ಗಂಧದ ಮರ ಕಳವು

ಹಾಸನ: ನಗರದ ಆರ್‌ಸಿ ರಸ್ತೆಯ ಮನೆ ಆವರಣದಲ್ಲಿ ಬುಧವಾರ ರಾತ್ರಿ ದುಷ್ಕರ್ಮಿಗಳು ಗಂಧದ ಮರ ಕತ್ತರಿಸಿ ಕದ್ದೊಯ್ದಿದ್ದಾರೆ.

ಉಪನ್ಯಾಸಕ ಜಯದೇವ್ ಎಂಬುವರ ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರ ಕಳ್ಳರ ಪಾಲಾಗಿದೆ. ಮಧ್ಯರಾತ್ರಿ ಕರ್ಕಶ ಶಬ್ದ ಕೇಳುತ್ತಿದ್ದಂತೆ ಮನೆ ಸದಸ್ಯರು ಎದ್ದು ನೋಡಿದಾಗ ಮರ ಕತ್ತರಿಸುವ ವಿಷಯ ತಿಳಿದಿದೆ.

ಪಕ್ಕದ ಮನೆಯ ಮಂಜುನಾಥ್ ಮೊರೆ, ಜಯಕುಮಾರ್ ಸೇರಿ ಐದಾರು ಜನರು ಹೊರಗಡೆ ಬಂದು ನೋಡುತ್ತಿದ್ದಂತೆ ಕಳ್ಳರು ಕತ್ತರಿಸಿದ್ದ ಮರದ ತುಂಡುಗಳನ್ನು ಗೂಡ್ಸ್ ವಾಹನಕ್ಕೆ ಹಾಕಿಕೊಂಡು ಪರಾರಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *