ಸಿನಿಮಾ

ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನ ದಾಖಲು; ಕಳೆದ ಚುನಾವಣೆಯ ದಾಖಲೆ ಮುರಿದ 2023

ಹಾವೇರಿ: ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ.81.17ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ.
ಹಾನಗಲ್ಲ ಕ್ಷೇತ್ರದಲ್ಲಿ ಶೇ.83.17ರಷ್ಟು ಮತದಾನ ಆಗಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಶೇ.79.06, ಹಾವೇರಿ ಕ್ಷೇತ್ರದಲ್ಲಿ ಶೇ.76.61, ಬ್ಯಾಡಗಿ ಕ್ಷೇತ್ರದಲ್ಲಿ ಶೇ.83.47, ಹಿರೇಕೆರೂರ ಕ್ಷೇತ್ರದಲ್ಲಿ ಶೇ.84.89 ಹಾಗೂ ರಾಣೇಬೆನ್ನೂರ ಕ್ಷೇತ್ರದಲ್ಲಿ ಶೇ.80.04ರಷ್ಟು ಮತದಾನವಾಗಿದೆ. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಹಿರೇಕೆರೂರ ಕ್ಷೇತ್ರದಲ್ಲಿ ಗರಿಷ್ಠ ಶೇ.84.89ರಷ್ಟು ಮತದಾನವಾಗಿದ್ದರೆ, ಹಾವೇರಿ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಶೇ.76.61ರಷ್ಟು ಮತದಾನ ದಾಖಲಾಗಿದೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.80.47ರಷ್ಟು ಮತದಾನವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಾರಿ ಶೇ.81.17ರಷ್ಟು ಮತದಾನವಾಗಿದೆ. ಈ ಮೂಲಕ ಕಳೆದ ಚುನಾವಣೆಯ ದಾಖಲೆಯನ್ನು 2023ರ ಚುನಾವಣೆ ಮುರಿದಿದೆ ಎನ್ನಬಹುದು.

Latest Posts

ಲೈಫ್‌ಸ್ಟೈಲ್