ಹರಿಹರ: ವಾಲ್ಮೀಕಿ, ಮೂಡ ಮತ್ತಿತರ ಹಗರಣಗಳನ್ನು ಮರೆಮಾಚಿಸಲು ರಾಜ್ಯ ಸರ್ಕಾರ ವಕ್ಫ್ ಬೋರ್ಡ್ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಅರಾಜಕತೆ ಉಂಟು ಮಾಡುತ್ತಿದೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷ ನಗರ ಹಾಗೂ ಗ್ರಾಮಾಂತರ ಘಟಕದಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ಭ್ರಷ್ಟಾಚಾರ ಹಗರಣಗಳ ಸುಳಿಯಲ್ಲಿ ಸಿಲುಕಿದ್ದ ವೇಳೆ ಮತ ಬ್ಯಾಂಕ್ ರಾಜಕಾರಣಕ್ಕಾಗಿ ವಕ್ಫ್ ಮಂಡಳಿ ಕಾಯ್ದೆ ಜಾರಿಗೆ ತಂದರು. ನಂತರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದರು. ಅದೇ ಮಾದರಿಯಲ್ಲಿ ವಕ್ಫ್ ಆಸ್ತಿಯ ವಿವಾದವನ್ನು ಸಚಿವ ಜಮೀರ್ ಅಹಮದ್ ಸೃಷ್ಟಿ ಮಾಡಿ ರಾಜ್ಯ ಜನ ಆತಂಕದಲ್ಲಿರುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯ ಆಟೋ ಹನುಮಂತಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಬಿಜೆಪಿ ನಗರಾಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್ ಕಾರ್ಯದರ್ಶಿ ಎಚ್. ಮಂಜನಾಯ್ಕ, ತುಳಜಪ್ಪ ಭೂತೆ, ಕೆ.ಎಸ್.ಹಳ್ಳಿ.ಮಹಾಂತೇಶ್, ವೀರೇಶ್ ಆದಾಪುರ, ರಾಜು ರೋಖಡೆ, ಪರಶುರಾಮ್ ಕಾಟ್ವೆ, ಬಾತಿ ಚಂದ್ರಶೇಖರ್ ಇತರರಿದ್ದರು.