರ್ವತಸಿದ್ದಗೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಕುಮಾರಸ್ವಾಮಿ ಕಬ್ಬಿಣಕಂತಿಮಠ, ಹಾನಗಲ್ಲ ತಾಲೂಕು ತುಮರಿಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಘವೇಂದ್ರ ಕಲಾಲ, ಹಾವೇರಿ ತಾಲೂಕು ನೆಲೊಗಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸವಿತಾ ಎಚ್.ಜೆ., ಸವಣೂರ ತಾಲೂಕು ಚಳ್ಯಾಳ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಕವಿತಾ ಎನ್.ಅಣ್ಣಿಗೇರಿ ಹಾಗೂ ರಾಣೆಬೆನ್ನೂರ ತಾಲೂಕು ಮಾಕನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ವಿಜಯ ವಿಷ್ಣಪ್ಪ ಬಂಗಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ವಿಭಾಗ:
ಬ್ಯಾಡಗಿ ತಾಲೂಕು ಘಾಳಪೂಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಅಶೋಕ ಎಚ್.ಮೂಡಿ, ಹಾವೇರಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ-1ರ ಸಹ ಶಿಕ್ಷಕ ಎಸ್.ಎ.ಹೊನ್ನಾಳಿ, ಹಾನಗಲ್ಲ ತಾಲೂಕು ಬಾಳಂಬೀಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಎಫ್.ಪಿ.ಚಿಕ್ಕಜ್ಜನವರ, ಸವಣೂರ ತಾಲೂಕು ಫಕೀರನಂದಿಹಳ್ಳಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮುತ್ತಪ್ಪ ಸಂಗಪ್ಪ ಅಕ್ಕಿ, ಶಿಗ್ಗಾಂವಿ ತಾಲೂಕು ಇಬ್ರಾಹಿಂಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಮಲ್ಲಿಕಾರ್ಜುನಗೌಡ ವಿ.ಪಾಟೀಲ, ರಾಣೆಬೆನ್ನೂರ ತಾಲೂಕು ದೇವರಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಸಾವಿತ್ರಿ ಎಚ್.ಬಿ ಹಾಗೂ ಹಿರೇಕೆರೂರ ತಾಲೂಕು ಚಿಕ್ಕೊಣತಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಸಹ ಶಿಕ್ಷಕ ಪ್ರಕಾಶ ಈ. ಜೋಗೊಂಡರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢ ಶಾಲಾ ವಿಭಾಗ:
ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಶ್ರೀ ತೋಟದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ದತ್ತಾತ್ತೇಯ ಜೋಶಿ, ಹಾವೇರಿ ತಾಲೂಕು ಯಲಗಚ್ಚ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಅಯ್ಯಪ್ಪ ಗುಡ್ಡಳ್ಳಿ, ಹಾನಗಲ್ಲ ತಾಲೂಕು ಕುಸನೂರ ಶ್ರೀ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆ ಸಹ ಶಿಕ್ಷಕ ತಾರಕೇಶ ರುದ್ರಯ್ಯ ಮಠದ, ಹಿರೇಕೆರೂರ ತಾಲೂಕು ಕಡೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಷಣ್ಮುಖ ಹುಳಬುತ್ತಿ, ರಾಣೆಬೆನ್ನೂರ ತಾಲೂಕು ಮಾಕನೂರ ಮಾರ್ಕಂಡೇಶ್ವರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ನಾಗರಾಜ ಮತ್ತೂರ, ಸವಣೂರ ತಾಲೂಕು ಕಳಸೂರಿನ ಎಚ್.ಎಸ್.ಪಾಟೀಲ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಸಿ.ಟಿ.ಪೂಜಾರ ಹಾಗೂ ಶಿಗ್ಗಾಂವಿ ಸರ್ಕಾರಿ ಉರ್ದು ಪ್ರೌಢಶಾಲೆ ಸಹ ಶಿಕ್ಷಕ ರಾಘವೇಂದ್ರ ಅರಶನಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 21 ಶಿಕ್ಷಕರು ಆಯ್ಕೆ; ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ
You Might Also Like
ನಿದ್ರೆಯಲ್ಲಿದ್ದಾಗ ಎದೆ ಮೇಲೆ ಕೂತು ಯಾರೋ ಕತ್ತು ಹಿಸುಕಿದಂತೆ ಅನುಭವ ಆಗಿದೆಯೇ? ಕಾರಣವೇನು? ಇಲ್ಲಿದೆ ಮಾಹಿತಿ… Sleep Paralysis
Sleep Paralysis: ರಾತ್ರಿ ಮಲಗಿರುವಾಗ ದುಃಸ್ವಪ್ನಗಳು ಬರುವುದು ಸಾಮಾನ್ಯ. ಕೆಲವೊಮ್ಮೆ ಯಾರೋ ನಿಮ್ಮ ಎದೆಯ ಮೇಲೆ…
ಹೊಸ ಚಿಕನ್ ರೆಸಿಪಿ ಟ್ರೈ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ರುಚಿಕರ ನೇಪಾಳಿ ಸ್ಟೈಲ್ ಚಿಕನ್ ಕರಿ! Sunday Special
Sunday Special : ಸಾಮಾನ್ಯವಾಗಿ ರಜೆಯ ದಿನಗಳಲ್ಲಿ ಎಲ್ಲರೂ ರುಚಿಕರವಾದ ಊಟ ಮಾಡಿದ ಬಳಿಕ ವಿಶ್ರಾಂತಿ…