ಎನ್​ಕೌಂಟರ್​ನಲ್ಲಿ ಉಗ್ರ ಇಷ್ಪಾಕ್ ಹತ

ಶ್ರೀನಗರ: ಜಮ್ಮು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಭದ್ರತಾಪಡೆಗಳು ಶುಕ್ರವಾರ ನಡೆಸಿದ ಎನ್​ಕೌಂಟರ್​ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರ ಇಷ್ಪಾಕ್ ಅಹ್ಮದ್ ಸೋಫಿ ಹತನಾಗಿದ್ದಾನೆ. ಈತ ಜಮ್ಮು- ಕಾಶ್ಮೀರದಲ್ಲಿ ಐಸಿಸ್ ಚಟುವಟಿಕೆಯಲ್ಲಿ ನಿರತನಾಗಿದ್ದ ಎನ್ನಲಾಗಿದೆ. ದಕ್ಷಿಣ ಕಾಶ್ಮೀರದ ಅಮಿಶಪೊ ರಾದ ರಮಣಗಿರಿ ಪ್ರದೇಶದಲ್ಲಿ ಕೆಲ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಭದ್ರತಾಪಡೆಗಳ ಮೇಲೆ ಇಷ್ಪಾಕ್ ಗುಂಡು ಹಾರಿಸಿದ. ಆಗ ಅವನನ್ನು ಹೊಡೆದುರುಳಿಸಲಾಯಿತು. ಎನ್​ಕೌಂಟರ್ ಆರಂಭವಾಗುತ್ತಿದ್ದಂತೆ ಉಳಿದ ಉಗ್ರರು ಪರಾರಿಯಾಗಿದ್ದಾರೆ. ಸೇನಾ ಶಿಬಿರ ಮತ್ತು ಪೊಲೀಸ್ ಠಾಣೆಗಳ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಇಷ್ಪಾಕ್ ಪಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. – ಏಜೆನ್ಸೀಸ್