ಊರಮ್ಮ ಉತ್ಸವ ಸಮಿತಿಗೆ ಅನ್ಯ ಗ್ರಾಮಸ್ಥರ ಆಯ್ಕೆಗೆ ವಿರೋಧ

blank

ಹರಿಹರ: ಮುಂದಿನ ವರ್ಷ ಮಾರ್ಚ್‌ನಲ್ಲಿ ಆಯೋಜಿಸಿರುವ ಗ್ರಾಮ ದೇವತೆ ಹಬ್ಬದ ಉತ್ಸವ ಸಮಿತಿಗೆ ಪರಸ್ಥಳದ ಹಾರ್ನಳ್ಳಿ ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಮಹಜೇನಹಳ್ಳಿ ಭಾಗದ ಮುಖಂಡರು ಹೇಳಿದರು.

Contents
ಹಾರ್ನಳ್ಳಿ ಮಂಜುನಾಥ್ ಅಧ್ಯಕ್ಷ: ಹರಿಹರ: ನಗರದ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬದ ಉತ್ಸವ ಸಮಿತಿ ಅಧ್ಯಕ್ಷರಾಗಿ ಹಾರ್ನಳ್ಳಿ ಮಂಜುನಾಥ್, ಕಾರ್ಯದರ್ಶಿಯಾಗಿ ಹಳ್ಳದಕೇರಿಯ ಬಿ.ಕೆ. ಗಿರೀಶ್, ಸಹ ಕಾರ್ಯದರ್ಶಿಯಾಗಿ ದೊಗಳ್ಳಿ ಸಿದ್ದಪ್ಪ ಅವರನ್ನು ಆಯ್ಕೆ ಮಾಡಲಾಯಿತು.ನಗರದ ಶಿವಮೊಗ್ಗ ರಸ್ತೆಯ ಮಹಾಜೇನಹಳ್ಳಿ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಮಹಾಜೇನಹಳ್ಳಿ ಭಾಗದ ಗೌಡ್ರು ಮತ್ತು ಶಾನುಭೋಗರು ಮತ್ತು ಮುಖಂಡರು ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.ಸಭೆಯಲ್ಲಿ ಗೌಡ್ರು ಚನ್ನಬಸಪ್ಪ, ಶಾನುಭೋಗರ ಗಿರೀಶ್, ಬಣಕಾರ್ ಆಂಜನೇಯ, ಮಾಜಿ ಶಾಸಕ ಎಸ್. ರಾಮಪ್ಪ, ನಗರಸಭಾ ಸದಸ್ಯರಾದ ದಿನೇಶ್ ಬಾಬು, ಎಸ್.ಎಂ. ವಸಂತ್, ಮುಖಂಡರಾದ ಹಂಚಿನ ನಾಗಣ್ಣ, ಎಚ್.ಎಂ. ಶಿವಾನಂದಪ್ಪ, ಕಳ್ಳೇರ್ ಮಂಜುನಾಥ್, ಬ್ಯಾಂಕ್ ಶಿವಪ್ಪ, ಪಾಲಾಕ್ಷಪ್ಪ, ಮುದೇಗೌಡರು ಪ್ರಭುದೇವ್, ಶೇರಾಪುರ ರಾಜಶೇಖರ, ಮಂಜಣ್ಣ, ಸಂಗಮೇಶ್, ಡಿ. ಸಿದ್ದೇಶ್, ಡಿ. ವಸಂತ, ರಾಜು ರೋಖಡೆ, ಸುನೀಲ್‌ಕುಮಾರ್, ಆನಂದ, ಎ.ಸಿ. ರವಿ ರಾಯ್ಕರ್, ಹುಚ್ಚಪ್ಪ ಬಸವರಾಜ ಇತರರಿದ್ದರು.

