ಹರಿಹರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರೀಡಾ ದಿನ

ಹರಿಹರ: ಸಾಧನೆ ಸಾಧಕನ ಸ್ವತ್ತು. ಸತತ ಅಭ್ಯಾಸ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ದೊರೆಯುತ್ತದೆ ಎಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನ್ಲಿ ಆಂಥೋನಿ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ಅಮರಾವತಿಯಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕ್ರೀಡಾ ದಿನ’ದ ಉದ್ಘಾಟನೆ ಸಮಾರಂಭದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಬಡ ಹಾಗೂ ಮಧ್ಯಮ ವರ್ಗದಲ್ಲಿ ಜನಿಸಿದ ಸಾಮಾನ್ಯ ವ್ಯಕ್ತಿಗಳು ನಿರಂತರ ಪರಿಶ್ರಮದಿಂದ ಗುರಿ ಸಾಸುವ ಮೂಲಕ ಸಾಧಕರಾಗಿದ್ದಾರೆ. ಪ್ರತಿಯೊಬ್ಬರೂ ಕಠಿಣ ಪರಿಶ್ರಮದ ಮೂಲಕ ಸಾಧಕರಾಗಬಹುದು. ನನ್ನ ಸಾಧನೆಗೆ ಪಾಲಕರ ಪ್ರೋತ್ಸಾಹ ಹಾಗೂ ಗುರುಗಳ ಮಾರ್ಗದರ್ಶನ ಕಾರಣ ಎಂದರು.

ಕಾಲೇಜಿನ ಮುಖ್ಯಸ್ಥ ಾ.ಎರಿಕ್ ಮಥಾಯಸ್ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಮಹತ್ವಾಕಾಂಕ್ಷೆ, ಸಮರ್ಪಣಾ ಮನೋಭಾವ ಹಾಗೂ ಸಾಸುವ ಸಂಕಲ್ಪ ಗುಣವಿರಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಾ.ಸಂತೋಷ್ ರ್ನಾಂಡಿಸ್, ಕಾಲೇಜಿನ ಹಣಕಾಸು ಮೇಲಾಧಿಕಾರಿ ಾ.ಪ್ರದೀಪ್ ಸಿಕ್ವೇರಾ ಹಾಗೂ ಉಪ ಪ್ರಾಂಶುಪಾಲ ್ರಾನ್ಸಿನ್ ರ್ನಾಂಡಿಸ್ ಉಪಸ್ಥಿತರಿದ್ದರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.