ಹಾವೇರಿ: ಚಲಿಸುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ರಾಣೇಬೆನ್ನೂರು ತಾಲೂಕಿನ ಹನುಮನಮಟ್ಟಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ.
ಮೃತ ಮಹಿಳೆಯ ಹೆಸರು ಗಂಗಮ್ಮ (45) ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿರಿ: ಮದ್ವೆಯಾಗದೇ ಪಾಪು ಕೊಟ್ಟ… ಹೆಂಡ್ತಿ ಜತೆ ಅತ್ತೆಯನ್ನೂ ಕೊಲೆ ಮಾಡ್ದ- ದೇವನಹಳ್ಳಿಯಲ್ಲಿ ಭೀಕರ ಘಟನೆ
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಕಬ್ಬು ತುಂಬಿದ ಟ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಮೇಲ್ನೋಟಕ್ಕೆ ಕಾರು ಚಾಲಕನ ಅಜಾಗರೂಕತೆಯೆ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)
ಹಿರಿಯರ ಒಪ್ಪಿಗೆ ಪಡೆದು ಪ್ರೇಮವಿವಾಹವಾದ ನವಜೋಡಿಗೆ ಮೂರೇ ತಿಂಗಳಲ್ಲಿ ಕಾದಿತ್ತು ಬಿಗ್ ಶಾಕ್!
ಎಲ್ಲರ ಗಮನಸೆಳೆದ ನಾಲ್ಕು ಕಾಲಿನ ಕೋಳಿ ಮರಿ: ಹೊಸ ವರ್ಷದ ಉಡುಗೊರೆಯಂತೆ!
ಅಂಬಾನಿ ಭದ್ರತೆಗೆ ಇರುವ ಅತ್ಯಂತ ದುಬಾರಿ ಪೊಲೀಸ್ ಕಾರು: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!