harihara water problem

ಇಂಗು ಗುಂಡಿ ನಿರ್ಮಿಸುವಂತೆ ಮನವಿ

ಹರಿಹರ: ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿನ ಸಮಸ್ಯೆ ತಪ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಸದಸ್ಯರು ಕೋಡಿಯಾಲ-ಹೊಸಪೇಟೆ ಪಿಡಿಒ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.

ಭವಿಷ್ಯದಲ್ಲಿ ತಲೆದೋರುವ ಜಲಕ್ಷಾಮ ತಪ್ಪಿಸಲು ಮುಂಜಾಗ್ರತೆ ವಹಿಸುವುದು ಪ್ರತಿ ನಾಗರಿನ ಕರ್ತವ್ಯ. ದಿನದಿಂದ ದಿನಕ್ಕೆ ಭೂಮಿ ತಾಪಮಾನ ಹೆಚ್ಚಾಗುತ್ತಿದೆ. ತೇವಾಂಶ ಕಡಿಮೆಯಾಗಿ ಗಿಡ, ಮರಗಳು ಒಣಗುತ್ತಿವೆ. ಆದ್ದರಿಂದ ಮಳೆ ಬರುವ ವೇಳೆಗೆ ಇಂಗುಗುಂಡಿಗಳನ್ನು ನಿರ್ಮಿಸಿದರೆ ಅಂತರ್ಜಲ ಹೆಚ್ಚಾಗಲು ಸಹಾಯವಾಗುತ್ತದೆ ಎಂದು ಮನವಿ ಮಾಡಿದರು.

ಸಾರ್ವಜನಿಕ ಹಿತಾಸಕ್ತಿ ವೇದಿಕೆ ಅಧ್ಯಕ್ಷ ಡಾ.ಜಿ.ಜೆ. ಮೆಹೆಂದಳೆ, ಗ್ರಾಸಿಂ ಕಾರ್ಖಾನೆ ಗ್ರಾಮಾಭಿವೃದ್ಧಿ ಅಧಿಕಾರಿಗಳಾದ ರೇಣುಕಮ್ಮ, ದಿನೇಶನಾಯ್ಕ, ಪಂಚಾಯಿತಿ ಉಪಾಧ್ಯಕ್ಷ ದಿನೇಶ ಹರಳೆಪ್ಪನವರ, ಸದಸ್ಯರಾದ ಬಸವಣ್ಣೆಪ್ಪ, ಎಂ.ಎಚ್. ಪ್ರಭುಗೌಡ ಇದ್ದರು.

One Reply to “ಇಂಗು ಗುಂಡಿ ನಿರ್ಮಿಸುವಂತೆ ಮನವಿ”

  1. ಈ ಕಾರ್ಯವನ್ನು ಎಲ್ಲಾ ಕಡೆಯೂ ಕೂಡಲೇ ಕೈಗೆತ್ತುಕೊಳ್ಳಬೇಕು.

Leave a Reply

Your email address will not be published. Required fields are marked *