More

  ಐತಿಹಾಸಿಕ ಕಾಳಿ ವಿಗ್ರಹ ತುಂಡರಿಸಿ ಭಗ್ನಗೊಳಿಸಿದ ದುಷ್ಕರ್ಮಿಗಳು

  ಹಳೇಬೀಡು: ಹಾಸನ ಜಿಲ್ಲೆಯ ಪ್ರಾಚೀನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇಗುಲದ ಕಾಳಿ ವಿಗ್ರಹವನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ.

  ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದು 8೦೦ ವರ್ಷ ಇತಿಹಾಸವಿರುವ ಮಹಾಲಕ್ಷ್ಮೀ ದೇಗುಲವು ಚತುಷ್ಕುಟ ( ನಾಲ್ಕು ಗರ್ಭಗೃಹ) ಆಲಯವಾಗಿದ್ದು, ಕಾಳಿ, ವಿಷ್ಣು ಹಾಗೂ ಶಿವಲಿಂಗವನ್ನೂ ಒಳಗೊಂಡಿದೆ. ಗುರುವಾರ ರಾತ್ರಿ ದೇಗುಲದ ಮುಖ್ಯದ್ವಾರ ಒಡೆದು ಒಳನುಗ್ಗಿರುವ ದುಷ್ಕರ್ಮಿಗಳು, ಪುರಾತನ ಕಾಳಿಯ ಮೂರ್ತಿಯನ್ನು ಅರ್ಧಭಾಗಕ್ಕೆ ತುಂಡರಸಿ ಹಾನಿ ಮಾಡಿದ್ದಾರೆ. ದೇವಿಗೆ ಪ್ರತಿದಿನ ಪೂಜೆ ಸಲ್ಲುತ್ತಿದ್ದು, ನಿತ್ಯ ಕೈಂಕರ್ಯಗಳು ಮುಗಿದ ಬಳಿಕ ಅರ್ಚಕರು ತೆರಳುತ್ತಿದ್ದರು.

  ರಾಷ್ಟ್ರೀಯ ಸ್ಮಾರಕವೂ ಆಗಿರುವ ಲಕ್ಷ್ಮೀ ದೇಗುಲದ ಸಂರಕ್ಷಣೆ ಹೊಣೆಯು ಭಾರತೀಯ ಪುರಾತತ್ವ ವಿಭಾಗಕ್ಕೆ ಸೇರಿದ್ದು, ಒಬ್ಬ ಸಿಬ್ಬಂದಿ ಹಾಗೂ ಕಾರ್ಮಿಕ ಹಗಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಸೂರ್ಯಾಸ್ತಕ್ಕೆ ದೇಗುಲವನ್ನು ಮುಚ್ಚಿದ ಬಳಿಕ ರಾತ್ರಿ ಪಾಳಿಗೆ ಸಿಬ್ಬಂದಿ ನಿಯೋಜನೆ ಮಾಡದಿರುವುದು ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಪುರಾತತ್ವ ವಿಭಾಗದ ನಿರ್ಲ್ಯಕ್ಷ ಧೋರಣೆಯಿಂದಲೇ ವಿಗ್ರಹವು ಭಗ್ನವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts