12 ಜಾನುವಾರುಗಳ ರಕ್ಷಣೆ, ನಾಲ್ವರ ಬಂಧನ

ಬೇಲೂರು: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಟೆಂಪೊಟ್ರಾೃಕ್ಸ್ ಜಾನುವಾರುಗಳನ್ನು ತುಂಬಿಕೊಂಡು ವಾಹನದಲ್ಲಿ ಮಂಗಳವಾರ ಹಾಸನದಿಂದ ಬೇಲೂರಿಗೆ Aಬರುತ್ತಿರುವ ವೇಳೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದ ಸಂದರ್ಭ 12 ಜಾನುವಾರುಗಳು ಪತ್ತೆಯಾಗಿವೆ. ಕೂಡಲೇ ಅವುಗಳನ್ನು ವಶಕ್ಕೆ ಪಡೆದು ವಾಹನದಲ್ಲಿದ್ದ ಕಲೀಲ್, ಸಮೀವುಲ್ಲಾ, ಪುಟ್ಟಯ್ಯ ಹಾಗೂ ಇಮ್ರಾನ್ ಎಂಬುವರನ್ನು ಬಂಧಿಸಿದ್ದಾರೆ.

ನಂತರ ಜಾನುವಾರುಗಳನ್ನು ಬಾಣಾವರದ ಗೋ ಶಾಲೆಗೆ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಜಗದೀಶ್, ಸಿಬ್ಬಂದಿ ಪ್ರಹ್ಲಾದ್, ಸುರೇಶ್, ಚಿತ್ರೇಶ್, ನಂದೀಶ್ ಇದ್ದರು.