ಚುನಾವಣಾ ಪ್ರಚಾರದ ಅಖಾಡಕ್ಕೆ ಪ್ರಜ್ವಲ್ ಪ್ರವೇಶ​: ಅಗತ್ಯಬಿದ್ದರೆ ನಿಖಿಲ್​ ಪರ ಪ್ರಚಾರಕ್ಕೂ ಸೈ

ಹಾಸನ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಜೆಡಿಎಸ್​ ಗೆಲ್ಲುವ ವಿಶ್ವಾಸ ಇದೆ. ಯಾರೇ ಸ್ಪರ್ಧಿಸಿದರೂ ಪಕ್ಷಕ್ಕಾಗಿ ದುಡಿಯುವೇ. ಅಗತ್ಯಬಿದ್ದರೆ ನಿಖಿಲ್​ ಪರ ಪ್ರಚಾರಕ್ಕೂ ತೆರಳುವೆ ಎಂದು ಪ್ರಜ್ವಲ್​ ರೇವಣ್ಣ ತಿಳಿಸಿದ್ದಾರೆ.

ಬುಧವಾರ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಅವರು ನನ್ನ ಸ್ಪರ್ಧೆ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹಾಸನದಿಂದ ಯಾರೆ ಸ್ಪರ್ಧೆ ಮಾಡಿದರೂ ಪಕ್ಷಕ್ಕಾಗಿ ದುಡಿಯುತ್ತೇನೆ. ನನ್ನ ಕಾರ್ಯಕರ್ತರ ಒಲವಿಗೆ ತಕ್ಕಂತೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಅಗತ್ಯಬಿದ್ದರೆ ನಿಖಿಲ್ ಪ್ರಚಾರಕ್ಕೆ ಮಂಡ್ಯಕ್ಕೆ ತೆರಳುತ್ತೇನೆ. ಹಾಗೇ ನಿಖಿಲ್ ಕುಮಾರಸ್ವಾಮಿ ಕೂಡ ಹಾಸನ ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಎ. ಮಂಜು ಬಿಜೆಪಿಯಿಂದ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಈ ಬಗ್ಗೆ ಬಿಜೆಪಿಯವರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹೀಗಾಗಿ ನಾನು ಹೆಚ್ಚು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ಪ್ರಚಾರಕ್ಕೆ ಧುಮುಕಿದ ಪ್ರಜ್ವಲ್​
ಹಾಸನದ ಹೊಳೆನರಸೀಪುರ ಮನೆಯಿಂದಲೇ ಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಶುಭ ಆರತಿ ಬೆಳಗುವ ಮೂಲಕ ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ಅವರಿಗೆ ಮಂಗಳಮುಖಿಯರು ಶುಭ ಹಾರೈಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *