ತಾಳಿಕೋಟೆ: ಜಾತ್ಯತೀತ, ಪಕ್ಷಾತೀತವಾಗಿ ತಾಲೂಕಿನ ಕನ್ನಡ ಅಭಿಮಾನಿಗಳು, ಸಾಹಿತಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳು ಹಗಲಿರುಳು ಶ್ರಮಿಸಿದ ಪರಿಣಾಮ ತಾಳಿಕೋಟೆ ಪ್ರಥಮ ಸಾಹಿತ್ಯ ಕನ್ನಡ ಸಮ್ಮೇಳನ ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಸಕರಾದ ಸಿ.ಎಸ್.ನಾಡಗೌಡ, ರಾಜುಗೌಡ ಪಾಟೀಲ, ಹಣಮಂತ ನಿರಾಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು ಶ್ಲಾಘನೀಯ. ಹಿರಿಯ ಸಾಹಿತಿ ಡಾ.ಗುರುಪಾದಪ್ಪ ಘೀವಾರಿ ಸರ್ವಾಧ್ಯಕ್ಷರಾಗಿದ್ದರಿಂದ ತಾಳಿಕೋಟೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮತ್ತಷ್ಟು ಗೌರವ ಬಂದಿದೆ. ಪತ್ರಿಕಾ ಮಾಧ್ಯಮದವರು ಹಾಗೂ ಸಮ್ಮೇಳನ ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.
ತಾಳಿಕೋಟೆ ಕಸಾಪ ಅಧ್ಯಕ್ಷ ರೇವಣಸಿದ್ದಪ್ಪ ಕೊಪ್ಪದ ಮಾತನಾಡಿ, ತಾಲೂಕಿನ ನಾಗರಿಕರು ತನು ಮನ ದನದಿಂದ ಸಮ್ಮೇಳನ ಯಶಸ್ವಿಗೊಳಿಸಿದ್ದು ಸ್ಮರಣೀಯ ಎಂದರು.
ಅಶ್ವಿನಿ ಜೋಗೂರ ಮಾತನಾಡಿ, ಸಮ್ಮೇಳನಕ್ಕೆ ಮಹಿಳಾ ಸಂಘಟನೆಗಳು ಬೆಂಬಲ ನೀಡಿ ಹಗಲಿರಳು ಶ್ರಮಿಸಿವೆ. ಕನ್ನಡ ಹಬ್ಬವನ್ನು ಯಶಸ್ವಿಗೊಳಿಸುವಲ್ಲಿ ಸಾಮೂಹಿಕ ಶ್ರಮ ಕಾರಣವಾಗಿದೆ ಎಂದರು.
ಆರ್.ಬಿ.ದಾನಿ, ಆರ್.ಬಿ.ದಮ್ಮೂರಮಠ, ಹಣಮಂತರಾಯ ಬಾಗೇವಾಡಿ, ಮಹಿಬೂಬ ಚೋರಗಸ್ತಿ, ಚನ್ನಬಸಯ್ಯ ಹಿರೇಮಠ, ಕಿರಣ ಪಾಟೀಲ, ಜೈಭೀಮ ಮುತ್ತಗಿ ಮಾತನಾಡಿದರು.
ಸಾಹಿತ್ಯ ಸಮ್ಮೇಳನದಲ್ಲಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದವರು ಹಾಗೂ ದಾನಿಗಳನ್ನು ಪರಿಷತ್‌ನಿಂದ ಗೌರವಿಸಲಾಯಿತು.
ಮುಖಂಡರಾದ ಜಗದೀಶ ಬೀಳೆಬಾವಿ, ಡಾ.ನಜೀರ ಕೋಳ್ಯಾಳ, ಆರ್.ವಿ.ಜಾಲವಾದಿ, ಎಂ.ಎ.ಬಾಗೇವಾಡಿ, ಆರ್.ಬಿ. ಪೊಲೀಸ್‌ಪಾಟೀಲ, ಎಂ.ಆರ್.ಕುಲಕರ್ಣಿ, ಬಿ.ಟಿ.ಸಜ್ಜನ, ಆರ್.ಎಸ್.ವಾಲಿಕಾರ, ಪ್ರಕಾಶ ಪಾಟೀಲ, ಸಂಗನಗೌಡ ಪಾಟೀಲ, ಸಾತಪ್ಪ ಗೊಂಗಡಿ, ಸಾಹೇಬಗೌಡ ಬಿರಾದಾರ, ನಾಗಪ್ಪ ಚಿನಗುಡಿ, ಎಸ್.ವಿ.ಜಾಮಗೊಂಡಿ, ರಾವುತ ಪೂಜಾರಿ, ಎಸ್.ವಿ.ಬೆನಕಟ್ಟಿ, ಪಾರೂಕ ಘಟನೂರ, ಅಶೋಕ ಕಟ್ಟಿ, ಮಲ್ಲಿಕಾರ್ಜುನ ಹಿಪ್ಪರಗಿ, ಎಂ.ಎಚ್.ಚೌಧರಿ, ಎಂ.ಎಚ್.ಹಂದ್ರಾಳ, ಜಾನಕಿ ಪತ್ತಾರ, ಸುವರ್ಣ ಗದಗಿನಮಠ ಇತರರಿದ್ದರು.