ರಾಯಚೂರು: ಸಂಬಳ ಒಪ್ಪಂದ ಜಾರಿ ವಿಳಂಬ ಖಂಡಿಸಿ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಪೊಲೀಸ್ ಠಾಣೆ ಎದುರು ಧರಣಿ ನಡಸುತ್ತಿದ್ದಾರೆ.
ಕಂಪನಿ ನೀಡಿದ ಮಾತಿನಂತೆ ಸಂಬಳವನ್ನು ನೀಡುತ್ತಿಲ್ಲ ಎಂದು ಆಗ್ರಹಿಸಿ ಗಣಿಯಲ್ಲಿ ಕೆಲಸ ಮಾಡುತ್ತಿರುವ 1,500ಕ್ಕೂ ಅಧಿಕ ಮಂದಿ ಹಟ್ಟಿ ಪೊಲೀಸ್ ಠಾಣೆ ಎದುರು ಧರಣಿ ನಡೆಸುತ್ತಿದ್ದಾರೆ.
ಮುಂಜಾನೆ ಪಾಳಿ ಮುಗಿಸಿ ಆಹಾರವನ್ನು ಸ್ವೀಕರಿಸಿದೆ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಧರಣಿ ನಡೆಸುತ್ತಿರುವ ಕಾರ್ಮಿಕರ ಮನವೊಲಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಮುಂದಾದರೂ ಕಾರ್ಮಿಕರು ಸಂಧಾನಕ್ಕೆ ಒಪ್ಪದೆ ಧರಣಿ ನಡೆಸುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ ವಾಲಿಬಾಬ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರ್ ಅಲಿ ಅವರನ್ನು ಕರೆಸುವಂತೆ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್)