ಹಾರ್ನಳ್ಳಿ ಮಂಜುನಾಥ್ ಮೂಲತಃ ಹರಿಹರದವರಲ್ಲ. ಅದರಲ್ಲೂ ಹೆಚ್ಚು ಕಾಲ ಕಸಬಾ ನಿವಾಸಿಯಾಗಿದ್ದು, ಇತ್ತೀಚೆಗೆ ಮಹಜೇನಹಳ್ಳಿ ಭಾಗಕ್ಕೆ ಬಂದಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಹಜೇನಹಳ್ಳಿ ಹಿಂದಿನ ಉತ್ಸವ ಸಮಿತಿಯ ಖಜಾಂಚಿ ಶೇರಾಪುರ ರಾಜಶೇಖರ್ ಆರೋಪಿಸಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ಗೊಂದಲ ಏರ್ಪಟ್ಟಾಗ ಮುಖಂಡರು ಪ್ರತ್ಯೇಕ ಕೊಠಡಿಯಲ್ಲಿ ಚರ್ಚಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದಿನ ಮಂಗಳವಾರಕ್ಕೆ ಮುಂದೂಡಿದ್ದಾಗಿ ತಿಳಿಸಿದ್ದರಿಂದ ಬಹುತೇಕರು ನಿರ್ಗಮಿಸಿದ್ದರು. ಇದರ ನಂತರ ಮುಖಂಡರು ದಿಢೀರನೆ ಹಾರ್ನಳ್ಳಿ ಮಂಜುನಾಥ್ ಅವರನ್ನು ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಎಸ್.ರಾಮಪ್ಪ ಘೋಷಿಸಿರುವುದನ್ನು ನಾವು ಒಪ್ಪುವುದಿಲ್ಲ ಎಂದರು. ಈ ಹಿಂದೆ ನಡೆದ ಉತ್ಸವ ಸಮಿತಿಯಲ್ಲಿ ಅಮರಾವತಿ ಮಂಡಕ್ಕಿ ರೇವಣಸಿದ್ದಪ್ಪರನ್ನು ಸಮಿತಿಗೆ ನೇಮಿಸುವ ವೇಳೆ ಕೆಲವರು ಅವರನ್ನು ಮೂಲತಃ ಹರಿಹರದವರಲ್ಲ ಎಂದು ತಿರಸ್ಕರಿಸಿದ್ದರು. ಹಾಗೆಯೇ ಈಗ ಅಧ್ಯಕ್ಷರಾದವರು ಸಹ ಹರಿಹರದವರಲ್ಲ, ಇವರನ್ನೂ ನಾವು ಒಪ್ಪುವುದಿಲ್ಲ ಎಂದು ವಿರೋಧಿಸಿದರು.

ಅಲ್ಲದೆ, ಅಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿಯನ್ನು ಘೋಷಿಸುವ ಸಂಪ್ರದಾಯ ಮತ್ತು ಅಧಿಕಾರ ಚನ್ನಬಸಪ್ಪ ಗೌಡರಿಗೆ ಮಾತ್ರ ಇದೆ. ಆದರೆ, ಅವರ ಬದಲು ಮಾಜಿ ಶಾಸಕ ಎಸ್. ರಾಮಪ್ಪ ಘೋಷಿಸಿರುವುದು ಅಧಿಕೃತವಾಗುವುದಿಲ್ಲ. ಆಕಾಂಕ್ಷಿಗಳು ಜಾಸ್ತಿ ಇದ್ದಾಗ ಕೈ ಎತ್ತುವ ಮೂಲಕ ಅಥವಾ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಬೇಕು. ಅದು ಬಿಟ್ಟು ತಮಗೆ ಬೇಕಾದವರನ್ನು ಆಯ್ಕೆ ಮಾಡುವುದು ಸರಿಯಲ್ಲ ಹಾಗೂ ಇದು ರಾಜಕೀಯವಲ್ಲ ಎಂಬುದನ್ನು ತಿಳಿಯಬೇಕು ಎಂದರು.

ಒಂದು ವೇಳೆ ಇವರನ್ನೇ ಮುಂದುವರಿಸಿದರೆ ಮಹಾಜೇನಹಳ್ಳಿ ಭಾಗದವರು ಉತ್ಸವದಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗಾಗಿ, ಕೂಡಲೇ ಮತ್ತೆ ಸಭೆ ಕರೆದು ಎಲ್ಲ ಗೊಂದಲಕ್ಕೆ ತೆರೆ ಎಳೆಯಬೇಕು. ಜನ ಬೆಂಬಲ ಇದ್ದವರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ದಿನೇಶ್‌ಬಾಬು, ಗಂಗಾಧರ್, ಪಾಲಾಕ್ಷಪ್ಪ ಮಂಕ್ರಿ, ಶ್ರೀಕಾಂತ್ ಮೆಹರವಾಡೆ. ಬೆಳಕೆರೆ ನಾಗಣ್ಣ, ಬಾಂಬೆ ನಾಗಣ್ಣ, ಹಂಚಿನ ಮನೆ ದೇವೇಂದ್ರಪ್ಪ, ಡಿ.ಸಿದ್ದೇಶ್, ಮಾಕನೂರ್ ತಿಪ್ಪೇಶ್, ಬಸವನಗೌಡ್ರು ಇತರರಿದ್ದರು.

ಹಾರ್ನಳ್ಳಿ ಮಂಜುನಾಥ್ ಅಧ್ಯಕ್ಷ: ಹರಿಹರ: ನಗರದ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬದ ಉತ್ಸವ ಸಮಿತಿ ಅಧ್ಯಕ್ಷರಾಗಿ ಹಾರ್ನಳ್ಳಿ ಮಂಜುನಾಥ್, ಕಾರ್ಯದರ್ಶಿಯಾಗಿ ಹಳ್ಳದಕೇರಿಯ ಬಿ.ಕೆ. ಗಿರೀಶ್, ಸಹ ಕಾರ್ಯದರ್ಶಿಯಾಗಿ ದೊಗಳ್ಳಿ ಸಿದ್ದಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ನಗರದ ಶಿವಮೊಗ್ಗ ರಸ್ತೆಯ ಮಹಾಜೇನಹಳ್ಳಿ ಗ್ರಾಮದೇವತೆ ಊರಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಮಹಾಜೇನಹಳ್ಳಿ ಭಾಗದ ಗೌಡ್ರು ಮತ್ತು ಶಾನುಭೋಗರು ಮತ್ತು ಮುಖಂಡರು ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.

ಸಭೆಯಲ್ಲಿ ಗೌಡ್ರು ಚನ್ನಬಸಪ್ಪ, ಶಾನುಭೋಗರ ಗಿರೀಶ್, ಬಣಕಾರ್ ಆಂಜನೇಯ, ಮಾಜಿ ಶಾಸಕ ಎಸ್. ರಾಮಪ್ಪ, ನಗರಸಭಾ ಸದಸ್ಯರಾದ ದಿನೇಶ್ ಬಾಬು, ಎಸ್.ಎಂ. ವಸಂತ್, ಮುಖಂಡರಾದ ಹಂಚಿನ ನಾಗಣ್ಣ, ಎಚ್.ಎಂ. ಶಿವಾನಂದಪ್ಪ, ಕಳ್ಳೇರ್ ಮಂಜುನಾಥ್, ಬ್ಯಾಂಕ್ ಶಿವಪ್ಪ, ಪಾಲಾಕ್ಷಪ್ಪ, ಮುದೇಗೌಡರು ಪ್ರಭುದೇವ್, ಶೇರಾಪುರ ರಾಜಶೇಖರ, ಮಂಜಣ್ಣ, ಸಂಗಮೇಶ್, ಡಿ. ಸಿದ್ದೇಶ್, ಡಿ. ವಸಂತ, ರಾಜು ರೋಖಡೆ, ಸುನೀಲ್‌ಕುಮಾರ್, ಆನಂದ, ಎ.ಸಿ. ರವಿ ರಾಯ್ಕರ್, ಹುಚ್ಚಪ್ಪ ಬಸವರಾಜ ಇತರರಿದ್ದರು.

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…