ಲೌಸನ್ನೆ: ಭಾರತ ಹಾಕಿ ತಂಡದ ನಾಯಕ ಹರ್ಮಾನ್‌ಪ್ರೀತ್ ಸಿಂಗ್, ದಿಗ್ಗಜ ಪಿಆರ್ ಶ್ರೀಜೇಶ್ ಕ್ರಮವಾಗಿ ಎಫ್ಐಎಚ್ ವರ್ಷದ ಆಟಗಾರ ಹಾಗೂ ವರ್ಷದ ಗೋಲು ಕೀಪರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಓಮನ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದ 49ನೇ ಎ್ಐಎಚ್ ಕಾರ್ಯಕ್ರಮದಲ್ಲಿ ಈ ಇಬ್ಬರು ಆಟಗಾರರಿಗೆ ಪ್ರಶಸ್ತಿ ವಿತರಿಸಲಾಯಿತು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹರ್ಮಾನ್‌ಪ್ರೀತ್, ಕೂಟದಲ್ಲಿ ಗರಿಷ್ಠ 10 ಗೋಲು ದಾಖಲಿಸಿದ್ದರು. ಹರ್ಮಾನ್‌ಪ್ರೀತ್ ಪ್ರಶಸ್ತಿ ರೇಸ್‌ನಲ್ಲಿ ನೆದರ್ಲೆಂಡ್‌ನ ಜೊಪ್ ಡಿ ಮೊಲ್, ಥಿರ‌್ರೆ ಬ್ರಿಕ್‌ಮನ್, ಜರ್ಮನಿಯ ಹ್ಯಾನ್ಸೆ ಮುಲ್ಲರ್ ಹಾಗೂ ಇಂಗ್ಲೆಂಡ್ ಜ್ಯಾಕ್ ವಾಲೆಸೆ ಅವರನ್ನು ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು. 2020-21, 2021-22ರಲ್ಲಿಯೂ ವರ್ಷದ ಆಟಗಾರ ಪ್ರಶಸ್ತಿ ಪಡೆದಿದ್ದ ಹರ್ಮಾನ್‌ಪ್ರೀತ್‌ಗೆ ಇದು ಮೂರನೇ ಪ್ರಶಸ್ತಿಯಾಗಿದೆ.
ಅವಳಿ ಒಲಿಂಪಿಕ್ಸ್ ಪದಕ ಗೆದ್ದ ಬಳಿಕ ಹಾಕಿಯಿಂದ ನಿವೃತ್ತಿ ಹೊಂದಿರುವ ಭಾರತೀಯ ಹಾಕಿಯ ಗೋಡೆ ಖ್ಯಾತಿಯ ಪಿಆರ್ ಶ್ರೀಜೇಶ್, ಮೂರನೇ ಬಾರಿಗೆ ಎ್ಐಎಚ್ ವರ್ಷದ ಗೋಲು ಕೀಪರ್‌ಗೆ ಪಾತ್ರರಾಗಿದ್ದಾರೆ. ಟೋಕಿಯೊ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಭಾರತ ತಂಡದ ಗೋಲು ಕೀಪರ್ 41 ವರ್ಷದ ಶ್ರೀಜೇಶ್ 2020-21, 2021-22ರಲ್ಲಿ ಸತತ 2 ವರ್ಷದ ಈ ಪ್ರಶಸ್ತಿ ಒಲಿಸಿಕೊಂಡಿದ್ದರು.