ಹಾರ್ದಿಕ್​​, ರಾಹುಲ್​​​​​​​​ಗೆ ಬಿಸಿಸಿಐ ಒಂಬುಡ್ಸ್​ಮನ್ ಸಮಿತಿ 20 ಲಕ್ಷ ರೂ. ದಂಡ: ಯೋಧರ ಕುಟುಂಬಗಳಿಗೆ ದಾನ ನೀಡುವಂತೆ ಆದೇಶ

ಮುಂಬೈ: ಭಾರತ ತಂಡದ ಆರಂಭಿಕ ಬ್ಯಾಟ್ಸ್​​ಮನ್​​​ ಕೆ.ಎಲ್.​​ ರಾಹುಲ್​​ ಹಾಗೂ ಆಲ್​​ರೌಂಡರ್​​ ಹಾರ್ದಿಕ್​​ ಪಾಂಡ್ಯ ಅವರಿಗೆ ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ 20 ಲಕ್ಷ ರೂ. ದಂಡ ವಿಧಿಸಿದೆ. ಈ ದಂಡವನ್ನು ಮಿಲಟರಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ದಾನ ನೀಡುವಂತೆ ಬಿಸಿಸಿಐ ಆದೇಶ ನೀಡಿದೆ.


ಕೆಲ ತಿಂಗಳ ಹಿಂದೆ ಮಹಿಳೆಯರ ಬಗ್ಗೆ ಅಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದ ರಾಹುಲ್​​ ಮತ್ತು ಹಾರ್ದಿಕ್​​ ವಿರುದ್ಧ ಬಿಸಿಸಿಐ ​​​​​​​ ಡಿ.ಕೆ. ಜೈನ್​​​​ ನೇತೃತ್ವದ ಓಂಬುಡ್ಸ್​​ಮನ್ ಸಮಿತಿಯನ್ನುತನಿಖೆ ಮಾಡುವಂತೆ ನೇಮಿಸಿತ್ತು. ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಒಂಬುಡ್ಸ್​​ಮನ್ ಸಮಿತಿ 20 ಲಕ್ಷ ರೂ. ದಂಡ ವಿಧಿಸಿದೆ. 20 ಲಕ್ಷದಲ್ಲಿ ಇಬ್ಬರು 10 -10 ಲಕ್ಷ ಯೋಧರ ಕುಟುಂಬಗಳಿಗೆ ದಾನ ನೀಡಬೇಕು ಎಂದು ಸಮಿತಿ ತಿಳಿಸಿದೆ.


ಕಳೆದ ಜನವರಿಯಲ್ಲಿ ಬಾಲಿವುಡ್​​​ ನಟ ಹಾಗೂ ನಿರ್ಮಾಪಕ ನಡೆಸಿಕೊಡುವ ಕಾಫಿ ವಿತ್ ​​ ಕರಣ್​​​ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಅಕ್ಷೇಪಾರ್ಹ ಮಾತುಗಳನ್ನು ಹೇಳಿದ್ದರು. ಈ ಹಿನ್ನೆಲೆ ಕೋಪಗೊಂಡ ಬಿಸಿಸಿಐ ಈ ಇಬ್ಬರನ್ನು ಆಸ್ಟ್ರೇಲಿಯಾ ವಿರುದ್ಧದ ಎರಡು ಪಂದ್ಯಗಳಿಗೆ ನಿಷೇಧ ಮಾಡಿತ್ತು. ಹಾಗೂ ಅವರ ವಿರುದ್ಧ 41 (1)ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸೂಕ್ತ ಪರಿಹಾರ ನೀಡಲು ಬಿಸಿಸಿಐ ಓಂಬುಡ್ಸ್​​ಮನ್ ಸಮಿತಿಯನ್ನು ತನಿಖೆ ನೇಮಿಸಿತ್ತು. ಪ್ರಕರಣಕ್ಕೆ ಇಂದು ತೆರೆ ಬಿದ್ದಿದೆ.


2019ನೇ ಏಕದಿನ ವಿಶ್ವಕಪ್​​ಗೆ ಭಾರತ ತಂಡ ಪ್ರಕಟವಾಗಿದ್ದು, ರಾಹುಲ್​​ ಹಾಗೂ ಹಾರ್ದಿಕ್​​​​​​​ ಆಯ್ಕೆಯಾಗಿದ್ದಾರೆ. ವಿಶ್ವಕಪ್​​ನಲ್ಲಿ ಪಾಲ್ಗೊಳ್ಳುವ ಆಟಗಾರರ ಯಾವುದೇ ಪ್ರಕರಣ ಸಿಲುಕಿಕೊಂಡಿರಬಾರದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್​​ ಮಂಡಳಿ(ಐಸಿಸಿ) ಆದೇಶವಾಗಿತ್ತು. ಇದರ ಮೇರೆಗೆ ಈ ಇಬ್ಬರು ಆಟಗಾರರ ಮೇಲಿನ ಪ್ರಕರಣ ದಂಡದ ಮೂಲಕ ಪರಿಹಾರವಾಗಿದೆ. ಸದ್ಯ ರಾಹುಲ್​​​​​​​​​ ಮತ್ತು ಹಾರ್ದಿಕ್​​​ ಐಪಿಎಲ್​​​ನಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. (ಏಜನ್ಸೀಸ್​​)