More

  ಕಾನೂನು ಕಲಿಕೆಯಲ್ಲಿ ಭಾಷಾ ಪ್ರೌಢಿಮೆ ಇರಲಿ

  ಹುಬ್ಬಳ್ಳಿ: ನಗರದ ಜೆಎಸ್​ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.

  ಸಂಪನ್ಮೂಲ ವ್ಯಕ್ತಿ ಹೈಕೋರ್ಟ್ ವಕೀಲ ಗೋಪಾಲ ಪಾಟೀಲ ಮಾತನಾಡಿ, ಕಾನೂನು ಅಧ್ಯಯನ ಬೃಹತ್ ಸಾಗರದಂತೆ. ಇದು ಬರೀ ಪದವಿ ಮಾತ್ರವಲ್ಲ, ಹೆಮ್ಮೆ ಮತ್ತು ಪ್ರತಿಷ್ಠೆಯ ವಿಷಯ ಎಂದರು.

  ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ವಿದ್ಯಾರ್ಥಿಗಳು ತಂತ್ರಜ್ಞಾನದ ಅರಿವು ಮೂಡಿಸಿಕೊಳ್ಳಬೇಕು. ಕಾನೂನು ಕಲಿಕೆಯಲ್ಲಿ ವಿದ್ಯಾರ್ಥಿಗಳು ಭಾಷಾ ಕೌಶಲ, ಪ್ರಬುದ್ಧತೆ, ವಾಕ್ಚಾತುರ್ಯ, ಸಮಯ ನಿರ್ವಹಣೆ ಸೇರಿ ವಿವಿಧ ವಿಷಯಗಳನ್ನು ಅಳವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

  ಪ್ರಾಚಾರ್ಯು ಡಾ. ರೂಪಾ ಇಂಗಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಾಬುಲಾಲ್ ದರಗದ್, ಪ್ರೊ. ದೀಪಾ ಪಾಟೀಲ, ಪ್ರೊ. ಪೂರ್ಣಿಮಾ ಕುರಡಿಕೇರಿ, ಸುರೇಶ ಲಿಂಬಿಕಾಯಿ, ಶೈಲಜಾ ಹಗೇದಾಳ್, ಸತೀಶ ಸಿ.ವಿ., ಸುರೇಶ ಲಮಾಣಿ, ಇತರರು ಇದ್ದರು. ಪ್ರೊ. ಶ್ರೀಶೈಲಾ ಮುಧೋಳ ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts