ಮೊದಲ ಚುನಾವಣೆ ನೆನಪು ಸದಾ ಉಳಿಯಲು ನನಗೊಂದು ಅವಕಾಶ ಕೊಡಿ ಪ್ಲೀಸ್…

ಹಾಸನ: ಮೊದಲ ಬಾರಿಗೆ ಹಾಸನ ಕ್ಷೇತ್ರದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮೊಮ್ಮಗ ಹಾಗೂ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್​ ರೇವಣ್ಣ ಅವರು ನನಗೊಂದು ಅವಕಾಶ ಕೊಡಿ ಎಂದು ಮತದಾರರಿಗೆ ಮನವಿ ಮಾಡಿದ್ದಾರೆ.

ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್​, ಇದು ನನ್ನ ಮೊದಲನೇ ಚುನಾವಣೆ. ಇದರ ನೆನಪು ಸದಾ ನನ್ನಲ್ಲಿ ಉಳಿಯುತ್ತದೆ. ಹೀಗಾಗಿ ನನಗೆ ಒಂದು ಅವಕಾಶ ಕೊಡಿ. ನಾನು ಶ್ರದ್ಧೆಯಿಂದ ನಿಮ್ಮ ಕೆಲಸ ಮಾಡುತ್ತೇನೆ. ನನ್ನ ಕೈ ಬಲಪಡಿಸಿದವರನ್ನು ನಾನು ಯಾವತ್ತು ಮರೆಯೋದಿಲ್ಲ ಎಂದು ಆಶ್ವಾಸನೆ ನೀಡಿದರು.

ನಾನು ಮೈತ್ರಿ ಸರ್ಕಾರದ ಬದ್ಧತೆಯನ್ನು ಎತ್ತಿ ಹಿಡಿಯುತ್ತೇನೆ ಎಂದು ಈ ವೇದಿಕೆಯಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ. ನಾನು ಬೂತ್ ಹಾಗೂ ಹೋಬಳಿ ಮಟ್ಟದಲ್ಲಿ ಪ್ರಚಾರ ಮಾಡುತ್ತೇನೆ. ಮುಂದಿನ 30 ದಿನದಲ್ಲಿ ನಿದ್ದೆಗೆಟ್ಟು ಗೆಲುವಿಗಾಗಿ ಕೆಲಸ ಮಾಡುತ್ತೇನೆ. ದೇವೇಗೌಡರ ಸ್ಥಾನ ತುಂಬುವ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಪೂಜ್ಯರಾದ ದೇವೇಗೌಡರ ಘನತೆಯನ್ನು ನಾನು ಎತ್ತಿ ಹಿಡಿಯುತ್ತೇನೆ ಎಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)