More

  ಸರ್ಕಾರದ ಜನವಿರೋಧಿ ನೀತಿ ಖಂಡನೀಯ; ಆಮ್ ಆದ್ಮಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಕಿಡಿನುಡಿ

  ಹಾವೇರಿ: ರಾಜ್ಯದ ಜನತೆ ಅತಿವೃಷ್ಠಿ ನಂತರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಜನವಿರೋಧಿ ಧೋರಣೆ ಪ್ರದರ್ಶಿಸುತ್ತಿದೆ ಎಂದು ಆಮ್ ಆದ್ಮಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ ಹೇಳಿದರು.
  ತೈಲ ಬೆಲೆ ಏರಿಕೆ ಖಂಡಿಸಿ ಇಲ್ಲಿನ ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಬೆಲೆ 3 ರೂ. ಹಾಗೂ ಡೀಸೆಲ್ ಬೆಲೆ 3.50 ರೂ. ಏರಿಸಿದ್ದನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ. ಮುಂಗಾರು ಮಳೆಯ ಆಗಮನದಿಂದ ಬಿತ್ತನೆ ಕಾರ್ಯದಲಿ ನಿರತರಾಗಿರುವ ರೈತ ಸಮುದಾಯ ಈಗಾಗಲೇ ಬೀಜ, ಗೊಬ್ಬರದ ಬೆಲೆ ಹೆಚ್ಚಳದಿಂದ ಕಂಗೆಟ್ಟಿದೆ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರ ಏಕಾಏಕಿ ತೈಲ ಬೆಲೆ ಏರಿಸಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ಈ ಕೂಡಲೇ ಬೆಲೆ ಏರಿಕೆ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಹೆಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
  ಎಂ.ಡಿ.ಕಾಲೇಬಾಗ್, ಶಂಕ್ರಣ್ಣ ಬೆಂಡಿಗೇರಿ, ಶಿವನಗೌಡ ಗಾಜಿಗೌಡ್ರ, ರಮೇಶ ಮಣ್ಣಣ್ಣನವರ, ನಾಗರಾಜ ತಿಪ್ಪಲಾಪುರ, ಆಂಜನೇಯ ತಿಪ್ಪಲಾಪುರ, ಸಿದ್ದಪ್ಪ ಜೋಗಿಹಳ್ಳಿ, ಪ್ರಶಾಂತ ಹೊಸಮನಿ, ಗಿರಿಜಮ್ಮ ಹೊಸಮನಿ, ಲಲಿತಾ ಲಮಾಣಿ, ಮಂಜುಳಾ ಆರ್.ಸಿ., ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಇತರರಿದ್ದರು.

  See also  'ಅದು ಸಿದ್ದರಾಮಯ್ಯ ಅವರ ಸೊಸೆ/ಹೆಂಡತಿಗೆ ಆಗಿದ್ರೆ ಹೀಗೆ ಹೇಳ್ತಿದ್ರಾ' ಎಂದ ಬಿಜೆಪಿ ಕಾರ್ಯಕರ್ತೆಯ ಬಂಧನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts