ಅನ್​ಲಕ್ಕಿ ಹಾರ್ದಿಕ್ ಪಾಂಡ್ಯ! ಮೊದಲ IPL ಪಂದ್ಯದಿಂದಲೇ ಎಂಐ ಕ್ಯಾಪ್ಟನ್​ ಅಖಾಡದಿಂದ ಹೊರಗೆ, ಕಾರಣ ಬಹಿರಂಗ | Hardik Pandya

blank
blank

Hardik Pandya: ಇದೇ ಮಾರ್ಚ್​ 22ರಿಂದ ಶುರುವಾಗಲಿರುವ ಐಪಿಎಲ್​ 18ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದೆ. ಮೊದಲ ಪಂದ್ಯ ಕೋಲ್ಕತ ನೈಟ್ ರೈಡರ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವೆ ಇದೆ. ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಯಾರು ಶುಭಾರಂಭ ಮಾಡಲಿದ್ದಾರೆ ಎಂಬ ಕೌತುಕ, ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆಮಾಡಿದೆ. ಇದೆಲ್ಲದರ ಮಧ್ಯೆ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು 5 ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಲಿರುವ ಮುಂಬೈ ಇಂಡಿಯನ್ಸ್​ಗೆ ಸದ್ಯ ಬೇಸರ ಉಂಟಾಗಿದೆ. ಅದಕ್ಕೆ ಕಾರಣ ಕ್ಯಾಪ್ಟನ್ ಹಾರ್ದಿಕ್​ ಪಾಂಡ್ಯ ಅನುಪಸ್ಥಿತಿ.

ಇದನ್ನೂ ಓದಿ: ಬಿದಿರಿನ ಉಪ್ಪಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೆಲೆ ಮತ್ತು ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಖಚಿತ! Bamboo Salt

ಮಾರ್ಚ್​ 23ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಪಂದ್ಯ ಚಾಂಪಿಯನ್ಸ್​ ಮತ್ತು ಚಾಂಪಿಯನ್ಸ್ ತಂಡಗಳ ನಡುವಿನ ಬಿರುಸಿನ ಪೈಪೋಟಿ ಆಗಿದ್ದು, ಪಂದ್ಯ ರೋಚಕತೆಗೆ ಸಾಕ್ಷಿಯಾಗಲಿದೆಯೇ ಎಂಬ ಪ್ರಶ್ನೆಗಳು ಕಾಡಿವೆ. ಇನ್ನು ಕಳೆದ ವರ್ಷ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್​ ಆಗಿ ನೇಮಕಗೊಂಡ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ ಸ್ಥಾನವನ್ನು ಅಲಂಕರಿಸುವ ಮೂಲಕ ಎರಡನೇ ಬಾರಿಗೆ ತಂಡದ ನಾಯಕನಾಗಿ ಅಖಾಡಕ್ಕೆ ಮರಳಲಿದ್ದಾರೆ. ಆದರೆ, ಸಿಎಸ್​ಕೆ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲಿ ಅವರು ಆಡುವಂತಿಲ್ಲ ಎಂಬ ಐಪಿಎಲ್​ ನಿಯಮ ಇದೀಗ ಫ್ಯಾನ್ಸ್​ಗಳ ಅಚ್ಚರಿಗೆ ಕಾರಣವಾಗಿದೆ.

ಪಾಂಡ್ಯ ಅನುಪಸ್ಥಿತಿಗೆ ಕಾರಣ?

ಕಳೆದ ಆವೃತ್ತಿಯ ಪಂದ್ಯದಲ್ಲಿ ಮಂದಗತಿಯ ಓವರ್​ ರೇಟ್​ ಮಾಡಿದ್ದಕ್ಕಾಗಿ ಭಾರೀ ದಂಡವನ್ನು ಮುಂಬೈ ಇಂಡಿಯನ್ಸ್​ ಪಡೆಯಿತು. ತಂಡದ ನಾಯಕನಾಗಿ ಜವಾಬ್ದಾರಿ ಹೊತ್ತಿದ್ದ ಹಾರ್ದಿಕ್​ ಮೇಲೆ ಇದರ ಪರಿಣಾಮ ಬೀರಿತು. 17ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್​ ಮಾಡಿದ ಮೂರನೇ ಸ್ಲೋ ಓವರ್​ ರೇಟ್​ ಅದಾದ ಕಾರಣ, ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ 30 ಲಕ್ಷ ರೂ. ದಂಡ ವಿಧಿಸಲಾಯಿತು. ಇದರೊಟ್ಟಿಗೆ ಮುಂಬರುವ ಐಪಿಎಲ್ 2025ರ ಆವೃತ್ತಿಯ ಮೊದಲ ಪಂದ್ಯದಿಂದ ನಿಷೇಧಿಸುವುದಾಗಿ ತಿಳಿಸಿತ್ತು. ಇದೀಗ ಅದಕ್ಕೆ ಅನುಗುಣವಾಗಿ ಮೊದಲ ಮ್ಯಾಚ್​ನಿಂದ ಹೊರಗಿಡಲಾಗಿದೆ.

