ಅಭಿನಂದನ್​ ಹಸ್ತಾಂತರವಾದ ನಂತರ ಏನೇನಾಗಲಿದೆ ಗೊತ್ತಾ?

ದೆಹಲಿ: ಭಾರತದ ವಾಯು ಗಡಿ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಬಂಧಿಯಾಗಿರುವ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಭಾರತಕ್ಕೆ ಹಸ್ತಾಂತರಗೊಂಡ ನಂತರ ಇಲ್ಲಿ ಹಲವು ಪ್ರಕ್ರಿಯೆಗಳಲ್ಲಿ ಒಳಗೊಳ್ಳಬೇಕಾಗುತ್ತದೆ.

  • ಭಾರತೀಯ ಸೇನಾ ಅಧಿಕಾರಿಗಳಿಗೆ ಅಭಿನಂದನ್​ ಹಸ್ತಾಂತರವಾಗುತ್ತಲೇ ಅವರನ್ನು ಮೊದಲಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.
  • ವಿಂಗ್​ ಕಮಾಂಡರ್​ ಅಭಿನಂದನ್​ ಅವರನ್ನು ಸೇನಾಪಡೆಯ ಅಧಿಕಾರಿಗಳ ಸಮಿತಿಯೊಂದು ವಿಚಾರಣೆಗೆ ಒಳಪಡಿಸುತ್ತದೆ.
  • ಘಟನೆಯಲ್ಲಿ ಏನೇನಾಯಿತು, ವಿಮಾನ ಪತನವಾಗಿದ್ದು ಹೇಗೆ, ವಿಮಾನಕ್ಕೆ ಯಾವ ವಸ್ತು ಹೊಡೆಯಿತು, ವಿಮಾನಕ್ಕೆ ನಡೆದ ದಾಳಿಯ ತೀವ್ರತೆ, ಪ್ರಕರತೆ ಏನು ಎಂದು ಪ್ರಶ್ನೆ ಮಾಡಲಾಗುತ್ತದೆ.
  • ನಂತರ ವಿವಿಧ ತನಿಖಾ ದಳಗಳು ವಿಚಾರಣೆ ಮಾಡುತ್ತವೆ. ಉದಾಹರಣೆಗೆ: ಸಂಶೋಧನಾ ಮತ್ತು ವಿಶ್ಲೇಷಣಾ ದಳ (R&AW), ಗುಪ್ತ ದಳ, ವಿದೇಶಾಂಗ ವ್ಯವಹಾರಗಳ ಇಲಾಖೆಯ ಸಮಿತಿ.
  • ಈ ತನಿಖಾ ದಳಗಳು ಘಟನಾವಳಿಯನ್ನು ಮತ್ತೊಮ್ಮೆ ವಿವರಿಸುವಂತೆ ವಿಂಗ್​ ಕಮಾಂಡರ್​ಗೆ ಸೂಚಿಸುತ್ತವೆ.