More

  ಕಾಂಗ್ರೆಸ್‌ನಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ; ನಾನು ಶಿಗ್ಗಾಂವಿ ಟಿಕೆಟ್ ಆಕಾಂಕ್ಷಿಯಲ್ಲ; ಕೈ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರಾಮರ್ಶೆ

  ಹಾವೇರಿ: ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿಲ್ಲ. ಹೊಂದಾಣಿಕೆ ರಾಜಕಾರಣ ನಡೆದಿದ್ದರೆ ನನಗೆ 6 ಲಕ್ಷ 60 ಸಾವಿರ ಮತಗಳು ಬರುತ್ತಿರಲಿಲ್ಲ. ಕಳೆದ ಚುನಾವಣೆಗಿಂತ 1.20 ಲಕ್ಷ ಮತಗಳನ್ನು ಹೆಚ್ಚು ಪಡೆದಿದ್ದೇವೆ. ನಗರ ಪ್ರದೇಶದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಸಿಕ್ಕಿದೆ. ಇದು ಬಿಜೆಪಿಗೆ ಪ್ಲಸ್ ಆಯಿತು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರಾಮರ್ಶೆಯ ಮಾತುಗಳನ್ನಾಡಿದರು.
  ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಹರದಲ್ಲಿ ಮೋದಿ ಅಲೆಗಿಂತ ಬಿಜೆಪಿ ಅಲೆಯಿತ್ತು. ಶಹರದ ಟ್ರೆಂಡ್‌ನಿಂದ ಸೋಲಾಗಿದೆ. ನಮ್ಮ ಸೋಲು ದೊಡ್ಡದಲ್ಲ, ಅಂತರ ಕಡಿಮೆಯಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ಚುನಾವಣೆಯಲ್ಲಿ ರಣತಂತ್ರಗಳು, ಕುತಂತ್ರಗಳು ನಡೆಯುತ್ತವೆ. ಆದರೂ ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿರುವ ನಮ್ಮ ನಾಯಕರಿಗೆ, ಜನತೆಗೆ ಧನ್ಯವಾದ ಅರ್ಪಿಸುವೆ ಎಂದರು.
  ರಾಣೆಬೆನ್ನೂರ ಕ್ಷೇತ್ರದಲ್ಲಿ ಶಾಸಕ ಪ್ರಕಾಶ ಕೋಳಿವಾಡರು ತಾವು ಪಡೆದ ಮತಕ್ಕಿಂತ ಹೆಚ್ಚು ಮತ ನನಗೆ ಬಂದಿವೆ. ನನ್ನ ತವರು ಶಿರಹಟ್ಟಿ ಕ್ಷೇತ್ರದಲ್ಲಿ 7 ಸಾವಿರ ಮತಗಳು ಲೀಡ್ ಆಗಿವೆ. ರಾಣೆಬೆನ್ನೂರ, ಹಾವೇರಿ, ಗದಗ, ಬ್ಯಾಡಗಿ, ಇತರ ಶಹರಗಳಲ್ಲಿ ಬಿಜೆಪಿಗೆ ಲೀಡ್ ಆಗಿದೆ. ಗದಗ ಕ್ಷೇತ್ರದಲ್ಲಿ 16 ಸಾವಿರ ಲೀಡ್ ಆಗಿದೆ. ಆ ಅಂತರ ನಮಗೆ ಮುರಿಯಲು ಆಗಲಿಲ್ಲ. ಅದರಿಂದ ಕೆಲ ಮತಗಳು ಕಡಿಮೆಯಾದವು ಎಂದು ವಿಶ್ಲೇಷಿಸಿದರು.

  ಸೋಲಿಗೆ ಎಚ್.ಕೆ.ಪಾಟೀಲರು ಕಾರಣರಲ್ಲ
  ಗದಗನಲ್ಲಿ ಸರಿಯಾಗಿ ಪ್ರಚಾರ ಆಗಲಿಲ್ಲ. ಪ್ರಭಾವಿ ಸಚಿವ ಎಚ್.ಕೆ.ಪಾಟೀಲರ ಕ್ಷೇತ್ರದಲ್ಲೇ ಬಿಜೆಪಿ 16 ಸಾವಿರ ಹೆಚ್ಚಿನ ಮತ ಪಡೆದಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗಡ್ಡದೇವರಮಠ, ಎಚ್.ಕೆ.ಪಾಟೀಲ ಸಾಹೇಬರು ಸ್ಟಾರ್ ಕ್ಯಾಂಪೇನರ್ ಆಗಿದ್ದರೂ ಸಹ ಗದಗ ಹಾಗೂ ಹಾವೇರಿ ಜಿಲ್ಲೆಯಲ್ಲಿ ಪ್ರಚಾರ ಮಾಡಿದ್ದಾರೆ. ಕಳೆದ ಬಾರಿ ಡಿ.ಆರ್.ಪಾಟೀಲ ಸಾಹೇಬರು ಸ್ಪಧಿಸಿದ್ದಾಗಲೂ ಗದಗನಿಂದ ನಮಗೆ ಕಡಿಮೆ ಮತ ಬಂದಿದ್ದವು. ಸೋಲಿಗೆ ಅವರು ಕಾರಣರಲ್ಲ. ಗೆದ್ದಾಗ ನಾವೇ ಕಾರಣ ಎನ್ನುವುದು, ಸೋತಾಗ ಒಬ್ಬರ ಮೇಲೆ ಆರೋಪ ಮಾಡುವುದು ಸಹಜ. ಅವರು ಚೆನ್ನಾಗಿ ಕೆಲಸ ಮಾಡಿದ್ದರಿಂದಲೇ ಇಷ್ಟು ಮತಗಳು ಬಂದಿವೆ ಎಂದು ಸ್ಪಷ್ಟನೆ ನೀಡಿದರು.

  See also  ಜಗನ್ ಮೋಹನ್ ರೆಡ್ಡಿ ಸಹೋದರಿ ವೈಎಸ್ ಶರ್ಮಿಳಾ ಕಾಂಗ್ರೆಸ್ ಸೇರ್ಪಡೆ

  ನಾನು ಶಿಗ್ಗಾಂವಿ ಟಿಕೆಟ್ ಆಕಾಂಕ್ಷಿಯಲ್ಲ
  ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಗಡ್ಡದೇವರಮಠ, ಶಿಗ್ಗಾಂವಿ ಕ್ಷೇತ್ರಕ್ಕೆ ನನ್ನ ಹೆಸರು ಚರ್ಚೆಯಾಗುತ್ತಿರುವುದು ಮಾಧ್ಯಮಗಳ ಮೂಲಕ ತಿಳಿದಿದೆ. ನಾನು ಶಿಗ್ಗಾಂವಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ. ಶಿಗ್ಗಾಂವಿಯಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಅರ್ಹ ಅಭ್ಯರ್ಥಿಗಳು ಶಿಗ್ಗಾಂವಿ ಭಾಗದಲ್ಲಿದ್ದಾರೆ. ಸೋತಾಗಲೂ ಲೋಕಸಭಾ ಚುನಾವಣೆಯಲ್ಲಿ ಶಿಗ್ಗಾಂವಿ ಲೀಡರ್‌ಗಳು ಕಾಂಗ್ರೆಸ್‌ಗೆ ಲೀಡ್ ತಂದುಕೊಟ್ಟಿದ್ದಾರೆ ಎಂದರು.


  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts