ಆಕಸ್ಮಿಕ ಬೆಂಕಿಗೆ ಬಣವೆ ಭಸ್ಮ

ಹಟ್ಟಿಚಿನ್ನದಗಣಿ: ಯಲಗಟ್ಟಾ ಗ್ರಾಮದ ಹೊರ ವಲಯದಲ್ಲಿ ಬಸವರಾಜ ಚಂದಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆ ಆಕಸ್ಮಿಕ ಬೆಂಕಿ ಅವಘಡದಿಂದ ಭಸ್ಮವಾಗಿದೆ. 2 ಟ್ರಿಪ್ ಹುಲ್ಲು, 2 ಟ್ರಿಪ್ ಜೋಳದ ಸೊಪ್ಪು, 1 ಟ್ರಿಪ್ ಶೇಂಗಾ ಹೊಟ್ಟು ಅಗ್ನಿಗಾಹುತಿಯಾಗಿದೆ. ಸುಮಾರು 60 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಲಿಂಗಸುಗೂರು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿತು.