ಹಾವೇರಿ: ಜಿಲ್ಲೆಯ ಅಂತ್ಯೋದಯ ಅನ್ನ ಪಡಿತರ ಚೀಟಿ, ಪಿಎಚ್‌ಎಚ್ (ಬಿಪಿಎಲ್) ಪಡಿತರ ಚೀಟಿದಾರರಿಗೆ ಜುಲೈ-2024ರ ಪಡಿತರ ಆಹಾರಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.
ಅಂತ್ಯೋದಯ ಪಡಿತರ ಚೀಟಿ ಹೊಂದಿದ ಪ್ರತಿ ಪಡಿತರ ಚೀಟಿಗೆ ಉಚಿತವಾಗಿ 35 ಕೆ.ಜಿ ಆಹಾರ ಧಾನ್ಯಗಳಲ್ಲಿ 14 ಕೆ.ಜಿ ಜೋಳ ಹಾಗೂ 21 ಕೆಜಿ ಅಕ್ಕಿ ಬಿಡುಗಡೆ ಮಾಡಲಾಗಿದೆ. ಪಿಎಚ್‌ಎಚ್(ಬಿಪಿಎಲ್) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ ಎನ್‌ಎಫ್‌ಎಸ್‌ಎ ಯೋಜನೆಯಡಿ ಉಚಿತವಾಗಿ 3 ಕೆ.ಜಿ ಸಾರವರ್ಧಿತ ಅಕ್ಕಿ ಹಾಗೂ 2 ಕೆ.ಜಿ ಜೋಳ ವಿತರಿಸಲಾಗುವುದು.
ಅಂತಾರಾಜ್ಯ/ಅಂತರ್ ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನಾಯಬೆಲೆ ಅಂಗಡಿಯಲ್ಲಿ ಪಡಿತರ ವಸ್ತುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
ಜುಲೈನಲ್ಲಿ ನ್ಯಾಯಬೆಲೆ ಅಂಗಡಿಕಾರರು, ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನ್ಯಾಯಬೆಲೆ ಅಂಗಡಿಯನ್ನು ತೆರೆದು ಪಡಿತರ ವಸ್ತುಗಳನ್ನು ವಿತರಿಸುತ್ತಾರೆ. ಜಿಲ್ಲೆಯ ಎಲ್ಲ ಪಡಿತರ ಚೀಟಿದಾರರು ಮೇಲಿನಂತೆ ಪಡಿತರ ಆಹಾರಧಾನ್ಯವನ್ನು ಪಡೆಯಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ ಪಡಿತರ ಆಹಾರ ಧಾನ್ಯ ಬಿಡುಗಡೆ; ಅಕ್ಕಿ ಜತೆಗೆ ಜೋಳವೂ ಸೇರ್ಪಡೆ
You Might Also Like
ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಏನಾಗುತ್ತೆ ಗೊತ್ತಾ?
ನವದೆಹಲಿ: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಅಲೋವೆರಾವು ಹಲವಾರು…
ಚಹಾ ಕುಡಿಯುವುದರಿಂದ ಹೆಚ್ಚುತ್ತದೆ ಕೊಲೆಸ್ಟ್ರಾಲ್! ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ಟೀ ಕುಡಿಯುವುದು ಒಳ್ಳೆಯದಲ್ಲ…
ಬೆಂಗಳೂರು: ಬೆಳಿಗ್ಗೆ ಚಹಾದೊಂದಿಗೆ ದಿನ ಪ್ರಾರಂಭಿಸುವ ಅನೇಕ ಜನರಿದ್ದಾರೆ. ಸ್ವಲ್ಪ ತಲೆನೋವು ಬಂದರೂ ಟೈಂ ಪಾಸ್…
ನಿಮ್ಮ ಅಂಗೈನಲ್ಲಿ X ಚಿಹ್ನೆ ಇದೆಯಾ ನೋಡಿ… ಇದರ ಅರ್ಥ ತಿಳಿದ್ರೆ ನೀವು ಬೆರಗಾಗೋದು ಖಚಿತ!
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…