More

  ಜಿಲ್ಲೆಯಲ್ಲಿ ಭಾರತ ಸಂಕಲ್ಪ ಯಾತ್ರೆ 24ರಿಂದ; ಕೇಂದ್ರ ಕುಟುಂಬ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ರಿಚಾ ಖೋಡಾ ಹೇಳಿಕೆ

  ಹಾವೇರಿ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಲು ನ.24ರಿಂದ ಜಿಲ್ಲೆಯಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಹಮ್ಮಿಕೊಳ್ಳಲಾಗಿದೆ. ನ.24ರಿಂದ ಜನವರಿ 18, 2024ರವರೆಗೆ ಜಿಲ್ಲೆಯ 223 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾತ್ರೆ ಸಂಚರಿಸಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ರಿಚಾ ಖೋಡಾ ತಿಳಿಸಿದರು.
  ನಗರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಕೇಂದ್ರ ಸರ್ಕಾರದ ಯೋಜನೆಗಳು ಅರ್ಹ ಫಲಾಭವಿಗಳಿಗೆ ತಲುಪಬೇಕು. ಈ ಯೋಜನೆಗಳಿಂದ ಸಾರ್ವಜನಿಕರ ಬದುಕಿನಲ್ಲಾದ ಬದಲಾವಣೆ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲೆಯ ಬ್ಯಾಂಕರ್ಸ್‌ಗಳಿಗೆ ತಿಳಿಸಿದರು.
  ಎರಡು ವಾಹನಗಳು ಜಿಲ್ಲೆಯ ಜಿಲ್ಲೆಯಾದ್ಯಂತ ಸಂಚರಿಸಲಿವೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಚಲನಚಿತ್ರ ಪ್ರದರ್ಶನ, ಫಲಾನುಭವಿಗಳ ಅನಸಿಕೆಯನ್ನು ಮತ್ತು ಯೋಜನೆಗಳಿಂದ ಪ್ರಗತಿ ಹೊಂದಿದವರ ಅನಿಸಿಕೆಗಳನ್ನು ಸಂಗ್ರಹಿಸಲಿವೆ. ಜಿಲ್ಲೆಯ ಅಗ್ರಣೀಯ ಬ್ಯಾಂಕ್ ಮತ್ತು ಇತರ ಬ್ಯಾಂಕಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
  ಅಗ್ರಣೀಯ ಶಾಖೆಯ ವ್ವವಸ್ಥಾಪಕ ಅಣ್ಣಯ್ಯ ಆರ್. ಮಾತನಾಡಿ, ನ.24ರಂದು ಶಿಗ್ಗಾಂವಿ ತಾಲೂಕು ಹನುಮರಹಳ್ಳಿ ಹಾಗೂ ಸವಣೂರ ತಾಲೂಕು ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿಯಿಂದ ಕಾರ್ಯಕ್ರಮ ಆರಂಭವಾಗಲಿದೆ. ಈ ಕಾರ್ಯಕ್ರಮಕ್ಕೆ ನಿಯೋಜಿತ ಕ್ಲಸ್ಟರ್ ಹಾಗೂ ಬ್ಲಾಕ್ ಮಟ್ಟದ ನೋಡಲ್ ಅಧಿಕಾರಿಗಳು ಸೇರಿದಂತೆ ಎಲ್ಲರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
  ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಭಾಗವತ್, ನಬಾರ್ಡ ಡಿಡಿಎಂ ಅಧಿಕಾರಿ ರಂಗನಾಥ, ಆಕಾಶವಾಣಿ ಭದ್ರಾವತಿಯ ವಾಹನ ನೋಡಲ್ ಅಧಿಕಾರಿ ಎಸ್.ಆರ್.ಭಟ್, ಎಡಿಜಿಯ ವಾಹನ ನೋಡಲ್ ಅಧಿಕಾರಿ ಜಿ.ರವೀಂದ್ರ, ಎನ್.ಐ.ಸಿ.ಅಧಿಕಾರಿ ಬಿ.ಬಿ.ಹೆಗಡೆ, ಅಂಚೆ ಅಧೀಕ್ಷಕ ಬಿ.ನಾರಾಯಣ, ಹುಬ್ಬಳ್ಳಿ ಎಲ್‌ಪಿಜಿ ಹಿರಿಯ ಮಾರ್ಕೆಟಿಂಗ್ ಅಧಿಕಾರಿ ಕರಣಕುಮಾರ, ಇತರರು ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts