ಹಾವೇರಿ: ಇಲ್ಲಿನ ಹಾನಗಲ್ಲ ರಸ್ತೆಯ ಮಲ್ಲಾಡದ ಆಸ್ಪತ್ರೆ ಬಳಿ ಪಾರ್ಕಿಂಗ್ ಮಾಡಿದ್ದ ಕಾರು ಕದ್ದಿದ್ದ ಆರೋಪಿಯನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿ, ಕಾರು ವಶಪಡಿಸಿಕೊಂಡಿದ್ದಾರೆ.
ಹರಪನಹಳ್ಳಿ ತಾಲೂಕು ವಡ್ಡಿನಹಳ್ಳಿ ಗ್ರಾಮದ ನಿಂಗರಾಜ ತುಂಬಿಗೇರಿ ಬಂಧಿತ ಆರೋಪಿ.
ನಿಂಗರಾಜ ಇಲ್ಲಿನ ಮಲ್ಲಾಡದ ಆಸ್ಪತ್ರೆ ಬಳಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ. ಸಾಲ ಹೆಚ್ಚಾಗಿದೆ ಎಂದು ಹೇಳಿ ವಾರದ ಹಿಂದೆ ಊರಿಗೆ ಹೋಗಿದ್ದ. ಕಳೆದ ವಾರ ರಾತ್ರಿ ಆಸ್ಪತ್ರೆ ಬಳಿ ಬಂದು, ಕೀಲಿ ಇಡುವ ಜಾಗದಿಂದ ಕೀಲಿ ತೆಗೆದುಕೊಂಡು ಕಾರು ಕದ್ದು ಪರಾರಿಯಾಗಿದ್ದ. ಕಾರ್ ಕಳ್ಳತನವಾಗಿದ್ದ ಕುರಿತು ಡಾ.ಜಿ.ಮಲ್ಲಾಡದ ಅವರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.