blank

ಶ್ರಮಜೀವಿ ರಿಯಲ್ ಉದ್ಯಮಿ ವಿ.ಎಂ.ರಾಜೇಶ್: ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡ ಸಾಧಕ | ಇತರರಿಗೆ ಸ್ಪೂರ್ತಿದಾಯಕ

blank

ಜೀವನ ಕಟ್ಟಿಕೊಳ್ಳಲು ಬರಿಗೈನಲ್ಲಿ ಬೆಂಗಳೂರಿಗೆ ಬಂದ ವಿ.ಎಂ. ರಾಜೇಶ್ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಧನೆಗೈದಿದ್ದಾರೆ. ಜೀರೋದಿಂದ ಹೀರೋ ಆಗಿ ಹೊರಹೊಮ್ಮಿದ ರಾಜೇಶ್​ಗೆ ವಿಜಯವಾಣಿ ಕೊಡಮಾಡುವ ‘ವಿಜಯರತ್ನ’ ಪ್ರಶಸ್ತಿ ಸಂದಿದೆ.

ಬೆಂಗಳೂರು: ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆ ಇದ್ದರೆ ಯಾವ ಮಟ್ಟಕ್ಕೆ ಬೆಳೆಯಬಹುದು ಎಂಬುದಕ್ಕೆ ಈ ಸಾಧಕ ಜ್ವಲಂತ ಉದಾಹರಣೆ. ಇವರ ಹೆಸರು ವಿ.ಎಂ. ರಾಜೇಶ್, ಶರಣ್ಯ ಫಾಮ್್ಸರ್ ಮಾಲೀಕರು. ಸೋಲನ್ನೆ ಗೆಲುವಿನ ಮೆಟ್ಟಿಲು ಮಾಡಿಕೊಂಡು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆಗೈದಿದ್ದು, ಇತರರಿಗೆ ಸ್ಪೂರ್ತಿದಾಯಕರಾಗಿದ್ದಾರೆ.

ರಾಜೇಶ್ ಅವರು ರೈತ ಕುಟುಂಬ ಹಿನ್ನೆಲೆವುಳ್ಳವರಾಗಿದ್ದು, ಜೀವನ ಕಟ್ಟಿಕೊಳ್ಳಲು ಬರಿಗೈನಲ್ಲಿ ಬೆಂಗಳೂರಿಗೆ ಬಂದು ಜಿರೋದಿಂದ ಹೀರೋ ಆಗಿದ್ದಾರೆ. ಮೂಲತಃ ಕನಕಪುರ ತಾಲೂಕು ಸಾತನೂರು ಹೋಬಳಿ ವಿರೂಪಸಂದ್ರದವರು. ತಂದೆ ಮುನಿರೇಗೌಡ, ತಾಯಿ ವೆಂಕಟಮ್ಮ, ಮಧ್ಯಮ ವರ್ಗದ ಕುಟುಂಬದಿಂದ ಬಂದ ರಾಜೇಶ್, 10ನೇ ತರಗತಿವರೆಗೂ ಊರಿನಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. 10ನೇ ತರಗತಿ ನಂತರ ಕೆಲಸಕ್ಕೆಂದು ಬೆಂಗಳೂರಿನ ಕಡೆ ಮುಖ ಮಾಡಿದ್ದರು. ಕೆಲಸ ಮಾಡಿಕೊಂಡೆ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದುಕೊಂಡಿದ್ದಾರೆ. 2009ರಲ್ಲಿ ವಿದ್ಯಾರಾಣಿ ಅವರನ್ನು ವಿವಾಹವಾದರು. ಸಮರ್ಥ ಮತ್ತು ಆರೂಷ್ ಎಂಬ ಇಬ್ಬರು ಮಕ್ಕಳಿದ್ದಾರೆ. 2003ರಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟರು. ಕೆಲಸದ ಮೇಲೆ ಇವರಿಗಿದ್ದ ಶ್ರದ್ಧೆಯಿಂದ ಕೇವಲ 6 ತಿಂಗಳಿನಲ್ಲಿ ಮ್ಯಾನೇಜರ್ ಹುದ್ದೆಗೆ ಬಡ್ತಿ ಪಡೆದರು.

ಪಾಲುದಾರಿಕೆಯಲ್ಲಿ ಸಂಸ್ಥೆ ಆರಂಭ: ರಿಯಲ್ ಎಸ್ಟೇಟ್ ಕ್ಷೇತ್ರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ರಾಜೇಶ್, 2007ರಲ್ಲಿ ಪಾಲುದಾರಿಕೆಯಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದನ್ನು ಆರಂಭಿಸಿದ್ದರು. ಆದರೆ ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಿ ತುಂಬಾ ತೊಂದರೆಗೆ ಸಿಲುಕಿದ್ದರು. ನಂತರ ಸಾಕಷ್ಟು ಹೋರಾಟ ಮಾಡಿ ಆ ಸಮಸ್ಯೆಗಳಿಂದ ಹೊರಬಂದು 2012ರಲ್ಲಿ ಶರಣ್ಯ ಪ್ರಮೋಟರ್ಸ್ ಎಂಬ ಸ್ವಂತ ರಿಯಲ್ ಎಸ್ಟೇಟ್ ಸಂಸ್ಥೆ ಪ್ರಾರಂಭಿಸಿದ್ದರು. ಇವರಿಗೆ ಪತ್ನಿ ವಿದ್ಯಾರಾಣಿ, ಬಾಮೈದ ಯದುನಂದನ್ ಮತ್ತು ನೌಕರರು ಬೆಂಬಲವಾಗಿ ನಿಂತಿದ್ದಾರೆ.

ಕೈ ಹಿಡಿದ ಫಾಮ್ರ್ ಹೌಸ್ ಪ್ರಾಜೆಕ್ಟ್

ಮೊದಲು ಶರಣ್ಯ ಪ್ರಮೋಟರ್ಸ್ ಸಂಸ್ಥೆಯ ಮೂಲಕ ನೆಲಮಂಗಲದಲ್ಲಿ ಲೇಔಟ್​ಗಳನ್ನು ನಿರ್ಮಾಣ ಮಾಡುತ್ತಿದ್ದ ರಾಜೇಶ್, ಬಳಿಕ ಗ್ರಾಹಕರಿಗೆ ರೆಸಾರ್ಟ್ ಟೈಪ್ಸ್ ಫಾಮ್ರ್ ಲ್ಯಾಂಡ್ ಪರಿಕಲ್ಪನೆಯನ್ನು ಪರಿಚಯ ಮಾಡಿಸಲು, ಬೆಂಗಳೂರಿನಿಂದ ಎರಡು ಗಂಟೆಗಳ ಪ್ರಯಾಣದ ಸಮಯದಲ್ಲಿ ಸಿಗುವ ಲ್ಯಾಂಡ್​ಗಳನ್ನು ನೋಡುವ ಗುರಿ ಹೊಂದಿದ್ದರು. ಇವರ ಆಸೆಯಂತೆ ಶ್ರವಣಬೆಳಗೊಳದಲ್ಲಿ 25 ಎಕರೆ ಜಮೀನು ಸಿಕ್ಕಿತ್ತು. ಅದನ್ನು ಅಭಿವೃದ್ಧಿಪಡಿಸುತ್ತಿದ್ದ ಸಂದರ್ಭದಲ್ಲಿ ಅಷ್ಟು ದೂರ ಹೋಗಿ ಯಾರು ಖರೀದಿ ಮಾಡುತ್ತಾರೆ ಎಂದು ರಾಜೇಶ್ ಅವರನ್ನು ಕೆಲವರು ಹೀಯಾಳಿಸಿದ್ದರು. ಬಳಿಕ ಹೀಯಾಳಿಸಿದವರೇ 2 ವರ್ಷ ಬಿಟ್ಟು ಬಂದು ಆ ಜಾಗ ನೋಡಿ ಆಶ್ಚರ್ಯ ಚಕಿತರಾದರು. ಏಕೆಂದರೆ ಆ ಮಟ್ಟಿಗೆ ಅದನ್ನು ರಾಜೇಶ್ ಅವರು ಛಲಬಿಡದೇ ಅಭಿವೃದ್ಧಿಪಡಿಸಿದ್ದರು.

ಮೈಸೂರು ರಸ್ತೆಯಲ್ಲಿಯೇ ಮೂರು ಪ್ರಾಜೆಕ್ಟ್

ಶರಣ್ಯ ಗ್ರೂಪ್ ಆಫ್ ಕಂಪನಿಯನ್ನು 2012ರಲ್ಲಿ ಆರಂಭಿಸಲಾಯಿತು. 2019ರಲ್ಲಿ ಶರಣ್ಯ ಫಾರ್ಮ್ಸ್​ ಪ್ರಾರಂಭವಾಯಿತು. ಈ ಸಂಸ್ಥೆಯ ವತಿಯಿಂದ ಒಟ್ಟು ಮೂರು ಪ್ರಾಜೆಕ್ಟ್​ಗಳನ್ನು ಲಾಂಚ್ ಮಾಡಲಾಗಿದ್ದು, ನಾಲ್ಕನೇ ಪ್ರಾಜೆಕ್ಟ್ ಸದ್ಯದಲ್ಲಿಯೇ ಲಾಂಚ್ ಆಗಲಿದೆ. ಮೊದಲನೇ ಪ್ರಾಜೆಕ್ಟ್ ಶ್ರವಣಬೆಳಗೊಳದಲ್ಲಿ ಶರಣ್ಯ ವೀಕ್ ಎಂಡ್ ವಿಲೇಜ್, ಶರಣ್ಯ ಹಿಲ್​ವ್ಯೂ ಫಾರ್ಮ್ಸ್​ ಮತ್ತು ಶರಣ್ಯ ಸ್ಯಾಂಡಲ್ ವ್ಯಾಲಿ ಫಾರ್ಮ್ಸ್​ ಎಂಬ ಮೂರು ಪ್ರಾಜೆಕ್ಟ್​ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎರಡು ಪ್ರಾಜೆಕ್ಟ್​ಗಳು ಮೈಸೂರು-ಬೆಂಗಳೂರು ರಸ್ತೆ ಸಮೀಪದಲ್ಲಿವೆ. ಒಂದು ಪ್ರಾಜೆಕ್ಟ್ ಮಾತ್ರ ಶ್ರವಣಬೆಳಗೊಳದ ಹತ್ತಿರ ಮಾಡಲಾಗಿದೆ.

ಕುಟುಂಬದವರಿಗೆ- ಸಿಬ್ಬಂದಿಗೆ ಧನ್ಯವಾದ

ನಮ್ಮ ಕಂಪನಿ ನೌಕರರು, ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಅದರಲ್ಲಿಯೂ ವಿಶೇಷವಾಗಿ ಪತ್ನಿ ವಿದ್ಯಾರಾಣಿ ಮತ್ತು ಬಾಮೈದ ಯದುನಂದನ್ ಸಹಕಾರವಿಲ್ಲದೆ ಹೋಗಿದ್ದರೆ ಶರಣ್ಯ ಫಾಮ್ರ್ ಹೌಸ್ ಸಂಸ್ಥೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಹೀಗಾಗಿ ನಮ್ಮ ಕುಟುಂಬ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಈ ಮೂಲಕ ಧನ್ಯವಾದ ತಿಳಿಸುತ್ತೇನೆ ಎನ್ನುತ್ತಾರೆ ರಾಜೇಶ್.

ಕಷ್ಟದಲ್ಲಿ ಕೈ ಹಿಡಿದ ಮಡದಿ ಮತ್ತು ಬಾಮೈದ

ರಾಜೇಶ್ ಅವರು ಮದುವೆಯಾದಾಗ ತುಂಬಾ ಅನುಕೂಲವಂತರಾಗಿದ್ದರು. ಪಾಲುದಾರಿಕೆಯಲ್ಲಿ ವ್ಯವಹಾರ ಆರಂಭಿಸಿ ಕೋಟ್ಯಂತರ ರೂ. ಕಳೆದುಕೊಂಡರು. ನಂತರ 6 ತಿಂಗಳಿನಲ್ಲಿ ಸಾಲಗಾರರಾಗಿದ್ದರು. ನಂತರ ಇವರ ಮಡದಿ ವಿದ್ಯಾರಾಣಿ ಒಡವೆಗಳನ್ನು ಅಡವಿರಿಸಿ ಹಣ ಹೊಂದಿಸಿ ಕೊಟ್ಟರು. ಕಷ್ಟದ ದಿನಗಳಲ್ಲಿ ಬೆಂಬಲವಾಗಿ ನಿಂತು ಇಬ್ಬರು ಜೊತೆ ಜೊತೆಯಾಗಿ ಸಮಸ್ಯೆಗಳನ್ನು ಎದುರಿಸಿದ್ದರು. ಧೃತಿಗೆಡದೆ ಧೈರ್ಯವಾಗಿ ಎಲ್ಲವನ್ನು ಎದುರಿಸಿ ನಿಂತ ಪರಿಣಾಮ ಇಂದು ರಿಯಲ್ ಎಸ್ಟೇಟ್​ನ ಕ್ಷೇತ್ರದ ರಿಯಲ್ ಹೀರೋ ಆಗಿ ಬೆಳೆದಿದ್ದಾರೆ. ವಿದ್ಯಾರಾಣಿ ಸಹೋದರ ಯದುನಂದನ್ ಕೂಡ ಬಾವ ರಾಜೇಶ್​ಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಇವರ ಸಹಕಾರದಿಂದ ರಾಜೇಶ್ ಇಂದು ಹಲವರಿಗೆ ಉದ್ಯೋಗದಾತರಾಗಿದ್ದಾರೆ. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ರಾಜೇಶ್ ಅವರು ಇಂದಿಗೂ ಪ್ರತಿ ಗ್ರಾಹಕರ ಮನೆಗಳಿಗೆ ತೆರಳಿ ಸ್ವತಃ ಇವರೇ ವ್ಯವಹರಿಸುತ್ತಾರೆ. ಇದು ಗ್ರಾಹಕರಿಗೆ ರಾಜೇಶ್ ಮೇಲಿರುವ ನಂಬಿಕೆ ಮತ್ತು ಪ್ರೀತಿಯನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತಿದೆ. ಎರಡನೇ ಆದಾಯ ಬೇಕು ಎನ್ನುವ ಪ್ರತಿಯೊಬ್ಬ ಗ್ರಾಹಕ ಇವರ  ಫಾರ್ಮ್ಸ್​ ಲ್ಯಾಂಡ್ ಖರೀದಿಸಿದರೆ ಅಧಿಕ ಲಾಭ ಪಡೆಯಬಹುದಾಗಿದೆ.

ಶ್ರಮಜೀವಿ ರಿಯಲ್ ಉದ್ಯಮಿ ವಿ.ಎಂ.ರಾಜೇಶ್: ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡ ಸಾಧಕ | ಇತರರಿಗೆ ಸ್ಪೂರ್ತಿದಾಯಕ ಶ್ರಮಜೀವಿ ರಿಯಲ್ ಉದ್ಯಮಿ ವಿ.ಎಂ.ರಾಜೇಶ್: ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡ ಸಾಧಕ | ಇತರರಿಗೆ ಸ್ಪೂರ್ತಿದಾಯಕ

 ಫಾರ್ಮ್ಸ್​ ಲ್ಯಾಂಡ್ ಟ್ರೆಂಡ್ ಕಾರಣೀಕರ್ತರು

ಶರಣ್ಯ ಫಾಮ್ರ್ ಸಂಸ್ಥೆಯಲ್ಲಿ ಐದೂವರೆ ಗುಂಟೆಯಿಂದ ಆರಂಭವಾಗಿ ಅರ್ಧ, ಮುಕ್ಕಾಲು, ಒಂದು ಎಕರೆ ಸೇರಿ ಬಂಡವಾಳಕ್ಕೆ ತಕ್ಕಂತೆ ಜಮೀನು ಖರೀದಿಸಬಹುದು. ಇಲ್ಲಿ ಕೃಷಿ ಕೂಡ ಮಾಡಬಹುದು. ಕೃಷಿ ಭೂಮಿ ನಿರ್ವಹಣೆಯನ್ನು ಕಂಪನಿಯಿಂದಲೇ ನೋಡಿಕೊಳ್ಳಲಾಗುತ್ತದೆ. ನಿಮ್ಮ ಜಮೀನಿನಲ್ಲಿ ಫಾಮ್ರ್ ಹೌಸ್ ಅನ್ನು ಕಟ್ಟಿಕೊಳ್ಳಬಹುದು. ಆ ಫಾಮ್್ಸರ್ ಹೌಸ್ ಅನ್ನು ಬೇಕಾದರೆ ಬಾಡಿಗೆಗೆ ನೀಡಬಹುದು. ಕೃಷಿ ಭೂಮಿಯಲ್ಲಿ ಬೆಳೆದ ಇಳುವರಿಯಿಂದ ಆದಾಯವೂ ಸಿಗಲಿದೆ. ನೀವು ಖರೀದಿಸಿರುವ ಫಾಮ್ರ್ ಲ್ಯಾಂಡ್​ನಲ್ಲಿ ಬರುವ ಇಳುವರಿಯಿಂದ ಪಾಲು ಪಡೆಯಬಹುದಾಗಿದೆ.

ಹಿಲ್ ವ್ಯೂ ಫಾರ್ಮ್ಸ್​ 2ನೇ ಹಂತ

ಶರಣ್ಯ ಹಿಲ್ ವ್ಯೂ ಫಾರ್ಮ್ಸ್​ 2 ನೇ ಹಂತದ ಹೊಸ ಯೋಜನೆ ಅಭಿವೃದ್ಧಿಪಡಿಸಲಾಗುತ್ತಿದ್ದು, ಸದ್ಯದಲ್ಲಿಯೇ ಉದ್ಘಾಟನೆಯಾಗಲಿದೆ. ಈಗ ಗ್ರಾಹಕರಿಗೆ ಪ್ರಿಲಾಂಚ್ ಆಫರ್ ನೀಡಲಾಗಿದೆ. ಸ್ಯಾಂಡಲ್ ವಿಥ್ ಫಾಮ್ರ್ ಹೌಸ್ ಪರಿಕಲ್ಪನೆಯಡಿ ಆರಂಭಿಸಿರುವ ಈ ಹೊಸ ಯೋಜನೆಯಲ್ಲಿ ಗ್ರಾಹಕರು ಒಂದು ಹೂಡಿಕೆಗೆ ನಾಲ್ಕು ಲಾಭಗಳನ್ನು ಪಡೆಯಬಹುದಾಗಿದೆ. ಫಾರ್ಮ್ಸ್​ ಲ್ಯಾಂಡ್ ಖರೀದಿಸಿದರೆ ಕುಟುಂಬದ ಸದಸ್ಯರಿಗೆ ರೆಸಾರ್ಟ್ ಸೌಲಭ್ಯ ಉಚಿತವಾಗಿ ದೊರೆಯಲಿದೆ. ಫಲವತ್ತಾದ ಭೂಮಿಯಲ್ಲಿ ಬೆಳೆದ ಶ್ರೀಗಂಧದ ಮರಗಳಿಂದ ಅಧಿಕ ಲಾಭ ಹಾಗೂ ಖರೀದಿ ಮಾಡಲಾದ ಫಾಮ್ರ್ ಹೌಸ್ ಅನ್ನು ಬಾಡಿಗೆಗೆ ನೀಡುವುದರಿಂದ ಆದಾಯ ಪಡೆಯಬಹುದಾಗಿದೆ.

