ನೀವು ಎಂದಾದರೂ ಈ ‘ಫ್ರೂಟ್ ಐಸ್ ಗೋಲಾ’ ತಿಂದಿದ್ದೀರಾ? ವಿಡಿಯೋ ವೈರಲ್​ Fruit Ice Gola

Fruit Ice Gola

Fruit Ice Gola: ಸೋಶಿಯಲ್​​ ಮೀಡಿಯಾದಲ್ಲಿ ಇತ್ತೀಚಿಗೆ ಫುಡ್​ vlog ಸಖತ್​​ ವೈರಲ್​ ಆಗುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಆಹಾರ ಪ್ರಿಯರನ್ನು ಇವು ಹೆಚ್ಚೆಚ್ಚು ಆಕರ್ಷಿಸುತ್ತದೆ. ಅದೇ ರೀತಿ ಇದೀಗ ಸದ್ದು ಮಾಡ್ತಿರೋದು ‘ಫ್ರೂಟ್ ಐಸ್ ಗೋಲಾ’.

blank

ಗುಜರಾತಿನ ಅಹಮದಾಬಾದ್‌ ಫುಡ್​​​ ಸ್ಟ್ರೀಟ್​​​ನಲ್ಲಿ ವ್ಯಾಪಾರಿಯೊಬ್ಬ ಕ್ಲಾಸಿಕ್ ಆಗಿ ‘ಫ್ರೂಟ್ ಐಸ್ ಗೋಲಾ’ ಮಾಡುತ್ತಿರುವ ವಿಡಿಯೋ ಎಲ್ಲರಲ್ಲಿಯೂ ಆಕರ್ಷಣೆ ಮತ್ತು ಕಳವಳ ಎರಡನ್ನೂ ಹುಟ್ಟುಹಾಕಿದೆ.

ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತದ ಬೆನ್ನಲ್ಲೇ ಪಾಕ್​ ಷೇರುಪೇಟೆಯಲ್ಲಿ ದಿಢೀರ್​ ಕುಸಿತ! ತಟ್ಟಿತು ಬಿಸಿ

ಇನ್‌ಸ್ಟಾಗ್ರಾಮ್ ಫುಡ್ ವ್ಲಾಗರ್ ಒಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿರಪ್-ನೆನೆಸಿದ ಹಣ್ಣುಗಳಿಂದ ತುಂಬಿದ ಪಾತ್ರೆಯಲ್ಲಿ ದೊಡ್ಡ ಬಿಳಿ ಐಸ್ ಗೋಲಾ ಸ್ಟಿಕ್ ಅನ್ನು ಮುಳುಗಿಸಿ, ಕೆಲವೇ ಸೆಕೆಂಡುಗಳಲ್ಲಿ ಐಸ್ ಗೋಲಾ ವಿಧವಿಧವಾದ ಬಣ್ಣಗಳಿಗೆ ತಿರುಗಿ ‘ಫ್ರೂಟ್ ಐಸ್ ಗೋಲಾ’ರೆಡಿಯಾದ ವಿಧಾನವನ್ನು ನೋಡಬಹುದು.

ಇಲ್ಲಿದೆ ನೋಡಿ ವಿಡಿಯೋ

 

View this post on Instagram

 

A post shared by Krupali Patel (@foodiekru)

ಹಾಗೆಯೇ ಈ ವಿಡಿಯೋಗೆ ಕಾಮೆಂಟ್​​ಗಳ ಸುರಿಮಳೆಯೇ ಬಂದಿದೆ. ಒಬ್ಬ ನೆಟ್ಟಿಗ “ಕ್ಯಾನ್ಸರ್ ಕೇವಲ ಒಂದು ತಿಂಗಳು ದೂರದಲ್ಲಿದೆ” ಎಂದು ವ್ಯಂಗ್ಯವಾಡಿದರೆ, ಮತ್ತೊಬ್ಬರು “ಮಾರ್ ಹಿ ದಾಲೋಗೆ” ಎಂಬ ನಾಟಕೀಯ ಗೀತೆಯೊಂದಿಗೆ ಅದನ್ನೇ ಹೇಳಿದರು. ಹಸಿರು ಸಿಕ್-ಫೇಸ್ ಮತ್ತು ವಾಕರಿಕೆ ಬರಿಸುವ ಎಮೋಜಿಗಳಿಂದ ಕಾಮೆಂಟ್‌ಗಳು ತುಂಬಿ ತುಳುಕುತ್ತಿದ್ದವು, ಇದು ಆಹಾರ ಪದ್ಧತಿಯ ಬಗ್ಗೆ ನೆಟ್ಟಿಗರ ಅಸಮ್ಮತಿಯನ್ನು ಸೂಚಿಸುತ್ತದೆ. ಆದರೂ ಈ ವೀಡಿಯೊ 50 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು ಒಂಬತ್ತು ಲಕ್ಷ ಲೈಕ್‌ಗಳನ್ನು ಗಳಿಸಿದೆ. (ಏಜೆನ್ಸೀಸ್​)

Share This Article

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…