ಎಸ್ಸೆಸ್ಸೆಲ್ಸಿಯಲ್ಲಿ ಪ್ರಗತಿ ಎಂ.ಗೌಡ ರಾಜ್ಯಕ್ಕೆ ಟಾಪರ್

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಪ್ರಗತಿ ಎಂ. ಗೌಡ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.


ಈ ಹಿಂದೆ ಫಲಿತಾಂಶ ಪ್ರಕಟಗೊಂಡಾಗ ಒಟ್ಟು 625ಕ್ಕೆ 624 ಅಂಕ ಗಳಿಸಿದ್ದ ಪ್ರಗತಿ, ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಳು. ಎಲ್ಲ ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ್ದ ಈಕೆಗೆ ಕನ್ನಡ ವಿಷಯದಲ್ಲಿ ಮಾತ್ರ ಒಟ್ಟು 125ಕ್ಕೆ 124 ಅಂಕ ಬಂದಿತ್ತು. ಆದ್ದರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಳು. ಈಗ ಕನ್ನಡದಲ್ಲೂ 125 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾಳೆ.

ಕನ್ನಡ ವಿಷಯದಲ್ಲೂ ತನಗೆ ಪೂರ್ಣ ಅಂಕ ಬರುತ್ತದೆ ಎಂಬ ವಿಶ್ವಾಸವನ್ನು ವಿದ್ಯಾರ್ಥಿನಿ ಈ ಹಿಂದೆಯೇ ವ್ಯಕ್ತಪಡಿಸಿದ್ದಳು.

Leave a Reply

Your email address will not be published. Required fields are marked *