ಮೊದಲ ಮ್ಯಾಚ್​ನಿಂದ ಹೊರಗೆ

ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಹಾರ್ದಿಕ್​ಗೆ 30 ಲಕ್ಷ ರೂ. ದಂಡ ವಿಧಿಸಿದ ಐಪಿಎಲ್​ ಮಂಡಳಿ, ತಂಡದ ಪ್ರತಿ ಆಟಗಾರರಿಗೆ ತಲಾ 12 ಲಕ್ಷ ರೂ. ದಂಡ ವಿಧಿಸಿತ್ತು. ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ​ ನಾಯಕನಾಗಿದ್ದ ರಿಷಭ್​ ಪಂತ್​ಗೂ ಪೆನಾಲ್ಟಿ ಹಾಕಿ, ಆರ್​ಸಿಬಿ ವಿರುದ್ಧದ ಪಂದ್ಯದಿಂದ ಹೊರಗಿಡಲಾಗಿತ್ತು. 18ನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಹಾರ್ದಿಕ್​ ಮುಂದುವರೆದಿದ್ದು, ನಿಯಮದ ಅನುಸಾರ ಮೊದಲ ಪಂದ್ಯದಿಂದ ಮಾತ್ರ ಅವರು ಹೊರಗುಳಿಯಲಿದ್ದಾರೆ,(ಏಜೆನ್ಸೀಸ್).

ಎಂಐ ಪಂದ್ಯಗಳ ಪಟ್ಟಿ

ಮಾರ್ಚ್ 23: MI vs CSK, ಚೆನ್ನೈ
ಮಾರ್ಚ್ 29: MI vs GT, ಅಹಮದಾಬಾದ್
ಮಾರ್ಚ್ 31: MI vs KKR, ಮುಂಬೈ
ಏಪ್ರಿಲ್ 4: MI vs LSG, ಲಕ್ನೋ
ಏಪ್ರಿಲ್ 7: MI vs RCB, ಮುಂಬೈ
ಏಪ್ರಿಲ್ 13: MI vs DC, ದೆಹಲಿ
ಏಪ್ರಿಲ್ 17: MI vs SRH, ಮುಂಬೈ
ಏಪ್ರಿಲ್ 20: MI vs CSK, ಮುಂಬೈ
ಏಪ್ರಿಲ್ 23: MI vs SRH, ಹೈದರಾಬಾದ್
ಏಪ್ರಿಲ್ 27: MI vs LSG, ಮುಂಬೈ
ಮೇ 1: MI vs RR, ಜೈಪುರ
ಮೇ 6: MI vs GT, ಮುಂಬೈ
ಮೇ 11: MI vs PBKS, ಧರ್ಮಶಾಲಾ
ಮೇ 15: MI vs DC, ಮುಂಬೈ

ಚೆನ್ನೈ ಸೂಪರ್ ಕಿಂಗ್ಸ್ ವೇಳಾಪಟ್ಟಿ

ಮಾರ್ಚ್ 23: CSK vs MI, ಚೆನ್ನೈ
ಮಾರ್ಚ್ 28: CSK vs RCB, ಚೆನ್ನೈ
ಮಾರ್ಚ್ 30: CSK vs RR, ಗುವಾಹಟಿ
ಏಪ್ರಿಲ್ 5: CSK vs DC, ಚೆನ್ನೈ
ಏಪ್ರಿಲ್ 8: CSK vs PBKS, ಚಂಡೀಗಢ
ಏಪ್ರಿಲ್ 11: CSK ವಿರುದ್ಧ KKR, ಚೆನ್ನೈ
ಏಪ್ರಿಲ್ 14: CSK ವಿರುದ್ಧ LSG, ಲಕ್ನೋ
ಏಪ್ರಿಲ್ 20: CSK ವಿರುದ್ಧ MI, ಮುಂಬೈ
ಏಪ್ರಿಲ್ 25: CSK ವಿರುದ್ಧ SRH, ಚೆನ್ನೈ
ಏಪ್ರಿಲ್ 30: CSK ವಿರುದ್ಧ PBKS, ಚೆನ್ನೈ
ಮೇ 3: CSK ವಿರುದ್ಧ RCB, ಬೆಂಗಳೂರು
ಮೇ 7: CSK ವಿರುದ್ಧ KKR, ಕೋಲ್ಕತ್ತಾ
ಮೇ 12: CSK ವಿರುದ್ಧ RR, ಚೆನ್ನೈ
ಮೇ 18: CSK ವಿರುದ್ಧ GT, ಅಹಮದಾಬಾದ್

ಮನೆಯಲ್ಲಿ ಈ 4 ವಸ್ತುಗಳಿದ್ದರೆ ಲಕ್ಷ್ಮಿ ಒಲಿಯುವುದಿಲ್ಲ! ಇದನ್ನು ಗಮನಿಸದೆ ಹೋದ್ರೆ ಕೈಯಲ್ಲಿ 1 ಪೈಸೆಯೂ ಉಳಿಯಲ್ಲ | Vastu Tips

Share This Article

ಬಾಬಾ ವಂಗಾ ಭವಿಷ್ಯವಾಣಿ: ಈ 4 ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಸಂಭವಿಸಲಿದೆ! | Baba Vanga

Baba Vanga : ಭವಿಷ್ಯದ ಬಗ್ಗೆ ಹೇಳುವ ಬಾಬಾ ವಂಗಾ ಬಗ್ಗೆ ಕೇಳಿಯೇ ಇರ್ತಿರಾ ಅಲ್ವಾ…

ಶ್ರಾವಣ ಮಾಸದಲ್ಲಿ ನಿಮ್ಮ ಸುತ್ತಮುತ್ತಲಿನ ಈ 5 ಸ್ಥಳಗಳ ದರ್ಶನ ಮಾಡಿ: ಜೀವನದಲ್ಲಿ ಬದಲಾವಣೆ ನೋಡಿ! | Shravan

Shravan: ಶ್ರಾವಣ ಮಾಸವು ಶಿವನಿಗೆ ಸಮರ್ಪಿತವಾಗಿದೆ. ಈ ಪವಿತ್ರ ಮಾಸದಲ್ಲಿಯೇ ಶಿವನು ಪಾರ್ವತಿಯನ್ನು ವಿವಾಹವಾಗದ್ದು ಎಂದು…