ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ

ಅಕ್ರಮ ಬಂಧನದಲ್ಲಿರಿಸಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಪ್ರಕರಣ

ಹಾಸನ: ಬಾಲಕಿಯೊಬ್ಬಳನ್ನು ಅಪಹರಿಸಿ ನೆಲಮಂಗಲದ ಬಳಿ ಮನೆಯೊಂದರಲ್ಲಿ ಕೂಡಿಹಾಕಿ ನಿರಂತರ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 32 ಸಾವಿರ ರೂ. ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಚನ್ನರಾಯಪಟ್ಟಣ ತಾಲೂಕು ಅಣತಿ ಗ್ರಾಮದ ರೇಣುಕಾಪ್ರಸಾದ್ ಶಿಕ್ಷೆಗೆ ಒಳಗಾದವ. ಈತ ಅಪ್ರಾಪ್ತೆಯೊಬ್ಬಳನ್ನು 2014ರ ಅಕ್ಟೋಬರ್ 30 ರಂದು ಅಪಹರಿಸಿ ಬೆಂಗಳೂರು ಸಮೀಪದ ನೆಲಮಂಗಲದ ಬಳಿ ಶೋಭಾ ಎಂಬುವರ ಮನೆಯ ಮೂರನೇ ಮಹಡಿಯಲ್ಲಿ ಅಕ್ರಮ ಬಂಧನದಲ್ಲಿರಿಸಿ ನಿರಂತರ ಅತ್ಯಾಚಾರವೆಸಗಿದ್ದ. ಬಾಲಕಿ ಪಾಲಕರು ನೀಡಿದ ದೂರು ಆಧರಿಸಿ ನಗರದ ಬಡಾವಣೆ ಠಾಣೆ ಪೊಲೀಸರು ತನಿಖೆ ನಡೆಸಿ ರೇಣುಕಾಪ್ರಸಾದ್‌ನನ್ನು ಬಂಧಿಸಿ, ಇನ್ಸ್‌ಪೆಕ್ಟರ್ ಸಂಜೀವೆಂಗೌಡ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಚನ್ನಕೇಶವ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರು ವರ್ಷ ಸಾಧಾರಣ ಸಜೆ ಮತ್ತು 5 ಸಾವಿರ ರೂ. ದಂಡ, ಬಾಲಕಿಯನ್ನು ಅಕ್ರಮ ಬಂಧನದಲ್ಲಿರಿಸಿದ್ದಕ್ಕೆ 1 ವರ್ಷ ಶಿಕ್ಷೆ 2 ಸಾವಿರ ರೂ. ದಂಡ, ಪೋಕ್ಸೋ ಅಪರಾಧಕ್ಕೆ 10 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ವಿ.ಆರ್. ಉಪಾಧ್ಯ ವಾದ ಮಂಡಿಸಿದ್ದರು.
——–

One Reply to “ಅತ್ಯಾಚಾರಿಗೆ 10 ವರ್ಷ ಜೈಲು ಶಿಕ್ಷೆ”

Leave a Reply

Your email address will not be published. Required fields are marked *