ರಿಯಲ್ ಎಸ್ಟೇಟ್ ಕ್ಷೇತ್ರ ತುಂಬಾ ಕಷ್ಟ ಇದೆ. 2007ರಲ್ಲಿ ನಾನು ಪಾಲುದಾರಿಕೆಯಲ್ಲಿ ಬಿಜಿನೆಸ್ ಆರಂಭಿಸಿದ್ದಾಗ ನಷ್ಟ ಉಂಟಾಗಿ ತುಂಬಾ ಸಮಸ್ಯೆಗಳನ್ನು ಎದುರಿಸಿದ್ದೆ. ನಂತರ ಅದನ್ನು ಸಮರ್ಥವಾಗಿ ಎದುರಿಸಿದ ಪರಿಣಾಮ ಇಂದು ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದೇನೆ. ಹಣ ಮಾಡಲು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬರಬೇಡಿ, ಹೆಸರು ಮಾಡಲು ಬನ್ನಿ, ಉತ್ತಮ ಸರ್ವಿಸ್ ಕೊಡಿ ನಂತರ ಹಣ, ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

| ವಿ.ಎಂ.ರಾಜೇಶ್, ಶರಣ್ಯ ಫಾರ್ಮ್ಸ್​ ಮಾಲೀಕರು

ಕಿವಿಮಾತು

ಯಾವುದೇ ಪ್ರಾಪರ್ಟಿ ಖರೀದಿಸುವ ಮುನ್ನ ಆ ಭಾಗದಲ್ಲಿ ಎಷ್ಟು ರೇಟ್ ಇದೆ. ಅಭಿವೃದ್ಧಿಪಡಿಸಲು ಯಾವ ರೀತಿ ಹಣ ಹೂಡಿಕೆ ಮಾಡಲಾಗಿದೆ. ಜತೆಗೆ ಅವರು ಮಾರಾಟ ಮಾಡುತ್ತಿರುವ ರೇಟ್ ಎಷ್ಟು ಇದೆ ಎಂಬುದನ್ನು ಮೊದಲು ಗ್ರಾಹಕರು ತಿಳಿದುಕೊಳ್ಳಬೇಕು ಎಂದು ರಾಜೇಶ್ ಕಿವಿಮಾತು ಹೇಳಿದ್ದಾರೆ. ಅಲ್ಲದೇ ಬಿಜಿನೆಸ್ ಮಾಡಲು ಧೈರ್ಯ ಇರಬೇಕು. 247 ಕೆಲಸ ಮಾಡಲು ಸಿದ್ದರಿರಬೇಕು. ನಾನು ಬಿಜಿನೆಸ್ ಆರಂಭಿಸಿದಾಗ ಸಂಬಂಧಿಕರು ಸ್ನೇಹಿತರು ಇಷ್ಟೊಂದು ಸಾಲ ಮಾಡಿದ್ದಾನೆ, ಹೇಗೆ ತೀರಿಸುತ್ತಾನೆ ಎನ್ನುತ್ತಿದ್ದರು. ಆದರೆ ಇಂದು ನಾನು ಮತ್ತು ನನ್ನ ಸಂಸ್ಥೆ ದೊಡ್ಡಮಟ್ಟಕ್ಕೆ ಬೆಳೆದಿರುವುದನ್ನು ಕಂಡಂತಹ ಅವರು, ತಮ್ಮ ಮಕ್ಕಳನ್ನು ಬಿಜಿನೆಸ್ ಮಾಡಿಸಬೇಕು ಎನ್ನುತ್ತಿದ್ದಾರೆ ಎಂಬುದು ರಾಜೇಶ್ ಹೆಮ್ಮೆಯ ಹೇಳಿಕೆ.

