More

  ಹರಿಯಾಣ ಹುಡುಗನ ಚಿನ್ನದ ಬೇಟೆ, ಎಂಬಿಬಿಎಸ್ ವಿಭಾಗದಲ್ಲಿ 5 ಪದಕ ಮುಡಿಗೇರಿಸಿಕೊಂಡ ಮಯಾಂಕ್ ಅರೋರಾ

  ವಿಜಯಪುರ: ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಿಎಲ್‌ಡಿಇ ಡೀಮ್ಡ್ ವಿವಿಯ 11ನೇ ಘಟಿಕೋತ್ಸವದಲ್ಲಿ ಹರಿಯಾಣದ ಹುಡುಗ ಚಿನ್ನದ ಭರ್ಜರಿ ಬೇಟೆಯಾಡಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

  ಇಲ್ಲಿನ ವಿವಿ ಅಂಗಳದಲ್ಲಿ ಶುಕ್ರವಾರ ನಡೆದ 11ಘಟಿಕೋತ್ಸವದಲ್ಲಿ ಎಂಬಿಬಿಎಸ್ ವಿಭಾಗದಲ್ಲಿ 5 ಚಿನ್ನದ ಪದಕ ಪಡೆಯುವ ಮೂಲಕ ಹರಿಯಾಣ ಮೂಲದ ಮಯಾಂಕ ಅರೋರಾ ಗಮನ ಸೆಳೆದಿದ್ದಾರೆ.

  ಕಾರ್ಯಕ್ರಮದ ಬಳಿಕ ಸಂತಸ ಹಂಚಿಕೊಂಡ ಮಯಾಂಕ ಅರೋರಾ, ಎರಡು ಚಿನ್ನದ ಪದಕ ನಿರೀಕ್ಷಿಸಿದ್ದೆ. ಆದರೆ, ಐದು ಚಿನ್ನದ ಪದಕ ಬಂದಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಬಿಎಲ್ಡಿಇ ವಿವಿಯಲ್ಲಿರುವ ಕಲಿಕಾ ವಾತಾವರಣ, ಶಿಕ್ಷಕರ ಬೋಧನೆ, ಅತ್ಯುತ್ತಮ ಗ್ರಂಥಾಲಯ, ಸುಸಜ್ಜಿತ ಪ್ರಯೋಗಾಲಯ ಮತ್ತು ಆಸ್ಪತ್ರೆ, ಉಪನ್ಯಾಸಕರ ಮಾರ್ಗದರ್ಶನ ಹಾಗೂ ತಂದೆ- ತಾಯಿಯ ಸಂಪೂರ್ಣ ಸಹಕಾರ ಈ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದರು.

  ಹರಿಯಾಣಾದ ಸೋನಿಪತ ನಮ್ಮ ಊರು. ನನ್ನ ತಾಯಿ ಮೀನಾ ಶಿಕ್ಷಕಿಯಾಗಿದ್ದರೆ, ತಂದೆ ನವೀನ ಮೆಕ್ಯಾನಿಕಲ್ ಎಂಜಿನೀಯರ್ ಆಗಿದ್ದಾರೆ. ಬಾಲ್ಯದಿಂದಲೂ ಕಷ್ಟಪಟ್ಟು ಓದಿದ್ದೇನೆ. ಸತತ ಪರಿಶ್ರಮದಿಂದ ಈಗ ಉತ್ತಮ ಸಾಧನೆ ಮಾಡಿದ್ದು, ನನಗೆ ಸರ್ಕಾರಿ ಕೋಟಾದಲ್ಲಿ ನಾಗ್ಪೂರ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಸೀಟು ಸಿಕ್ಕಿದೆ. ಅಲ್ಲಿಯು ಉತ್ತಮ ಸಾಧನೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

  ಇದೇ ವೇಳೆ ಅರೀಬಾ ಅಹ್ಮದ ಮೂರು, ಡಾ. ಅನಘಾ ಕೃಷ್ಣನ್, ಡಾ. ಶುಭಂ ಸುಪ್ರೀಯಾ 1 ಚಿನ್ನದ ಪದಕ ಪಡೆದರೆ, ಡಾ. ಜ್ಯೋತಿ ಶರ್ಮಾ, ಡಾ. ಆಯೇಷಾ ಸಿದ್ದಿಕಿ, ಡಾ. ರಾಜನ ಕುಮಾರ, ಡಾ. ನೂಪುರ ದಹಿಯಾ ತಲಾ 1 ಚಿನ್ನದ ಪದಕ ಪಡೆದರು. ಡಾ. ಶಕ್ತಿಸ್ವರೂಪ ವಿಶ್ರಾ ನಗದು ಬಹುಮಾನ ಪಡೆದರು.

  ಘಟಿಕೋತ್ಸವದಲ್ಲಿ 9 ಪಿಎಚ್‌ಡಿ, 113 ಸ್ನಾತಕೋತ್ತರ ಪದವಿ, 1 ಎಂಸಿಎಚ್, 4 ಫೆಲೋಶಿಪ್, 205 ಎಂಬಿಬಿಎಸ್, 13 ಬಿಎಸ್‌ಸಿ(ಎಂಐಟಿ), 3 ಎಂಎಸ್‌ಸಿ ಹಾಗೂ 1 ಎಂಎಚ್‌ಎ ಪದವಿ ಮತ್ತು 17 ಚಿನ್ನದ ಪದಕಗಳು ಹಾಗೂ 3 ನಗದು ಬಹುಮಾನ ಸೇರಿದಂತೆ ಒಟ್ಟು 349 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts