ಹಾರ್ದಿಕ್​ ಪಾಂಡ್ಯಾರನ್ನು ಲಂಡನ್​ನಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನೀತಾ ಅಂಬಾನಿ…

ಮುಂಬೈ: ಕೆಳಬೆನ್ನು ಶಸ್ತ್ರಕ್ರಿಯೆಗೆ ಒಳಗಾಗಿ ಸದ್ಯ ಲಂಡನ್​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹಾರ್ದಿಕ್​ ಪಾಂಡ್ಯಾ ಅವರನ್ನು ರಿಲಯನ್ಸ್​ ಗ್ರೂಪ್​ ಮುಖ್ಯಸ್ಥ ಅನಿಲ್​ ಅಂಬಾನಿ ಪತ್ನಿ, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಮಾಲೀಕರಾದ ನೀತಾ ಅಂಬಾನಿ ಭೇಟಿಯಾಗಿದ್ದಾರೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಿದ್ದ ಹಾರ್ದಿಕ್​ ಪಾಂಡ್ಯಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ನೀತಾ ಅಂಬಾನಿ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಹಾರ್ದಿಕ್​ ಪಾಂಡ್ಯಾ ತಾವು ನೀತಾ ಅಂಬಾನಿಯವರೊಂದಿಗೆ ಇರುವ ಫೋಟೊವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ನೀತಾ ಅವರಿಂದ ಹೂಗುಚ್ಛ ಸ್ವೀಕರಿಸುತ್ತಿರುವ ಫೋಟೋ ಪೋಸ್ಟ್ ಮಾಡಿರುವ ಅವರು, ಲಂಡನ್​ಗೆ ಆಗಮಿಸಿ ನನ್ನನ್ನು ಭೇಟಿಯಾಗಿದ್ದಕ್ಕೆ ಧನ್ಯವಾದ ಅತ್ತಿಗೆ, ನಿಮ್ಮ ಹಾರೈಕೆ ಹಾಗೂ ಪ್ರೋತ್ಸಾಹ ಭರಿತ ಮಾತುಗಳಿಂದ ಮತ್ತೆ ಉತ್ಸಾಹ ಬಂದಿದೆ. ನೀವು ಯಾವತ್ತೂ ಸ್ಫೂರ್ತಿ ಎಂದು ಕ್ಯಾಪ್ಶನ್​ ಬರೆದಿದ್ದಾರೆ.

ಬೆನ್ನುನೋವಿನ ಸಮಸ್ಯೆ ಮಿತಿಮೀರಿದ ಕಾರಣ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದ ಅವರು, ತಮ್ಮ ನೋವಿನ ದಿನಗಳ ವಿಡಿಯೋವೊಂದನ್ನು ಕೂಡ ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿಕೊಂಡಿದ್ದರು.

ಶಸ್ತ್ರಕ್ರಿಯೆ ಬಳಿಕ ಅವರಿಗೆ ಸರಿಯಾಗಿ ಓಡಾಡಲೂ ಆಗುತ್ತಿಲ್ಲದ ಕಾರಣ ವೀಲ್​ ಚೇರ್​ನಲ್ಲಿಯೇ ಇರುತ್ತಾರೆ. ಈ ಮಧ್ಯೆ ತಾವು ಹೆಜ್ಜೆ ಮೇಲೆ ಹೆಜ್ಜೆಯನ್ನಿಟ್ಟು, ಸ್ನೇಹಿತನ ಸಹಾಯದಿಂದ ನಡೆಯಲು ಪ್ರಯತ್ನಿಸಿದ ವಿಡಿಯೋ ಶೇರ್​ ಮಾಡಿದ್ದ ಹಾರ್ದಿಕ್ ಪಾಂಡ್ಯಾ, ಮಗುವಿನಂತೆ ಹೆಜ್ಜೆ ಇಡುತ್ತಿದ್ದೇನೆ. ಆದರೆ ಪೂರ್ತಿ ಫಿಟ್​ನೆಸ್​ ಪಡೆಯುವ ಹಾದಿಯಲ್ಲಿ ಈಗಿನಿಂದಲೇ ನಡೆಯಲು ಪ್ರಾರಂಭಿಸುತ್ತೇನೆ ಎಂದು ಕ್ಯಾಪ್ಶನ್ ಬರೆದಿದ್ದರು.

Leave a Reply

Your email address will not be published. Required fields are marked *