ವಿರೂಪಾಕ್ಷೇಶ್ವರನಿಗೆ ವಿಶೇಷ ರುದ್ರಾಭಿಷೇಕ

ಹಾಸನ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ನೆರವೇರಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲೆಂದು ಪ್ರಾರ್ಥಿಸಿದರು.


ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಚ್.ಎನ್.ನಾಗೇಶ್ ಮಾತನಾಡಿ, ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾಗಲೆಂದು ಪ್ರಾರ್ಥಿಸಿ 2014ರಲ್ಲೂ ಪೂಜೆ ಸಲ್ಲಿಸಲಾಗಿತ್ತು. ನಮ್ಮ ಪ್ರಾರ್ಥನೆಗೆ ದೇವರು ಆಶೀರ್ವದಿಸಿದ್ದ. ಹೀಗಾಗಿ ಕಳೆದ ಐದು ವರ್ಷಗಳಲ್ಲಿ ಭಾರತ ಸಾಕಷ್ಟು ಸುಧಾರಣೆ ಕಂಡಿದೆ ಎಂದರು.


ಭಾರತ ವಿಶ್ವ ಗುರುವಾಗಬೇಕೆಂದರೆ ಬಿಜೆಪಿ ಸರ್ಕಾರವೇ ಕೇಂದ್ರದಲ್ಲಿ ಇರಬೇಕು.ಭಯೋತ್ಪಾದನೆ ನಿಗ್ರಹ, ಬಡತನ ನಿರ್ಮೂಲನೆ, ಕೃಷಿ ಉತ್ಪನ್ನಗಳಿಗೆ ಅಧಿಕ ಬೆಲೆ, ವಿವಿಧ ಕಾಮಗಾರಿ ಪೂರ್ಣಗೊಳ್ಳಬೇಕೆಂದರೆ ನರೇಂದ್ರ ಮೋದಿ ದೇಶದ ಅಧಿಕಾರ ಹಿಡಿಯುವುದು ಅನಿವಾರ್ಯ ಎಂದರು.


ಮೇ 23ರಂದು 17ನೇ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಬಿಜೆಪಿ 306ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ. ಜತೆಗೆ ರಾಜ್ಯ ರಾಜಕಾರಣದಲ್ಲೂ ಭಾರಿ ವ್ಯತ್ಯಾಸವಾಗುತ್ತದೆ ಎಂದರು.
ಯುವ ಮೋರ್ಚಾ ಮಾಜಿ ಅಧ್ಯಕ್ಷ ಚನ್ನಕೇಶವ, ಸತೀಶ್, ಕುಮಾರ್, ಖಂಡೇಶ್ವರ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *