ಯಾಕ್ ಮೇಡಂ ಲೇಟ್, ಹಿಂಗ್ ಮಾಡಿದ್ರೆ ಹೆಂಗೆ? ಸಚಿವ ರೇವಣ್ಣ ಪ್ರಶ್ನೆ!

ಹಾಸನ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕೋಪಯೋಗಿ ಸಚಿವ ರೇವಣ್ಣ ಕಿಡಿಕಾರಿದ್ದಾರೆ.

ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಗರಂ ಆದ ರೇವಣ್ಣ, ಯಾಕ್ ಮೇಡಂ ಲೇಟ್, ಹಿಂಗ್ ಮಾಡಿದ್ರೆ ಹೆಂಗೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬೆಳಗ್ಗೆ 8.40ಕ್ಕೆ ಸಚಿವ ರೇವಣ್ಣ ಅವರು ವೇದಿಕೆಗೆ ಆಗಮಿಸಿದ್ದರು. ಅದಾದ ನಂತರ 5 ನಿಮಿಷಗಳ ಬಳಿಕ ಜಿಲ್ಲಾಧಿಕಾರಿ ಆಗಮಿಸಿದ್ದಕ್ಕೆ ಸಚಿವರು ಗರಂ ಆಗಿದ್ದಾರೆ.

ನಂತರ 9 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿಸಲಾಯಿತು. (ದಿಗ್ವಿಜಯ ನ್ಯೂಸ್)