More

  ಭಾರತದಲ್ಲಿ ನಡೆದದ್ದು ಭಕ್ತಿಯ ಚಳವಳಿ; ಹಾವೇರಿ ಅಶ್ವಿನಿ ನಗರ ಶಿರಡಿ ಸಾಯಿಬಾಬಾ ದೇಗುಲ ಲೋಕಾರ್ಪಣೆ ಸಮಾರಂಭದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ

  ಹಾವೇರಿ: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ನೆಲ, ಜಲ, ಹಣಕ್ಕಾಗಿ ಅನೇಕ ಚಳವಳಿಗಳು ನಡೆದು ಹೋಗಿವೆ. ಆದರೆ, ಭಕ್ತಿಯ ಚಳವಳಿ ನಡೆದದ್ದು ಭಾರತದಲ್ಲಿ ಮಾತ್ರ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
  ಇಲ್ಲಿನ ಅಶ್ವಿನಿ ನಗರ ಎರಡನೇ ಕ್ರಾಸ್‌ನ ಶ್ರೀ ಶಿರಡಿ ಸಾಯಿಬಾಬಾರ ಅಮೃತ ಶಿಲಾಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿರಡಿ ಸಾಯಿಬಾಬಾರಂಥ ಅನೇಕ ದಾರ್ಶನಿಕರು ದೇಶಕ್ಕೆ ಅಗತ್ಯವಿರುವ ಚಾರಿತ್ರೃ, ಸಮನ್ವಯತೆ, ಚೈತನ್ಯ ತುಂಬುವ ಮೂಲಕ ದೇಶದಲ್ಲಿ ಭಕ್ತಿಯ ಚಳವಳಿಯನ್ನೇ ಕೈಗೊಂಡರು ಎಂದರು.
  ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ಸಂತರ ನಾಡು, ಶಿವಶರಣರ ಬೀಡು. ಕನಕದಾಸರು, ಸರ್ವಜ್ಞರು, ಶಿಶುನಾಳ ಷರೀಫರಂಥ ಮಹಾನ್ ದಾರ್ಶನಿಕರು ಬದುಕಿದ ನಾಡಿದು. ಧರ್ಮದ ಚೌಕಟ್ಟು ಮೀರಿ ಭಾವೈಕ್ಯತೆಯ ಸಂದೇಶ ಸಾರಿರುವ ಮಣ್ಣು ಇದು. ಇಂತಹ ನಾಡಲ್ಲಿ ಸುಂದರವಾದ ದೇಗುಲ ನಿರ್ಮಿಸಿ, ಅದರಲ್ಲಿ ಅತ್ಯಾಕರ್ಷಕವಾದ ಸಾಯಿಬಾಬಾರ ಮೂರ್ತಿ ಪ್ರತಿಷ್ಠಾಪಿಸಿದ ಟ್ರಸ್ಟ್‌ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
  ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಾರತ ಧಾರ್ಮಿಕತೆಯ ತವರು ಮನೆ. ಭಾರತ ಜಗತ್ತಿನ ದೇವರ ಮನೆ ಇದ್ದಂತೆ. ಭಕ್ತಿ, ಪರಂಪರೆ, ಆಚಾರ, ವಿಚಾರ, ಧರ್ಮ, ಸಂಸ್ಕೃತಿಯ ತಾಣವಾಗಿದೆ. ದೇಶಾದ್ಯಂತ ಜ್ಯಾತ್ಯಾತೀತವಾಗಿ ಪೂಜಿಸಲ್ಪಡುವ ಸಂತ ಶ್ರೇಷ್ಠ ಶಿರಡಿ ಸಾಯಿಬಾಬಾ ಎಲ್ಲರಿಗೂ ಒಳಿತು ಮಾಡಲಿ ಎಂದು ಶುಭಕೋರಿದರು.
