ಬ್ರಬೋರ್ನ್: ನಾಯಕಿ ಹರ್ಮಾನ್‌ಪ್ರೀತ್ ಕೌರ್ (54 ರನ್,33 ಎಸೆತ, 9 ಬೌಂಡರಿ) ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮೂರನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಗುಜರಾತ್ ಜೈಂಟ್ಸ್ ಎದುರು 9 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಹರ್ಮಾನ್‌ಪ್ರೀತ್ ಬಳಗ ಅಂಕಪಟ್ಟಿಯ ಎರಡನೇ ಸ್ಥಾನಕ್ಕೇರಿದ್ದು, ಕೊನೇ ಲೀಗ್ ಪಂದ್ಯದಲ್ಲೂ ಗೆದ್ದರೆ ನೇರವಾಗಿ ೈನಲ್‌ಗೇರುವ ಅವಕಾಶ ಹೊಂದಿದೆ.
ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ಸಾಧಾರಣ ಆರಂಭ ಪಡೆಯಿತು. ಆಲ್ರೌಂಡರ್ ನ್ಯಾಟ್ ಸೀವರ್ ಬ್ರಂಟ್ (38) ಹಾಗೂ ಹರ್ಮಾನ್‌ಪ್ರೀತ್ ಜತೆಯಾಟದ ನೆರವಿನಿಂದ 5 ವಿಕೆಟ್‌ಗೆ 179 ರನ್‌ಗಳ ಕಠಿಣ ಗುರಿ ನೀಡಿತು. ಪ್ರತಿಯಾಗಿ 92 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಗುಜರಾತ್ ಜೈಂಟ್ಸ್ ಚೇಸಿಂಗ್‌ನಲ್ಲಿ ಲಯ ತಪ್ಪಿತು. ಆಗ ಭಾರತಿ ುಲ್‌ಮಲಿ (61 ರನ್, 25 ಎಸೆತ, 8 ಬೌಂಡರಿ,4 ಸಿಕ್ಸರ್) ನಡೆಸಿದ ಏಕಾಂಗಿ ಹೋರಾಟದ ನಡುವೆಯೂ 9 ವಿಕೆಟ್‌ಗೆ 170 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಹ್ಯಾಲೆ ಮ್ಯಾಥ್ಯೂಸ್ ಎಸೆದ ಅಂತಿಮ ಓವರ್‌ನಲ್ಲಿ 13 ರನ್ ಬೇಕಿದ್ದಾಗ ಗುಜರಾತ್ 3 ರನ್ ಮಾತ್ರ ಗಳಿಸಿತು.
ಮುಂಬೈ ಇಂಡಿಯನ್ಸ್: 5 ವಿಕೆಟ್‌ಗೆ 179 (ಹ್ಯಾಲೆ ಮ್ಯಾಥ್ಯೂಸ್ 27, ಅಮೆಲಿಯಾ ಕೆರ್ 5, ನ್ಯಾಟ್ ಸೀವರ್ ಬ್ರಂಟ್ 38, ಹರ್ಮಾನ್‌ಪ್ರೀತ್ 54, ಅಮನ್‌ಜೋತ್ 27, ಸಜನಾ 11*, ಯಸ್ತಿಕಾ 13, ಆಶ್ಲೇ ಗಾರ್ಡ್‌ನರ್ 27ಕ್ಕೆ 1, ಪ್ರಿಯಾ ಮಿಶ್ರಾ 23ಕ್ಕೆ 1).
ಗುಜರಾತ್ ಜೈಂಟ್ಸ್:9 ವಿಕೆಟ್‌ಗೆ 170 (ಬೆತ್ ಮೂನಿ 7, ಕಾಶ್ವಿ 10, ಹರ್ಲಿನ್ ಡಿಯೋಲ್ 24, ಗಾರ್ಡ್‌ನರ್ 0, ಲಿಚ್ಛಿಫೀಲ್ಡ್ 22, ಡಿಯೆಂಡ್ರಾ 10, ಭಾರತಿ 61, ಸಿಮ್ರನ್ 18, ತನುಜಾ 10, ಮ್ಯಾಥ್ಯೂಸ್ 38ಕ್ಕೆ 2, ಶಬ್ನಿಮ್ 17ಕ್ಕೆ 2, ಅಮೆಲಿಯಾ 34ಕ್ಕೆ 3).