ಶರಣ್ಯ ಸ್ಯಾಂಡಲ್ ವ್ಯಾಲಿ

16.5 ಎಕರೆ ಪ್ರದೇಶದಲ್ಲಿ ಶರಣ್ಯ ಸ್ಯಾಂಡಲ್ ವ್ಯಾಲಿ ಫಾಮ್್ಸರ್ ಪ್ರಾಜೆಕ್ಟ್ ಮಾಡಿದ್ದಾರೆ. ಒಂದೂವರೆ ವರ್ಷಕ್ಕೆ 5-6 ಅಡಿ ಶ್ರೀಗಂಧದ ಮರ ಬೆಳೆದಿವೆ. ಸ್ಯಾಂಡಲ್ ಮರಗಳಿಂದ ಹೂಡಿಕೆದಾರರಿಗೆ ತುಂಬ ಲಾಭ ತಂದುಕೊಡುವ ಪರಿಕಲ್ಪನೆಯಡಿ ಆರಂಭಿಸಿರುವ ಯೋಜನೆಯಾಗಿದೆ. ಸ್ನೇಹಿತರ ಜತೆ ರ್ಚಚಿಸುವಾಗ ಶ್ರೀಗಂಧದ ಮರಗಳಿಂದ ತುಂಬಾ ಲಾಭ ಬರುತ್ತದೆ. ತಮ್ಮ ಗ್ರಾಹಕರಿಗೆ ಏಕೆ ಈ ಯೋಜನೆ ನಿರ್ವಿುಸಬಾರದು ಎಂಬ ಯೋಚನೆ ಇವರಿಗೆ ಬಂತು. ನಂತರ ಕೃಷಿ ಉದ್ಯಮಿ ಕವಿತಾ ಮಿಶ್ರ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದು ಶರಣ್ಯ ಸ್ಯಾಂಡಲ್ ವ್ಯಾಲಿ ಫಾಮ್್ಸರ್ ಪ್ರಾಜೆಕ್ಟ್ ಅನ್ನು ಆರಂಭಿಸಲಾಯಿತು. ಅವರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಿದ ಹಿನ್ನೆಲೆಯಲ್ಲಿ ಇಂದು ತುಂಬಾ ಚೆನ್ನಾಗಿ ಶ್ರೀಗಂಧದ ಮರಗಳು ಬೆಳೆಯುತ್ತಿವೆ. ಇನ್ನೊಂದು ಆದಾಯ ಬೇಕು ಎನ್ನುವವರು ಶರಣ್ಯ ಸ್ಯಾಂಡಲ್ ವ್ಯಾಲಿ ಪ್ರಾಜೆಕ್ಟ್​ನ ಭಾಗವಾಗುತ್ತಿದ್ದು, ಇದು ಒಂದು ಯುನಿಕ್ ಕಾನ್ಸೆಪ್ಟ್ ಆಗಿದ್ದು, ಇದರಿಂದ ಲಕ್ಷಾಂತರ ರೂಪಾಯಿ ಲಾಭ ಗ್ರಾಹಕರಿಗೆ ಬರುತ್ತದೆ. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ವೀಕ್ ಎಂಡ್​ನಲ್ಲಿ ಕೃಷಿ ಚಟುವಟಿಕೆ ಮತ್ತು ರೆಸಾರ್ಟ್​ನ ಲಾಭ ಪಡೆಯಲು ಎಲ್ಲ ಗ್ರಾಹಕರಿಗೆ ಅನುವು ಮಾಡಿಕೊಡಲಾಗಿದೆ.

ಕರೊನಾ ವೇಳೆಯಲ್ಲಿಯೂ ಕೈ ಹಿಡಿದ ಉದ್ಯಮ

2020 ಕರೊನಾ ಬಂದು ಲಾಕ್​ಡೌನ್ ಆಗಿ ರಿಯಲ್ ಎಸ್ಟೇಟ್ ಸೇರಿ ಎಲ್ಲ ಉದ್ಯಮಗಳು ನೆಲ ಕಚ್ಚಿತ್ತು. ಆದರೆ ಶರಣ್ಯ ಫಾರ್ಮ್ಸ್​ ಸಂಸ್ಥೆಗೆ ಹೆಚ್ಚಿನ ನಷ್ಟವಾಗಲಿಲ್ಲ. ಇದಕ್ಕೆ ಕಾರಣ ಇವರ ಫಾರ್ಮ್ಸ್​ ​ಹೌಸ್ ಪ್ರಾಜೆಕ್ಟ್​ಗಳನ್ನು ಹೆಚ್ಚಿನ ಗ್ರಾಹಕರು ಅದನ್ನು ಖರೀದಿಸಲು ತೊಡಗಿಕೊಂಡರು. ಕರೊನಾ ವೇಳೆ ‘ಶರಣ್ಯ ವೀಕೆಂಡ್ ವಿಲೇಜ್’ ಫಾಮರ್್​ಹೌಸ್​ಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಶರಣ್ಯ ಫಾರ್ಮ್ಸ್​ ಹೌಸ್ ಅಭಿವೃದ್ಧಿಯಲ್ಲಿ ಮಾತ್ರವಲ್ಲದೇ ದಾಖಲಾತಿಗಳಲ್ಲಿ ಮತ್ತು ನಿರ್ವಹಣೆಯಲ್ಲಿ ನಂಬರ್ ಒನ್ ಆಗಿದೆ. ಗ್ರಾಹಕರು ಹೂಡುವಂತಹ ಬಂಡವಾಳ 15 ವರ್ಷದಲ್ಲಿ ದುಪ್ಪಟ್ಟು ಆಗುತ್ತದೆ ಮತ್ತು ಶ್ರೀಗಂಧದ ಬೆಲೆಯಿಂದ ಗ್ರಾಹಕರಿಗೆ ಕೋಟ್ಯಂತರ ರೂ. ಆದಾಯ ಬರುವಂತೆ ಮಾಡಲಾಗುತ್ತದೆ. ಶರಣ್ಯ ಫಾಮ್್ಸರ್ ಸಂಸ್ಥೆಯಲ್ಲಿ ಫಾರ್ಮ್ಸ್​ ಖರೀದಿಸುವವರಿಗೆ ಇವರ ರೆಸಾರ್ಟ್ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಶರಣ್ಯ ಹಿಲ್​ವ್ಯೂ ಫಾರ್ಮ್ಸ್​

