ಸಚಿವ ಎಚ್​.ಡಿ.ರೇವಣ್ಣ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಕೊಟ್ಟ ಸ್ಪಷ್ಟನೆ ಹೀಗಿದೆ…

ಹಾಸನ‌: ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಲಹೆ ಪಡೆದು ಕೆಲಸ ಮಾಡುತ್ತಿದ್ದಾರೆಂಬ ಸಚಿವ ಎಚ್​.ಡಿ.ರೇವಣ್ಣ ಆರೋಪಕ್ಕೆ ಈಗಿನ ಜಿಲ್ಲಾಧಿಕಾರಿ ಮೇರಿ ಫ್ರಾನ್ಸಿಸ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸ್ವತಂತ್ರವಾಗಿಯೇ ಕೆಲಸ ಮಾಡುತ್ತಿದ್ದೇನೆ. ಯಾರಿಂದಲೂ ಸಲಹೆ ಪಡೆಯುವ ಅವಶ್ಯಕತೆ ನನಗಿಲ್ಲ ಎಂದು ಸೌಮ್ಯವಾಗಿಯೇ ಉತ್ತರಿಸಿದರು.

ವರ್ಗಾವಣೆಯಾದ ರೋಹಿಣಿ ಸಿಂಧೂರಿ ಅವರನ್ನು ಎರಡು ದಿನ ತಮ್ಮ ಜತೆಯಲ್ಲಿಯೇ ಇರಿಸಿಕೊಂಡಿದ್ದರು. ಚುನಾವಣಾ ಆಯೋಗಕ್ಕೆ ಮಾಹಿತಿ ನೀಡದೆ ಹಿಂದಿನ ಡಿಸಿಯನ್ನು ಭೇಟಿ ಮಾಡುವ ಅಗತ್ಯವೇನಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಸಚಿವ ರೇವಣ್ಣ ಮಾಡಿದ್ದ ಪ್ರಶ್ನೆಗೆ ಉತ್ತರಿಸಿದ ಮೇರಿ ಫ್ರಾನ್ಸಿಸ್, ರೋಹಿಣಿಯವರು ನನ್ನ ಬ್ಯಾಚ್ ಮೇಟ್ ಆಗಿದ್ದು, ಅವರ ಭೇಟಿಯಲ್ಲಿ ವಿಶೇಷವೇನಿದೆ ಎಂದು ಸಚಿವರ ಆರೋಪವನ್ನು ಅಲ್ಲಗೆಳೆದರು. (ದಿಗ್ವಿಜಯ ನ್ಯೂಸ್​)