  ಮುದ್ರಾರತ್ನ ಡಾ.ಲಕ್ಷ್ಮೀ ಶ್ರೀನಿವಾಸ ಗುರೂಜಿ, ಟ್ರಸ್ಟ್ ಅಧ್ಯಕ್ಷ ಜಗದೀಶ ಬೆಟಗೇರಿ, ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿದರು. ಉಪಾಧ್ಯಕ್ಷ ರಾಜಶೇಖರ ಮಾಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಜೆ ಭದ್ರಾವತಿ ಬ್ರದರ್ಸ್‌ ಆರ್ಕೆಸ್ಟ್ರಾದಿಂದ ವಿಶೇಷ ರಸಮಂಜರಿ ಕಾರ್ಯಕ್ರಮ ಜರುಗಿತು.
  ಸಮಾರಂಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ನವಚೇತನ ಸಮೂಹ ಸಂಸ್ಥೆಗಳ ಅಧ್ಯಕ್ಷ ನಾಗೇಂದ್ರ ಮಾಳಿ, ನಗರಸಭೆ ಸದಸ್ಯೆ ಕವಿತಾ ಯಲವಗಿಮಠ, ಟ್ರಸ್ಟ್ ಗೌರವಾಧ್ಯಕ್ಷ ಗುರುಶಾಂತಪ್ಪ ಹನುಮನಹಳ್ಳಿ, ಉಪಾಧ್ಯಕ್ಷ ಕೆ.ಸಿ. ಪಾವಲಿ, ಕಾರ್ಯದರ್ಶಿ ವಿಜಯಕುಮಾರ ಗೊಡಚಿ, ಸಹ ಕಾರ್ಯದರ್ಶಿ ಅಶೋಕ ಹೊಸಮನಿ, ಖಜಾಂಚಿ ವಿ.ವಿ.ಬಳಿಗಾರ, ಸದಸ್ಯರಾದ ರಾಜಶೇಖರ ಕಲ್ಲಮ್ಮನವರ, ರಾಜೀವ ಮಾಗಾವಿ, ಶಾಂತಕುಮಾರ ಮಾಳಿ, ಸಿದ್ದಪ್ಪ ಪೂಜಾರ, ಜಗದೀಶ ಕನವಳ್ಳಿ, ವಿನಾಯಕ ಮಾಳೋದೆ, ಮಲ್ಲಪ್ಪ ಹಲಸಗಿ, ಡಾ.ಶಿವಾನಂದ ಕೆಂಭಾವಿ, ಗುರುಪಾದಗೌಡ ಪಾಟೀಲ, ಅನಿತಾ ಶಿರೂರ, ಅಭಿಷೇಕ ಬೆಟಗೇರಿ, ಸೇರಿದಂತೆ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
  ಗುರುಸ್ಪಂದನ ಆ.29ರಂದು
  ಮುದ್ರಾ ಬ್ರಹ್ಮ, ಬೆಂಗಳೂರಿನ ಡಾ.ಲಕ್ಷ್ಮೀ ಶ್ರೀನಿವಾಸ ಗುರೂಜಿ ನೇತೃತ್ವದಲ್ಲಿ ಆ.29ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಾಯಿಬಾಬಾ ಮಂದಿರದಲ್ಲಿ ವಿವಿಧ ಮುದ್ರೆಗಳ ಲಾಭದ ಕುರಿತು ಗುರುಸ್ಪಂದನ ಕಾರ್ಯಕ್ರಮ ನಡೆಯಲಿದೆ. ಉಚಿತ ಪ್ರವೇಶವಿದ್ದು, ಭಕ್ತಾದಿಗಳು ಇದರ ಲಾಭ ಪಡೆಯಬೇಕು ಎಂದು ಶ್ರೀ ಶಿರಡಿ ಸಾಯಿಬಾಬಾ ಭೀಕ್ಷಾ ಕೇಂದ್ರದ ಹಾವೇರಿ ಶಾಖೆಯ ದಿಶಾಪತಿ ಮನವಿ ಮಾಡಿದ್ದಾರೆ.

  See also  ವಿಚಾರ ಸಂಕಿರಣ ನಾಳೆಯಿಂದ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts