More

    ಹೊಸವರ್ಷದಂದೇ ಕ್ರಿಕೆಟರ್ ಹಾರ್ದಿಕ್​ ಪಾಂಡ್ಯಾ ನಿಶ್ಚಿತಾರ್ಥ; ಇನ್ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿದ ಟೀಂ ಇಂಡಿಯಾ ಬ್ಯಾಡ್​ ಬಾಯ್​

    ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್​ ಆಟಗಾರ ಹಾರ್ದಿಕ್​ ಪಾಂಡ್ಯಾ ನಿಶ್ಚಿತಾರ್ಥ ಇಂದು ನಡೆದಿದೆ.

    ಹಾರ್ದಿಕ್​ ಪಾಂಡ್ಯಾ ಅವರು ತಮ್ಮ ಪ್ರೇಯಸಿಯ ಜತೆ ಇಂದು ನಿಶ್ಚಿತಾರ್ಥ ಮಾಡಿಕೊಂಡ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

    ಹಾರ್ದಿಕ್ ಪಾಂಡ್ಯಾ ಅವರ ಕೈ ಹಿಡಿಯಲಿರುವವರು ಸರ್ಬಿಯಾದ ನಟಿ, ಮಾಡೆಲ್​ ನತಾಶಾ ಸ್ಟಾಂಕೋವಿಕ್​. ಇವರಿಬ್ಬರೂ ಹಲವು ದಿನಗಳಿಂದಲೂ ಪ್ರೀತಿಸುತ್ತಿದ್ದರು.

    ಇಂದು ಬೆಳಗ್ಗೆ ತಾವು ನತಾಶಾ ಅವರೊಂದಿಗೆ ಇದ್ದ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದ ಹಾರ್ದಿಕ್​ ಪಾಂಡ್ಯಾ, ನಾನು ನನ್ನ ಹೊಸವರ್ಷವನ್ನು ನನ್ನ ಪಟಾಕಿಯೊಂದಿಗೆ ಪ್ರಾರಂಭಿಸುತ್ತಿದ್ದೇನೆ ಎಂದಿದ್ದರು. ಈ ಮೂಲಕ ನತಾಶಾ ಅವರನ್ನು ಸುಡುಮದ್ದಿಗೆ ಹೋಲಿಸಿದ್ದರು.

    ಅದಾದ ಬಳಿಕ ಈ ಸ್ವಲ್ಪಹೊತ್ತಿಗೆ ಮೊದಲು ಮತ್ತೊಂದು ಪೋಸ್ಟ್ ಹಾಕಿ, ನಿಶ್ಚಿತಾರ್ಥ ಆಗಿದ್ದನ್ನು ದೃಢಪಡಿಸಿದ್ದಾರೆ.
    ಬೆನ್ನುನೋವಿನಿಂದ ಬಳಲುತ್ತಿದ್ದ ಹಾರ್ದಿಕ್​ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸದ್ಯ ಸುಧಾರಿಸಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್​ನಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರವೇ ಉಳಿದಿರುವ ಹಾರ್ದಿಕ್​ ಪಾಂಡ್ಯಾ ಮುಂದಿನ ತಿಂಗಳು ನ್ಯೂಜಿಲೆಂಡ್​ನಲ್ಲಿ ನಡೆಯಲಿರುವ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts