ಸಿನಿಮಾ

ದೇವೀರಮ್ಮ ನಿಧನ: ಇಂದು ಅಂತ್ಯಕ್ರಿಯೆ

ಹಾಸನ: ಚನ್ನರಾಯಪಟ್ಟಣ ತಾಲೂಕು ತಗಡೂರು ಗ್ರಾಮದ ಶ್ರೀಮತಿ ದೇವೀರಮ್ಮ (ಗೌಡರ ಮನೆ ಶಿವರುದ್ರಪ್ಪ ಪತ್ನಿ) ಅವರು ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷವಾಗಿತ್ತು.

ಮಕ್ಕಳಾದ ಇಂಜಿನಿಯರ್ ಟಿ.ಎಸ್.ಶಿವಕುಮಾರಸ್ವಾಮಿ, ಟಿ.ಎಸ್.ಮೃತ್ಯುಂಜಯ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಟಿ.ಎಸ್.ಸುವರ್ಣಮ್ಮ, ಟಿ.ಎಸ್.ತೋಂಟಾರಾಧ್ಯ ಹಾಗೂ ಟಿ.ಎಸ್.ಇಂದ್ರಾಣಿ ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು, ಸೊಸೆಯಂದಿರು ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ.

ದೇವೀರಮ್ಮ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಚಿಕ್ಕಮ್ಮ. ದೇವೀರಮ್ಮ ಅವರ ಅಂತ್ಯಕ್ರಿಯೆ ತಗಡೂರಿನಲ್ಲಿ ಶುಕ್ರವಾರ ಮದ್ಯಾಹ್ನ 12 ಗಂಟೆಗೆ ನಡೆಯಲಿದೆ.

ಸಂತಾಪ: ಶ್ರೀಮತಿ ದೇವೀರಮ್ಮ ಅವರ ನಿಧನಕ್ಕೆ ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಸೇರಿದಂತೆ ಹಲವು ಗಣ್ಯರು, ಗ್ರಾಮ ಪಂಚಾಯಿತಿ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚಬಲ್ಲರು!

Latest Posts

ಲೈಫ್‌ಸ್ಟೈಲ್