16 C
Bangalore
Thursday, December 12, 2019

ನನ್ನನ್ನು ಕೊಲೆ ಮಾಡಿಸಲು ಸಿಎಂ ಎಚ್​ಡಿಕೆ, ರೇವಣ್ಣ ಕಾರ್ಯಕರ್ತರನ್ನು ಕೆರಳಿಸಿದ್ದಾರೆ: ಪ್ರೀತಂ ಗೌಡ

Latest News

ಸುಗಮ ಸಾರಿಗೆಗೆ ಬೇಕು 2 ಲಕ್ಷ ಕೋಟಿ ರೂಪಾಯಿ

ಬೆಂಗಳೂರು: ನಗರದ ಸಂಚಾರದಟ್ಟಣೆ ನಿವಾರಿಸುವ ಜತೆಗೆ ವಾಯುಮಾಲಿನ್ಯ ಸಮಸ್ಯೆ ಉಲ್ಬಣಿಸದಂತೆ ತಡೆಯಲು ಅಗತ್ಯ ಸೌಲಭ್ಯ ಕಲ್ಪಿಸಲು 2.30 ಲಕ್ಷ ಕೋಟಿ ರೂ. ಬೇಕಿದೆ. ಮುಂದಿನ 20...

ವಿಕ್ಟೋರಿಯಾದಲ್ಲಿ 68 ಕೋಟಿ ರೂ ವೆಚ್ಚದ ಕಟ್ಟಡ

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್​ಐ) ಆಸ್ಪತ್ರೆಗಳಲ್ಲಿ ಒಳರೋಗಿಗಳ ಸೇವೆಗಾಗಿ 68.50 ಕೋಟಿ ರೂ. ವೆಚ್ಚದಲ್ಲಿ ಸಾವಿರ ಒಳರೋಗಿಗಳ ದಾಖಲು...

ಪೊಲೀಸರ ಹಸ್ತಕ್ಷೇಪಕ್ಕೆ ಕೋರ್ಟ್ ಕಿಡಿ

ಬೆಂಗಳೂರು: ಸ್ಥಿರಾಸ್ತಿ ವ್ಯಾಜ್ಯವೊಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲು ಖುದ್ದು ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿ ವಕೀಲರೊಬ್ಬರಿಗೆ ನೋಟಿಸ್ ನೀಡಿದ ಪ್ರಕರಣದಲ್ಲಿ ವಿಜಯನಗರ ಠಾಣೆ ಇನ್​ಸ್ಪೆಕ್ಟರ್...

ಗಣಿತಶಾಸ್ತ್ರಜ್ಞ, ತಂತ್ರಜ್ಞಾನ ನಿಪುಣ, ಇತಿಹಾಸ ಸಂಶೋಧಕ

ಎರಡು ಶತಮಾನಗಳ ಕಾಲ ಭಾರತದಲ್ಲಿ ಆಧಿಕಾರಿಕವಾಗಿ ತಳವೂರಿದ್ದ ಬ್ರಿಟಿಷರು ಭೌಗೋಳಿಕವಾಗಿ ಅಲ್ಲದೆ ಬೌದ್ಧಿಕವಾಗಿ- ಮಾನಸಿಕವಾಗಿಯೂ ಭಾರತೀಯರನ್ನು ದಾಸ್ಯಕ್ಕೊಳಪಡಿಸಲು ಪ್ರಯತ್ನಿಸಿದರು; ತಮ್ಮ ಇತಿಹಾಸ-ಸಂಸ್ಕೃತಿಗಳನ್ನು ಕುರಿತು ಭಾರತೀಯರಲ್ಲಿ ಕೀಳರಿಮೆ...

ಡಿಸೆಂಬರ್ 14 ರಂದು ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಡಾ. ಡಿ.ಎಸ್. ರ್ಕ ಸಾಹಿತ್ಯ ವೇದಿಕೆಯಿಂದ ಜಗದೀಶ ಶೆಟ್ಟರ್ ದತ್ತಿ ಆಶ್ರಯದಲ್ಲಿ ಕೊಡಮಾಡುವ ಪ್ರಸಕ್ತ ಸಾಲಿನ ಡಾ. ಡಿ.ಎಸ್. ರ್ಕ ಕಾವ್ಯ ಪ್ರಶಸ್ತಿಯು...

