ಕಾಲೇಜುಗಳಲ್ಲಿ ಹುಡುಗಿಯರನ್ನು ರೇಗಿಸುವ ಪುಂಡರನ್ನು ಒದ್ದು ಒಳಗೆ ಹಾಕಿ: ಸಚಿವ ಎಚ್​.ಡಿ.ರೇವಣ್ಣ

ಹಾಸನ: ಕಾಲೇಜುಗಳಲ್ಲಿ ಹುಡುಗಿಯರನ್ನು ರೇಗಿಸುವ ಪುಂಡ-ಪೋಕರಿಗಳನ್ನು ಮುಲಾಜಿಲ್ಲದೆ ಒದ್ದು ಒಳಗೆ ಹಾಕಿ ಎಂದು ಸಚಿವ ಎಚ್​.ಡಿ.ರೇವಣ್ಣ ಅವರು ಖಡಕ್​ ಸೂಚನೆ ನೀಡಿದ್ದಾರೆ.

ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಭೆಯಲ್ಲಿ ಮಾತನಾಡಿದ ಅವರು ಹಾಸನ ಜಿಲ್ಲೆಯ ಎಲ್ಲ ಕಾಲೇಜುಗಳ ಮೇಲೆ ನಿಗಾ ವಹಿಸಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಪ್ರಕಾಶ್ ಗೌಡರಿಗೆ ಸೂಚನೆ ನೀಡಿದರು.

ಯಾರು ಬರ್ತಾರೆ ನಾನು ನೋಡಿಕೊಳ್ಳುತ್ತೇನೆ. ಪೊಲೀಸರು ಮಫ್ತಿಯಲ್ಲಿ ಎಲ್ಲಾ ಕಾಲೇಜುಗಳ ಮೇಲೆ ನಿಗಾ ಇಡಿ. ನಾಳೆಯಿಂದಲೇ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)