2022ರಲ್ಲಿ ಮೈಸೂರು-ಮಳವಳ್ಳಿ ರಸ್ತೆಯ ಬನ್ನೂರು ಮುಖ್ಯರಸ್ತೆ ಸಮೀಪದಲ್ಲಿ 25 ಎಕರೆ ವಿಶಾಲ ಪ್ರದೇಶದಲ್ಲಿ ‘ಶರಣ್ಯ ಹಿಲ್​ವ್ಯೂ ಫಾಮ್್ಸರ್ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿಯೇ 5 ಎಕರೆಯಲ್ಲಿ ರೆಸಾರ್ಟ್ ಕೂಡ ನಿರ್ವಿುಸಲು ಪ್ರಾರಂಭಿಸಲಾಗಿದೆ. ತೇಗ, ಮಹಗನಿ, ತೆಂಗು, ನೇರಳೆ, ಸೀಬೆ ಮತ್ತು ಸಪೋಟ ಸೇರಿ ಹಲವು ಬಗೆಯ ಹಣ್ಣಿನ ಗಿಡಗಳಿಂದಲೂ ಕೂಡಿದೆ. ವಾರಾಂತ್ಯದಲ್ಲಿ ಕುಟುಂಬ ಸಮೇತ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಈ ಜಾಗ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ 100 ಕಿ.ಮೀ. ಮತ್ತು ಮೈಸೂರಿನಿಂದ 32 ಕಿ.ಮೀ. ದೂರವಿರುವ ಈ ಜಾಗದಲ್ಲಿ ಕನಿಷ್ಠ 5.5 ಗುಂಟೆಯಿಂದ ಜಮೀನು ಖರೀದಿಸಬಹುದು. ಇಲ್ಲಿ ಫಾಮ್ರ್ ಹೌಸ್ ನಿರ್ವಿುಸಿಕೊಂಡು, ಕೃಷಿ ಚಟುವಟಿಕೆ ನಡೆಸಬಹುದಾಗಿದೆ. ಶರಣ್ಯ ಹಿಲ್​ವ್ಯೂ ಫಾಮ್್ಸರ್ಂದ 4 ಕಿ.ಮೀ. ದೂರದಲ್ಲಿಯೇ ಶರಣ್ಯ ಸ್ಯಾಂಡಲ್ ವ್ಯಾಲಿ ಫಾರ್ಮ್ಸ್​ ಕೂಡ ಇದ್ದು, ಹೂಡಿಕೆದಾರರಿಗೆ ಹೆಚ್ಚಿನ ಲಾಭ ಬರುವಂತೆ ಮಾಡಲಾಗಿದೆ.

ರೆಸಾರ್ಟ್​ಗೆ ಬಂದು ಆರಾಮಾಗಿ ರೆಸ್ಟ್ ಮಾಡಿ

ವೀಕ್ ಡೇಸ್​ನಲ್ಲಿ ಕೆಲಸ ಮಾಡುವವರು ವೀಕ್ ಎಂಡ್​ನಲ್ಲಿ ಬಂದು, ತಮ್ಮದೇ ಆದಂತಹ ಫಾಮ್ರ್ ಹೌಸ್ ರೇಸಾರ್ಟ್​ನಲ್ಲಿ ಸಮಯ ಕಳೆಯಬಹುದು. ಅಲ್ಲಿ ಕೃಷಿ ಚಟುವಟಿಕೆಗಳನ್ನು ಸಹ ಮಾಡಬಹುದು. ಇಲ್ಲಿನ ರೆಸಾರ್ಟ್​ನಲ್ಲಿ ಕ್ಲಬ್ ಹೌಸ್, ಜಿಮ್ ಈಜುಕೊಳ, ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ಆಟದ ಮೈದಾನ, ಪಾರ್ಕ್ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ. ರಾಜೇಶ್ ಅವರು ಪರಿಸರ ಸ್ನೇಹಿಯಾದ ಪ್ರಾಜೆಕ್ಟ್ ಗಳನ್ನು ಮಾಡುತ್ತಿದ್ದು, ಇಲ್ಲಿನ ಫಾರ್ಮ್ಸ್​​ಹೌಸ್​ಗೆ ನೇರವಾಗಿ ರೈತರಿಂದ ಗೊಬ್ಬರವನ್ನು ಖರೀದಿಸಿ ಬಳಕೆ ಮಾಡುತ್ತಿದ್ದಾರೆ ಜತೆಗೆ ಉತ್ತಮವಾಗಿ ನಿರ್ವಹಣೆ ಕೂಡ ಮಾಡುತ್ತಿದ್ದಾರೆ. ಇವರು ತಮ್ಮ ಗ್ರಾಹಕರಿಂದಲೇ ಶರಣ್ಯ ಹಿಲ್​ವ್ಯೂ ಫಾಮ್್ಸರ್ 2ನೇ ಹಂತವನ್ನು ಉದ್ಘಾಟನೆ ಮಾಡಿಸಿರುವುದು ಮತ್ತೊಂದು ವಿಶೇಷವಾಗಿದೆ.