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ಅವರು ನನ್ನನ್ನು ಕೊಲೆ ಮಾಡಿಸಲು ತಮ್ಮ ಕಾರ್ಯಕರ್ತರನ್ನು ಕೆರಳಿಸಿದ್ದಾರೆ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಜೆಡಿಎಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ನಡೆದ ಅಧಿವೇಶನದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಸದನಕ್ಕೆ ಬರುವಾಗ ಕೆಲವರು ನಮ್ಮ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ತಂದೆ-ತಾಯಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ. ನಮ್ಮ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿದ್ದಾರೆ. ಇದರಿಂದ ಕಾರ್ಯಕರ್ತನಿಗೆ ಗಾಯವಾಗಿದೆ. ನಾನು ನಿಮ್ಮ ಗೂಂಡಾ ಪ್ರವೃತ್ತಿಗೆ ಹೆದರುವವನಲ್ಲ. ಗೂಂಡಾ ಪ್ರವೃತ್ತಿಗೆ ಹೋಗದಂತೆ ನಮ್ಮ ಕಾರ್ಯಕರ್ತರ ಬಳಿ ಮನವಿ ಮಾಡುತ್ತೇನೆ. ಪಕ್ಷ ನನ್ನ ಬೆಂಬಲಕ್ಕೆ ಇರಲಿದೆ ಎಂದು ಹೇಳಿದರು.

ಕೊಲೆ ಮಾಡುವ ಪ್ರಯತ್ನ ನಡೆಸಿದ್ದಾರೆ
ಇವರ ಗೂಂಡಾಗಿರಿಯನ್ನು ರಾಜ್ಯಾದ್ಯಂತ ಪ್ರವಾಸ ಮಾಡಿ ತಿಳಿಸುತ್ತೇವೆ. ಪ್ರೀತಂ ಗೌಡ ಮೇಲೆ ಗೂಂಡಾಗಿರಿ ನಡೆಸಿ, ಕೊಲೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗಮನಕ್ಕೂ ತರುತ್ತೇವೆ. ಕುಮಾರಸ್ವಾಮಿಯವರೇ ಈ ರೀತಿ ಗೂಂಡಾಗಿರಿ ಬಿಡಿ. ಇಂತ ಗೊಡ್ಡು ಬೆದರಿಕೆಗೆ ನಾವು ಮಣಿಯುವುದಿಲ್ಲ ಎಂದು ಬಿ.ಎಸ್​.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದರು.

ಪ್ರೀತಂ ಕುಟುಂಬಕ್ಕೆ ತೊಂದರೆಯಾದ್ರೆ ಸಿಎಂ ಹೊಣೆ
ಪ್ರೀತಂ ಗೌಡ ಅವರ ಕುಟುಂಬಕ್ಕೆ ತೊಂದರೆಯಾದರೆ ಅದಕ್ಕೆ ಸಿಎಂ ಕುಮಾರಸ್ವಾಮಿ ಅವರೇ ನೇರ ಹೊಣೆ. ಪ್ರೀತಂ ಬೆಳವಣಿಗೆ ಸಹಿಸದೆ ಈ ರೀತಿ ಮಾಡಿದ್ದಾರೆ. ಅವರು ಶಾಸಕರಾದಾಗಿನಿಂದಲೂ ಹೊಟ್ಟೆ ಉರಿ ಇದೆ. ದೌರ್ಜನ್ಯ ನಡೆಯುವಾಗ ಪೊಲೀಸರು ಸುಮ್ಮನಿದ್ದಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ಆರೋಪಿಸಿದರು. (ದಿಗ್ವಿಜಯ ನ್ಯೂಸ್​)

Stay connected

278,741FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...