Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ವಿಶ್ವ ರಕ್ತದಾನಿಗಳ ದಿನದಂದೇ ಗರ್ಭಿಣಿಗೆ ಅನಿರೀಕ್ಷಿತವಾಗಿ ರಕ್ತದಾನ ಮಾಡಿದ ಹರಿಪ್ರಿಯಾ

Thursday, 14.06.2018, 6:56 PM       No Comments

ಬೆಂಗಳೂರು: ಇಂದು ವಿಶ್ವ ರಕ್ತದಾನಿಗಳ ದಿನ. ಸ್ಯಾಂಡಲ್​ವುಡ್​ ನಟಿ ಹರಿಪ್ರಿಯ ಇದೇ ಮೊದಲ ಬಾರಿಗೆ, ಅದೂ ಅನಿರೀಕ್ಷಿತವಾಗಿ ಗರ್ಭಿಣಿಯೊಬ್ಬರಿಗೆ ರಕ್ತದಾನ ಮಾಡಿದ್ದಾರೆ. ಆ ಗರ್ಭಿಣಿ ಅವಳಿ ಮಕ್ಕಳಿಗೆ ಜನ್ಮವನ್ನೂ ನೀಡಿದ್ದಾರೆ.

ಹೌದು ರಕ್ತ ದಾನ ಮಾಡಿದ ಬಗ್ಗೆ ಹರಿಪ್ರಿಯ ಅವರು ಸಾಮಾಜಿಕ ತಾಣ ಇನ್​ಸ್ಟಾಗ್ರಾಂನಲ್ಲಿ ಸ್ಟೇಟಸ್​ ಹಾಕಿದ್ದಾರೆ.

ಏನು ಬರೆದುಕೊಂಡಿದ್ದಾರೆ ಅವರು?

ಗರ್ಭಿಣಿಯೊಬ್ಬರಿಗೆ ರಕ್ತ ಬೇಕಾದ ಬಗ್ಗೆ ಟ್ವಿಟರ್​ನಲ್ಲಿ ಹಾಕಲಾಗಿದ್ದ ಸಂದೇಶವೊಂದನ್ನು ಗಮನಿಸಿದೆ. ಹಾಗಾಗಿ ರಕ್ತದಾನಕ್ಕೆಂದು ಆಸ್ಪತ್ರೆಗೆ ತೆರಳಿದೆ. ಇದು ನನ್ನ ಮೊದಲನೇ ಬಾರಿಯ ರಕ್ತದಾನ. ಮೊದಲ ಬಾರಿಯಾದ್ದರಿಂದ ನನಗೆ ಭಯವಾಗಿತ್ತು. ಏನಾದರೂ ಆಗಲಿ ರಕ್ತದಾನ ಮಾಡುವ ನಿರ್ಧಾರವನ್ನು ನಾನು ಕೈಗೊಂಡೆ. ಹೆರಿಗೆ ಸಂದರ್ಭದಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ನಾನು ಸಕಾಲದಲ್ಲಿ ರಕ್ತದಾನ ಮಾಡಿದೆ. ಆ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಕೆಗೆ ನೆರವಾಗಿದ್ದಕ್ಕೆ ನನಗೆ ಸಂತೋಷವಾಯಿತು. ಆ ತೃಪ್ತಿಯನ್ನು ನಾನು ಪದಗಳಲ್ಲಿ ಬಣ್ಣಿಸಲಾರೆ. ರಕ್ತದಾನ ಮಾಡಲು ಎಲ್ಲರಿಗೂ ಪ್ರೋತ್ಸಾಹಿಸೋಣ,” ಎಂದು ಹರಿಪ್ರಿಯ ಸ್ಟೇಟಸ್​ ಹಾಕಿದ್ದಾರೆ.

ಈ ಮೂಲಕ ಮೊದಲ ಬಾರಿಗೆ, ಅದೂ ಗರ್ಭಿಣಿಗೆ ನೆರವಾಗುವ ಮೂಲಕ ವಿಶ್ವ ರಕ್ತದಾನಿಗಳ ದಿನದಂದು ಹರಿಪ್ರಿಯ ಅವರು ರಕ್ತದಾನಕ್ಕೆ ಪ್ರೇರಣೆ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top