 

ವಿಜಯವಾಣಿಯೊಂದಿಗೆ ಕಳೆದ 14 ವರ್ಷಗಳಿಂದ ನಿರಂತರ ಒಡನಾಟವಿದೆ. ಈ ಪತ್ರಿಕೆ ನಮ್ಮ ಎಲ್ಲ ಸಾಧನೆಗೆ ಬೆಂಬಲವಾಗಿ ನಿಂತಿದೆ. ನಮ್ಮ ಅಳಿಲು ಸೇವೆಯನ್ನು ಗುರುತಿಸಿ ವಿಜಯವಾಣಿಯವರು ಪ್ರತಿಷ್ಠಿತ ವಿಜಯ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತೋಷ ತಂದಿದೆ. ಇದು ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ಸ್ಪೂರ್ತಿ ನೀಡಿದೆ.

| ವಿ.ಎಂ.ರಾಜೇಶ್ ಶರಣ್ಯ ಫಾರ್ಮ್ಸ್​ ಮಾಲೀಕ

ರಾಜೇಶ್ ಮೊದಲು ಲೇಔಟ್​ಗಳನ್ನು ನಿರ್ಮಾಣ ಮಾಡುತ್ತಿದ್ದರು. ನಂತರ ದೂರದೃಷ್ಟಿಯನ್ನಿಟ್ಟುಕೊಂಡು ಫಾಮ್ರ್ ಲ್ಯಾಂಡ್ ನಿರ್ವಣಕ್ಕೆ ಮುಂದಾದರು. ಫಾಮ್ರ್ ಲ್ಯಾಂಡ್ ಪರಿಕಲ್ಪನೆ ತುಂಬಾ ವಿನೂತನವಾದುದ್ದಾಗಿದೆ. ಜಮೀನು ಖರೀದಿ ಮತ್ತು ಕೃಷಿ ಬಗ್ಗೆ ಆಸಕ್ತಿ ಇದ್ದವರು ಹೆಚ್ಚು ಆಕರ್ಷಣೆಗೆ ಒಳಗಾಗಿ ಫಾಮ್ರ್ ಲ್ಯಾಂಡ್​ಗಳನ್ನು ಖರೀದಿಸಿದ್ದರು. ನಂಬಿಕೆಗೆ ಇನ್ನೊಂದು ಹೆಸರೇ ನಮ್ಮ ಶರಣ್ಯಫಾಮ್ರ್ ಸಂಸ್ಥೆ. ರಾಜೇಶ್ ಅವರು ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಸಾಧನೆ ಇತರರಿಗೆ ಮಾದರಿಯಾಗಿದೆ.

| ಬಿ.ಜೆ. ಯದುನಂದನ್ ಎಸ್.ಆರ್. ಗ್ರೂಪ್ ಮಾಲೀಕರು

ಕಳೆದ 20 ವರ್ಷಗಳಿಂದ ರಾಜೇಶ್ ಅವರೊಂದಿಗೆ ಇದ್ದೇನೆ. ಅವರ ಸಂಸ್ಥೆಯಲ್ಲಿ್ಲ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ, ಈಗ ಒಂದು ಕಂಪನಿಯ ಮಾಲೀಕನಾಗಿದ್ದೇನೆ. ರಾಜೇಶ್ ಅವರು ಬೆಳೆದು ಬಂದಿರುವ ರೀತಿ ಮತ್ತು ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರದಲ್ಲಿ

ಅವರು ಮಾಡಿರುವ ಸಾಧನೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಇಚ್ಚಾಶಕ್ತಿ ಇದ್ದರೆ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯವಾಗಿ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ.

| ಮಂಜುನಾಥ್ ದ್ಯಾವಪ್ಪ ಎಂ.ಎಸ್. ಡೆವಲಪರ್ಸ್ ಆಂಡ್ ಪ್ರಮೋಟರ್ಸ್​ನ ಮಾಲೀಕರು

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…