ಬಾಲಕಿ ಗರ್ಭಿಣಿ, ಆರೋಪಿ ಪರಾರಿ

0 Min Read
ಬಾಲಕಿ ಗರ್ಭಿಣಿ, ಆರೋಪಿ ಪರಾರಿ

ಕಾಸರಗೋಡು: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹದಿನೇಳರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಆಸುಪಾಸಿನ 25ರ ಹರೆಯದ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಹೊರಬರುತ್ತಿದ್ದಂತೆ ಆರೋಪಿ ಗೋವಾಕ್ಕೆ ಪರಾರಿಯಾಗಿರುವುದಾಗಿ ಮಾಹಿತಿಯಿದೆ. ಬಾಲಕಿಗೆ ಹೊಟ್ಟೆನೋವು ಅನುಭವಕ್ಕೆ ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಐದು ತಿಂಗಳ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಬಗ್ಗೆ ಬಾಲಕಿ ಮನೆಯವರು ಪೊಲೀಸರಿಗೆ ನೀಡಿದ ದೂರಿನನ್ವಯ ಕೇಸು ದಾಖಲಾಗಿದೆ.

See also  ಗಾಂಜಾ ಮಾರಾಟ ಮಾಡುತ್ತಿದ್ದವನ ಬಂಧನ
Share This Article